AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬೆಳಗಳಲ್ಲಿ ಪರಭಕ್ಷಕ ಪಕ್ಷಿಗಳಿಗೆ ಉತ್ತೇಜಿಸಿ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಬೆಳಗಳಲ್ಲಿ ಪರಭಕ್ಷಕ ಪಕ್ಷಿಗಳಿಗೆ ಉತ್ತೇಜಿಸಿ
ಪಕ್ಷಿಗಳು ವಿವಿಧ ಬೆಳೆಗಳನ್ನು ಹಾನಿಗೊಳಿಸಬಹುದು ಆದರೆ ಕೀಟಗಳ ನಿರ್ವಹಣೆಗೆ ಅವುಗಳು ದೊಡ್ಡ ಪ್ರಮಾಣದಲ್ಲಿ ಕೀಟಗಳ ಮರಿಹುಳುಗಳನ್ನು ನಿರ್ವಹಣೆ ಮಾಡುವಲ್ಲಿ ಸಹಾಯಕವಾಗಿವೆ. ಕೆಲವು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ಈ ಹಾನಿಯನ್ನು
ತಪ್ಪಿಸಬಹುದು. ಭಾರತದಲ್ಲಿ ಒಟ್ಟು 1300 ಜಾತಿಯ ಪಕ್ಷಿಗಳು ದಾಖಲಾಗಿವೆ. ಪರಭಕ್ಷಕ ಪಕ್ಷಿಗಳಲ್ಲಿ, ಜಾನುವಾರು ಎಗ್ರೆಟ್, ಬ್ಲ್ಯಾಕ್ ಡ್ರೊಂಗೊ, ಮೈನಾ, ವಾಗ್ಟೇಲ್, ಕಾಗೆಗಳು ಇತ್ಯಾದಿಗಳು ಪ್ರಮುಖ ಮತ್ತು ಪ್ರಮುಖ ಪಕ್ಷಿಗಳಾಗಿವೆ._x000D_ _x000D_ ಸುಮಾರು 20 ವಿವಿಧ ಜಾತಿಯ ಪಕ್ಷಿಗಳು ಮರಿಹುಳುಗಳು ಮತ್ತು ಕೀಟಗಳನ್ನು ತಮ್ಮ ಆಹಾರವಾಗಿ ಭಕ್ಷೀಸುತ್ತವೆ. ಕೆಲವು ಪರಭಕ್ಷಕ ಪಕ್ಷಿಗಳು ವಿವಿಧ ಬೆಳೆಗಳಲ್ಲಿ ಸಸ್ಯಹೇನು, ದುಂಬಿಗಳು,ಮಿಡತೆಗಳು ಮತ್ತು ವಿವಿಧ ಎಲೆ ತಿನ್ನುವ ಮರಿಹುಳುಗಳು, ತರಕಾರಿಗಳು ಮತ್ತು ಹೊಲದ ಬೆಳೆಗಳಿಗೆ ಹಾನಿ ಮಾಡುವ ಪತಂಗಗಳನ್ನು ಭಕ್ಷೀಸುತ್ತವೆ. ಔಡಲ ಮತ್ತು ನೆಲಗಡಲೆಗೆ ಹಾನಿಕಾರಕ ಎಲೆ ತಿನ್ನುವ ಮರಿಹುಳುಗಳನ್ನು ಹತೋಟಿ ಮಾಡಲು ಪಕ್ಷಿಗಳ ಕೊಡುಗೆ ಗಮನಾರ್ಹವಾಗಿದೆ. ಇದಲ್ಲದೆ, ಅವರು ಗೊಣ್ಣೆಹುಳುಗಳನ್ನು ಸಹ ತಿನ್ನುತ್ತವೆ ಮತ್ತು ಅವುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತವೆ. ಪಕ್ಷಿಗಳ ಆಹಾರದಲ್ಲಿ ಸುಮಾರು 50% ವಿಭಿನ್ನ ಮರಿಹುಳುಗಳನ್ನು ಒಳಗೊಂಡಿದೆ. ಮಾಂಸಾಹಾರಿ ಪಕ್ಷಿಗಳನ್ನು ಸಂರಕ್ಷಿಸುವುದು ಮತ್ತು ನಿರ್ವಹಿಸುವುದು ಬಹಳ ಮುಖ್ಯ._x000D_ _x000D_ ಪರಭಕ್ಷಕ ಪಕ್ಷಿಗಳನ್ನು ತಮ್ಮ ಹೊಲಗಳಲ್ಲಿ ಬರುವ ಹಾಗೆ ಹೇಗೆ ಪ್ರೋತ್ಸಾಹಿಸಬೇಕು?