AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬ್ಯೂವೇರಿಯಾ ಬಸ್ಸಿಯಾನಾದ ಅನುಕೂಲಗಳು ಮತ್ತು ಬಳಕೆಯನ್ನು ತಿಳಿದುಕೊಳ್ಳೋಣ
ಸಾವಯವ ಕೃಷಿಅಗ್ರೋವನ್
ಬ್ಯೂವೇರಿಯಾ ಬಸ್ಸಿಯಾನಾದ ಅನುಕೂಲಗಳು ಮತ್ತು ಬಳಕೆಯನ್ನು ತಿಳಿದುಕೊಳ್ಳೋಣ
ಬ್ಯೂವೇರಿಯಾ ಬಸ್ಸಿಯಾನಾ ಎಂಬುದು ಜಗತ್ತಿನಾದ್ಯಂತ ಮಣ್ಣಿನಲ್ಲಿ ನೈಸರ್ಗಿಕವಾಗಿ ಕಂಡುಬರುವ ಶಿಲೀಂಧ್ರವಾಗಿದೆ. ಈ ಶಿಲೀಂಧ್ರದ ಕಣಗಳು ಕೀಟದ ಚರ್ಮದೊಂದಿಗೆ ಸಂಪರ್ಕಕ್ಕೆ ಬರುತ್ತಿದ್ದಂತೆ ಸೋಂಕು ತಗಲುತ್ತದೆ ಮತ್ತು ದೇಹದಲ್ಲಿ ಹರಡುತ್ತದೆ. ಇದು ಕೀಟಗಳ ದೇಹದಲ್ಲಿ ಶಿಲೀಂಧ್ರವನ್ನು ಹರಡುತ್ತದೆ ಮತ್ತು ಒಳಗಿನ ಪೋಷಕಾಂಶದ ಮೇಲೆ ಉಳಿಯುತ್ತದೆ ಇದರಿಂದ ಕೀಟಗಳು 48 ರಿಂದ 72 ಗಂಟೆಗಳಲ್ಲಿ ಸಾಯುತ್ತವೆ.
ಬೆಳೆಗಳು: ಧಾನ್ಯಗಳು, ಬೇಳೆಕಾಳುಗಳು, ತರಕಾರಿಗಳು, ಹಣ್ಣುಗಳು_x000D_ _x000D_ ಕೀಟ ಪೀಡೆಗಳು: ಗೊಣ್ಣೆ ಹುಳು, ಎಲೆ ತಿನ್ನುವ ಕ೦ಬಳಿಹುಳು_x000D_ ಬಳಕೆ: ಗೊಣ್ಣೆ ಹುಳುವನ್ನು ನಿಯಂತ್ರಿಸಲು, ಅದನ್ನು ಮಣ್ಣಿನಲ್ಲಿ ಅಥವಾ ನೀರಿನಲ್ಲಿ ಬೆರೆಸಿ ಸಸ್ಯದ ಬೇರಿಗೆ ತಲುಪುವಂತೆ ಸುರಿಯಿರಿ. ಅಥವಾ ಬೆಳೆ ಬಿತ್ತನೆ ಮಾಡುವ ಮೊದಲು ಅಥವಾ ನಂತರ ಅದನ್ನು ಮಣ್ಣಿನಲ್ಲಿ ಬೆರೆಸಬಹುದು ಅಥವಾ ಹನಿ ನೀರಾವರಿ ಮೂಲಕ ನೀಡಬಹುದು._x000D_ _x000D_ ಬಳಕೆಯ ವಿಧಾನ: ಕೀಟಗಳ ಸಂಖ್ಯೆ ಅಥವಾ ಬೆಳೆಯನ್ನು ಅವಲಂಬಿಸಿ, ಹಸಿರುಮನೆಗಳಲ್ಲಿ ಕೀಟ ನಿರ್ವಹಣೆಗೆ ಪ್ರತಿ 15 ರಿಂದ 20 ದಿನಗಳಿಗೊಮ್ಮೆ ಇದನ್ನು ಬಳಸಬಹುದು._x000D_ _x000D_ ಪ್ರಮಾಣ: 200 ಲೀಟರ್ ನೀರಿನಲ್ಲಿ, ಪ್ರತಿ ಲೀಟರ್ ನೀರಿಗೆ 5 ಗ್ರಾಂ ಬೆರೆಸಿ ಎಕರೆಗೆ 2 ಕೆ.ಜಿ. ಪ್ರಮಾಣದಲ್ಲಿ ಸಿಂಪಡಿಸಿ._x000D_ _x000D_ ಮೂಲ: ಅಗ್ರೋವನ್_x000D_ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
193
2