AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬೆಳೆ ಕೊಯ್ಲಿನ ನಂತರದ ನಷ್ಟಗಳನ್ನು ತಡೆಗಟ್ಟುವ ಕ್ರಮಗಳು
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಬೆಳೆ ಕೊಯ್ಲಿನ ನಂತರದ ನಷ್ಟಗಳನ್ನು ತಡೆಗಟ್ಟುವ ಕ್ರಮಗಳು
ಬೆಳೆ ಕೊಯ್ಲಿನ ನಂತರ ಹೊಲಗಳಲ್ಲಿ ಉಂಟಾಗುವ ಹೆಚ್ಚಿನ ನಷ್ಟಕ್ಕೆ ಸೂಕ್ಷ್ಮಜೀವಗಳ ಸೋಂಕು ಕಾರಣವಾಗಿರುತ್ತದೆ. ಇದನ್ನು ತಡೆಗಟ್ಟಲು ಕೊಯ್ಲಿನ ನಂತರ ವಿವಿಧ ಹಂತಗಳಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಲವಾರು ತರಕಾರಿ ಬೆಳೆಗಳು ಕಟಾವಿನ ನಂತರ ಶೀಘ್ರವಾಗಿ ಕೊಳೆಯಲಾರಂಭಿಸುತ್ತದೆ. ಕಟಾವು ಮಾಡುವ ಮುನ್ನವೇ ತೆಗೆದುಕೊಳ್ಳುವ ಕೆಲವು ಕ್ರಮಗಳಿಂದ ಅದರ ಜೀವಿತಾವಧಿಯನ್ನು(ಶೆಲ್ಫ್ ಲೈಫ್) ವಿಸ್ತರಿಸುವಲ್ಲಿ ಅನುಕೂಲಕರವಾಗಿದೆ. ಈ ಕ್ರಮಗಳನ್ನು ಬೆಳೆ ಕಟಾವು ಮಾಡುವ ಮತ್ತು ನಂತರ ತೆಗೆದುಕೊಳ್ಳಬೇಕು : • ಕಟಾವು ಮಾಡಿದ ನಂತರ, ತರಕಾರಿ ಬೆಳೆಗಳು ಹಣ್ಣುಗಳ ಕೊಳೆತ ಮತ್ತು ಕಾಡಿಗೆರೋಗದಂತಹ ರೋಗಗಳಿಗೆ ತುತ್ತಾಗುತ್ತವೆ. ಇದನ್ನು ತಡೆಗಟ್ಟಲು ಕಟಾವು ಮಾಡುವ ಮುನ್ನವೇ ಸರಿಯಾದ ಸಮಯಕ್ಕೆ ಶಿಫಾರಸ್ಸು ಮಾಡಲಾದ ಶಿಲಿಂಧ್ರನಾಶಕವನ್ನು ಸಿಂಪಡಿಸಬೇಕು. • ಕಟಾವು ಮಾಡುವ ಸಮಯದಲ್ಲಿ ಹಣ್ಣುಗಳು ಒಂದಕ್ಕೊಂದು ಉಜ್ಜಿಕೊಳ್ಳದಂತೆ ನೋಡಿಕೊಳ್ಳಿ. ಇದರಿಂದ ಹಣ್ಣುಗಳಿಗೆ ಪೆಟ್ಟಾಗುತ್ತದೆ ಮತ್ತು ಸೂಕ್ಷ್ಮಜೀವಿಗಳ ಸೋಂಕಿಗೆ ಒಳಗಾಗುತ್ತದೆ. • ತರಕಾರಿಗಳ ಕಟಾವನ್ನು ಸಾಧ್ಯವಾದಷ್ಟು ಮುಂಜಾನೆಯ ಸಮಯದಲ್ಲಿ ಮಾಡಿ. ಕಟಾವು ಮಾಡಿದ ನಂತರ ತರಕಾರಿಗಳನ್ನು ಶೀತಲ ಶೇಖರಣೆಯಲ್ಲಿ (ಕೋಲ್ಡ್ ಸ್ಟೋರೇಜ್) ಸಂಗ್ರಹಿಸಿಡುವ ಮೊದಲು ಅದನ್ನು ತಂಪಾಗಿಸಬೇಕು. ಮುಂಚಿತವಾಗಿ ತಂಪು ಮಾಡುವುದರಿಂದ ಸೂಕ್ಷ್ಮಜೀವಿಗಳ ಕಾರ್ಯಕ್ಷಮತೆಯು ಕುಂದುತ್ತದೆ. ಶೇಖರಣೆ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಜಾಗರೂಕತೆಯ ಕ್ರಮಗಳು: • ಶೇಖರಣೆಯ ಮೊದಲು ಹಣ್ಣುಗಳು ಮತ್ತು ತರಕಾರಿಗಳನ್ನು ವರ್ಗೀಕರಿಸಬೇಕು. ಕೀಟ ಬಾಧೆಗೆ ಒಳಪಟ್ಟ ಬೆಳೆಯನ್ನು ಮತ್ತು ಅತಿ ಮಾಗಿರುವ ಬೆಳೆಯನ್ನು ಬೇರ್ಪಡಿಸಬೇಕು. ಇದು