_x000D_ _x000D_  ಹೆಚ್ಚಿನ ಪಕ್ಷಿಗಳು ಮರಗಳ ಪೊದೆಗಳಲ್ಲಿ ಗೂಡುಗಳನ್ನು ಕಟ್ಟುತ್ತವೆ. ನೈಸರ್ಗಿಕವಾಗಿ ಗೂಡುಕಟ್ಟುವ ತಾಣಗಳು ಲಭ್ಯವಿಲ್ಲದಿದ್ದರೆ, ಕೃತಕ ಗೂಡುಗಳು / ಗೂಡಿನ ಪೆಟ್ಟಿಗೆಗಳನ್ನು ಮರಗಳು ಅಥವಾ ಕಂಬಗಳ ಮೇಲೆ ಅಥವಾ ಜಮೀನಿನಲ್ಲಿರುವ ಕಟ್ಟಡಗಳ ಮೇಲೆ ಇರಿಸಿ._x000D_ _x000D_  ಹೊಲಗಳ ಬದುಗಳಲ್ಲಿರುವ ಮರಗಳು ಅನೇಕ ಪಕ್ಷಿಗಳನ್ನು ಆಕರ್ಷಿಸುತ್ತವೆ. ಆದ್ದರಿಂದ, ಅಂತಹ ಮರಗಳನ್ನು ಕತ್ತರಿಸಬೇಡಿ, ಆದರೆ ಮರಗಳನ್ನು ಸಂರಕ್ಷಿಸಿ ಮತ್ತು ಇತರ ಮರಗಳನ್ನು ಬೆಳೆಸಿ._x000D_ _x000D_  ಹೊಲದಲ್ಲಿ ಪಕ್ಷಿಗಳ ಆಹಾರ ಪದಾರ್ಥಗಳಾದ, ಮಂಡಾಳ, ಕಡಲೆಗಳನ್ನು ಚೆಲ್ಲಬೇಕು._x000D_ _x000D_  ಪರಭಕ್ಷಕ ಪಕ್ಷಿಗಳನ್ನು ಆಕರ್ಷಿಸಲು ಹೊಲದಲ್ಲಿ ಹಕ್ಕಿಯ ಕೃತಕ ಗೊಂಬೆಯನ್ನು ಸ್ಥಾಪಿಸಬೇಕು._x000D_ _x000D_  ಪಕ್ಷಿಗಳಿಗೆ ಕುಳಿತುಕೊಳ್ಳಲು, ಟಿ-ಆಕಾರದ ಪಕ್ಷಿ ತಾಣ ಅಥವಾ ಮರದ ತುಂಡುಗಳಿಂದ ಮಾಡಿದ ಪಕ್ಷಿ ತಾಣಗಳನ್ನು ಸ್ಥಾಪಿಸಿ ಅಥವಾ ಹೊಲದಲ್ಲಿ ಹಗ್ಗವನ್ನು ಕಟ್ಟುವುದರ ಮೂಲಕ ಪಕ್ಷಿಗಳನ್ನು ಪ್ರೋತ್ಸಾಹಿಸಿ._x000D_ _x000D_  ಹೆಚ್ಚಿನ ಸಂಖ್ಯೆಯ ಪರಭಕ್ಷಕ ಪಕ್ಷಿಗಳನ್ನು ಪ್ರೋತ್ಸಾಹಿಸಲು ಮತ್ತು ಕೀಟ ಹತೋಟಿಯನ್ನು ಹೆಚ್ಚಿಸಲು ಕೃಷಿ ಚಟುವಟಿಕೆಗಳನ್ನು ಅನುಸರಿಸಬೇಕಾಗಿದೆ._x000D_ _x000D_  ಆಹಾರಗಳನ್ನು ಹುಡುಕುವಲ್ಲಿ ಪಕ್ಷಿಗಳು ಬೆಳಿಗ್ಗೆ ಮತ್ತು ಸಂಜೆ ಬಹಳ ಸಕ್ರಿಯವಾಗಿರುತ್ತವೆ. ಹೀಗಾಗಿ, ಕೃಷಿ ಚಟುವಟಿಕೆಗಳಾದ ನೀರಾವರಿ, ಕೊಯ್ಲು ಮಾಡುವುದು, ಉಳುಮೆ ಮತ್ತು ಇತರ ಕೃಷಿ ಚಟುವಟಿಕೆಗಳನ್ನು ಅವುಗಳ ಆಹಾರ ಭಕ್ಷಣೆ ಸಮಯದಲ್ಲಿ ಮಾಡಬೇಕು. ಅಂತಹ ಕೃಷಿ ಚಟುವಟಿಕೆಗಳನ್ನು ಮಾಡುವ ಮೂಲಕ, ಪಕ್ಷಿ ಮಣ್ಣಿನಲ್ಲಿ ಅಡಗಿಕೊಂಡಿರುವ ಮರಿಹುಳುಗಳು / ಕೋಶಾವಸ್ಥೆಗಳನ್ನು ಸುಲಭವಾಗಿ ಆಯ್ದು ತಿನ್ನಬಹುದು._x000D_ _x000D_  ಹೊಲದಲ್ಲಿಯೇ ಪಕ್ಷಿಗಳಿಗೆ ಕುಡಿಯುವ ನೀರನ್ನು ವ್ಯವಸ್ಥೆಯನ್ನು ಮಾಡಿ._x000D_ _x000D_ ಮೂಲ: ಆಗ್ರೊಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್_x000D_ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳಿನ ಗುರುತು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ._x000D_
481
0