ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಬೆಳೆಗಳಲ್ಲಿ ಇಲಿಗಳ ಪರಿಣಾಮಕಾರಿ ನಿಯಂತ್ರಣ ಪರಿಚಯ:
ಅನೇಕ ಬೆಳೆಗಳಲ್ಲಿ, ತರಕಾರಿಗಳು, ಎಣ್ಣೆಕಾಳುಗಳು, ಸಿರಿಧಾನ್ಯಗಳಲ್ಲಿ ಆರಂಭಿಕ ಹಂತದಲ್ಲಿ ಇಲಿಗಳು ಬೆಳೆಗೆ ಬಾಧೆಯನ್ನುಂಟು ಮಾಡುತ್ತದೆ. ಪ್ಲೇಗ್, ಲೆಪ್ಟೊಸ್ಪಿರೋಸಿಸ್ ಮುಂತಾದ ಸಾರ್ವಜನಿಕ ಆರೋಗ್ಯ ಕಾಯಿಲೆಗಳನ್ನು ಹರಡುವಿಕೆಯಿಂದ ಮನುಷ್ಯರಿಗೆ ಮತ್ತು ಇತರ ಪ್ರಾಣಿಗಳಿಗೆ ಹಾನಿಯನ್ನುಂಟುಮಾಡುತ್ತವೆ. ಬೆಳೆ ಹಾನಿಯ ಲಕ್ಷಣಗಳು ಮತ್ತು ಪರಿಹಾರಗಳ ವಿವರಗಳನ್ನು ಕೆಳಗೆ ನೀಡಲಾಗಿದೆ._x000D_ ಲಕ್ಷಣಗಳು:_x000D_ ಇಲಿಗಳು ಬೆಳೆಗಳು ಮತ್ತು ಉಗ್ರಾಣಗಳಲ್ಲಿ ಸಹ ಧಾನ್ಯಗಳನ್ನು ಹಾನಿಗೊಳಿಸುತ್ತವೆ. ಹೊಲಗಳಲ್ಲಿ, ನೀರಾವರಿ ಮತ್ತು ಇತರ ಸ್ಥಳಗಳಲ್ಲಿ ಬಿಲಗಳನ್ನು ಕಂಡರೆ ಇಲಿಯ ಉಪಸ್ಥಿತಿಯನ್ನು ಕಾಣಬಹುದು. ಬೆಳೆಗೆ ಹಾಯಿಸಿದ ನೀರು ಬಿಲದಲ್ಲಿ ಹೋಗುವದರಿಂದ ಮಣ್ಣಿನ ಮೇಲೆ ಪಾಚಿ ಬೆಳೆದು ಉಳುಮೆಗಾಗಿ ಮಾಡುವ ವೆಚ್ಚ ಹೆಚ್ಚಾಗುತ್ತದೆ. ಬದು ಮತ್ತು ನೀರಿನ ಕಾಲುವೆಯನ್ನು ಯಾವಾಗಲೂ ಸರಿಪಡಿಸಬೇಕು. ಕಬ್ಬು, ಗೋಧಿ, ಕಡಲೆ, ಅರಿಶಿನ, ಶುಂಠಿ, ಭತ್ತ, ನೆಲಗಡಲೆ ಮುಂತಾದ ಬೆಳೆಗಳಲ್ಲಿ ಇಲಿಗಳ ಬಾಧೆಯು ವ್ಯಾಪಕವಾಗಿ ಕಂಡುಬರುತ್ತದೆ._x000D_ ನಿಯಂತ್ರಣ:_x000D_ ಯಾವುದೇ ಬೆಳೆಯಲ್ಲಿ, ಇಲಿ ವಿಷಮುಕ್ತ ಪಾಷಾಣ ತಯಾರಿಸಲು ಸತುವೀನ ಫಾಸ್ಫೈಡನ್ನು ಬಳಸಬೇಕು, ಮೊದಲು, ಹಿಟ್ಟಿನ ಮುದ್ದೆಯನ್ನು ತಯಾರಿಸಿ ಅದಕ್ಕಾಗಿ ೧೦೦ ಗ್ರಾಂ ಗೋಧಿ ಹಿಟ್ಟು, 2 ಗ್ರಾಂ ಎಣ್ಣೆ ಮತ್ತು 3 ಗ್ರಾಂ ಬೆಲ್ಲದೊಂದಿಗೆ ಬೇರೆಸಿ. 1 ಗ್ರಾಂ ಸತುವೀನ ಫಾಸ್ಫೈಡ್, ಕೈಗವಚಗಳನ್ನು ಹಾಕಿಕೊಂಡು ಅಥವಾ ಕೋಲಿನಿಂದ ಮಿಶ್ರಣ ಮಾಡಿ. ಆವಾಗ ಇಲಿಗಳು ಅದನ್ನು ತಿನ್ನಲು ರೂಢಿಸಿಕೊಳ್ಳುತ್ತವೆ ತದನಂತರ ಮುದ್ದೆಗಳನ್ನು 2-5 ದಿನಗಳವರೆಗೆ ಇಲಿಯ ಬಿಲದ ಹತ್ತಿರ ಇರಿಸಿ, ಆದ್ದರಿಂದ ಇಲಿಗಳಿಗೆ ಇದು ತಿನ್ನುವ ರೂಢಿಯಾದ ನಂತರ ಸತು ಫಾಸ್ಫೈಡ್ ಸೇರಿಸಿದ ಪಾಷಾಣವನ್ನು ಇಲಿಯ ಬಿಲದ ಹತ್ತಿರ ಇರಿಸಬೇಕು,ಆಗ ವಿಷಪಾಷಾಣ ತಿಂದು ಸಾಯುತ್ತವೆ._x000D_ ಮೂಲ: ಅಗೋಸ್ಟಾರ್ ಅಗ್ರೋನೋಮಿ ಸೆಂಟರ್ ಆಫ್ ಎಕ್ಸಲೆನ್ಸ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
484
2
ಇತರ ಲೇಖನಗಳು