ಸೋಂಕನ್ನು ಒಳ್ಳೆಯ ಗುಣಮಟ್ಟದ ಇಳುವರಿಗೆ ತಗುಲುವುದನ್ನು ತಪ್ಪಿಸುತ್ತದೆ. • ಒಂದು ವೇಳೆ ತರಕಾರಿಗಳನ್ನು ತಾತ್ಕಾಲಿಕವಾಗಿ ಸಂಗ್ರಹಿಸಬೇಕಾಗಿದ್ದರೆ, ಶೀತಲ ಹೊಂಡ (ಕೋಲ್ಡ್ ಪಿಟ್) ಬಳಸಿ. ಶೀತಲ ಹೊಂಡವು ತರಕಾರಿಗಳ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ, ಹಾಗಾಗಿ ಹಣ್ಣುಗಳ ಜೈವಿಕ ಪ್ರಕ್ರಿಯೆಗಳಾದ ಆವಿಯಾಗುವಿಕೆ ,ಉಸಿರಾಟ ಮತ್ತು ಮಾಗುವಿಕೆ ನಿಧಾನವಾಗುತ್ತದೆ. ಇದರ ಕಾರಣ, ಕಟಾವು ಮಾಡಿದ ನಂತರ 5-6 ದಿನಗಳವರೆಗೆ ಬೆಳೆ ಇಳುವರಿಯು ಹಾಳಾಗುವುದಿಲ್ಲ. • ಕೆಲವು ಬೆಳೆಗಳನ್ನು ಶೀತಲ ಉಷ್ಣಾಂಶದಲ್ಲಿರಿಸಿದಾಗ ಅದಕ್ಕೆ ಪೆಟ್ಟಾಗುತ್ತದೆ. ಇದು ಸೂಕ್ಷ್ಮಜೀವಿಗಳ ಸೋಂಕು ಮತ್ತು ಕೊಳೆತಕ್ಕೆ ಕಾರಣವಾಗುತ್ತದೆ. ಈ ರೀತಿಯ ತರಕಾರಿಗಳನ್ನು 37-42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಶೇಖರಿಸಿಡಬೇಕು. ಇದು ರೋಗಗಳ ವಿರುದ್ಧ ತಮ್ಮ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ಯಾಕಿಂಗ್ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಜಾಗರೂಕ ಕ್ರಮಗಳು: • ಬೆಳೆ ಇಳುವರಿಯ ಪ್ಯಾಕಿಂಗ್ ಗಾಗಿ ಬಳಸುವ ಡಬ್ಬಿಗಳು ಸಾಕಾಷ್ಟು ಮುಕ್ತ ವಾಯು ಸಂಚಾರವನ್ನು ಹೊಂದಿರಬೇಕು. ಇಲ್ಲವಾದಲ್ಲಿ, ಒಳಗಿನ ಉಷ್ಣಾಂಶ ಹೆಚ್ಚುತ್ತದೆ ಮತ್ತು ಇಳುವರಿಯು ಶೀಘ್ರವಾಗಿ ಮಾಗಲಾರಂಭಿಸುತ್ತದೆ. ಒಂದು ವೇಳೆ ಇಳುವರಿ ಕೂಡ ಒಂದರ ಮೇಲೊಂದು ಜೋಡಿಸಿದರೆ, ಕೆಳಗಿನ ಭಾಗದ ಇಳುವರಿಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದಾಗಿ, ಹಣ್ಣಿನ ಒಳಭಾಗಗಲ್ಲಿ ಪೆಟ್ಟಾಗುತ್ತದೆ. ಆದ್ದರಿಂದ ಸಾಗಾಣಿಕೆಗಾಗಿ, ಒಂದರ ಮೇಲೊಂದು ಹಲಗೆಗಳು ಇರುವ ಒಳ್ಳೆಯ ಮುಕ್ತ ವಾಯು ಸಂಚಾರವಿರುವ ಕ್ರೆಟ್ಸ್ಗಳನ್ನು ಬಳಸಿ. • ಬೆಳೆ ಇಳುವರಿಯನ್ನು ಪ್ಯಾಕ್ ಮಾಡುವಾಗ, ಎಥಿಲೀನ್ ವಿರೋಧಿ, ಇಂಗಾಲದ ಡೈಆಕ್ಸೈಡ್ ವಿರೋಧಿ ವಸ್ತುಗಳನ್ನು ಬಳಸಿ • ಬೆಳೆ ಇಳುವರಿಯನ್ನು ಸಾಗಿಸುವಾಗ ವಾಯು ನಿಯಂತ್ರಿತ ವಾಹನಗಳನ್ನು ಬಳಸಿ.
ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
4
0