AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬೀಜಾಮೃತ ತಯಾರಿಕೆ
ಸಾವಯವ ಕೃಷಿಶ್ರೀ ಸುಭಾಷ್ ಪಾಲೇಕರ್ ಅವರ ಝೀರೋ ಬಜೆಟ್ ಕೃಷಿ
ಬೀಜಾಮೃತ ತಯಾರಿಕೆ
ಸಸ್ಯಗಳು, ಮೊಳಕೆ ಅಥವಾ ಬಿತ್ತನೆ ಮಾಡುವ ಬೀಜಗಳಿಗೆ ಮಾಡುವ ಬೀಜೋಪಚಾರದ ದ್ರಾವಣಕ್ಕೆ ಬೀಜಾಮೃತ ಎನ್ನಲಾಗುತ್ತದೆ. ಮಾನ್ಸೂನ್ ಅವಧಿಯ ನಂತರ ಬೆಳೆಗಳ ಮೇಲೆ ಹೆಚ್ಚಾಗಿ ಸೋಂಕು ತಗಲುವ ಮಣ್ಣಿನಿಂದ ಮತ್ತು ಬೀಜದಿಂದ ಹರಡುವ ರೋಗಗಳ ಜೊತೆಗೆ ಶಿಲೀಂಧ್ರದಿಂದ ಹೊಸ ಬೇರುಗಳನ್ನು ಸಂರಕ್ಷಿಸುವಲ್ಲಿ ಇದು ಪರಿಣಾಮಕಾರಿಯಾಗಿದೆ. ಇದನ್ನು ಜೀವಾಮೃತ ತಯಾರಿಸುವ ಸಾಮಗ್ರಿಗಳಿಂದ ತಯಾರಿಸಲಾಗುತ್ತದೆ: 20 ಲೀಟರ್ ನೀರು, 5 ಕೆಜಿ ದೇಶಿ ಹಸುವಿನ ಸಗಣಿ, 5 ಲೀಟರ ದೇಶಿ ಹಸುವಿನ ಮೂತ್ರ, 50 ಗ್ರಾಂ ಸುಣ್ಣ ಮತ್ತು ಬದು ಗಳಿಂದ ಒಂದು ಬೊಗಸೆ ಮಣ್ಣನ್ನು ತೆಗೆದುಕೊಳ್ಳಿ. ತಯಾರಿಸುವ ವಿಧಾನ: ● 5 ಕೆ.ಜಿ ದೇಸಿ ಹಸುವಿನ ಸೆಗಣಿಯನ್ನು ಒಂದು ಬಟ್ಟೆಯಲ್ಲಿ ಮೂಟೆ ಕಟ್ಟಿ. ಇದನ್ನು 20 ಲೀಟರ್ ನೀರಿನಲ್ಲಿ 12 ಗಂಟೆಗಳ ಕಾಲ ಇಳಿಬಿಡಬೇಕು. ● ಒಂದು ಲೀಟರ್ ನೀರಿಗೆ 50 ಗ್ರಾಂ ಸುಣ್ಣವನ್ನು ಬೆರೆಸಿ, ಇದನ್ನು ರಾತ್ರಿ ಪೂರ್ತಿ ನೆನೆಯಲು ಬಿಡಿ. ● ಮರುದಿನ ಬೆಳಿಗ್ಗೆ, ಹಸುವಿನ ಸಗಣಿಯ ಮೂಟೆಯನ್ನು ಮೂರು ಬಾರಿ ನೀರಿನಲ್ಲಿ ಚೆನ್ನಾಗಿ ಕುಲುಕಿಸಿ, ಇದರಿಂದ ಸಗಣಿಯ ಸತ್ವವು ಆ ನೀರಿನಲ್ಲಿ ಸಂಗ್ರಹವಾಗುತ್ತದೆ.. ● ತಯಾರಿಸಿದ ನೀರಿನ ದ್ರಾವಣದಲ್ಲಿ ಸ್ವಲ್ಪ ಮಣ್ಣನ್ನು ಸೇರಿಸಿ ಮತ್ತು ಅದನ್ನು ಚೆನ್ನಾಗಿ ಕುಲುಕಿಸಿ. ● ಕೊನೆಯದಾಗಿ ತಯಾರಿಸಿದ ದ್ರಾವಣದಲ್ಲಿ 5 ಲೀಟರ್ ದೇಶಿ ಹಸುವಿನ ಮೂತ್ರ ಅಥವಾ ಮಾನವ ಮೂತ್ರವನ್ನು ಸೇರಿಸಿ ಮತ್ತು ಸುಣ್ಣದ ನೀರನ್ನು ಸೇರಿಸಿ ಚೆನ್ನಾಗಿ ಕಲುಕಿರಿ.
ಬೀಜಾಮೃತ ಬಳಸುವಿಕೆ: ಬೀಜಾಮೃತವನ್ನು ಯಾವುದೇ ಬೆಳೆಗಳ ಬೀಜಗಳಿಗೆ ಬೀಜೋಪಚಾರಕ್ಕಾಗಿ ಬಳಸಿ. ಬೀಜಗಳಿಗೆ ಹಚ್ಚಿ ಕೈಯಿಂದ ಚೆನ್ನಾಗಿ ಕಲಸಿ; ಚೆನ್ನಾಗಿ ಒಣಗಿಸಿ ಮತ್ತು ಬಿತ್ತನೆಗಾಗಿ ಬಳಸಿ. ದ್ವಿದಳ ಧಾನ್ಯದ ಬೀಜಗಳನ್ನು, ಅದ್ದಿ ಮತ್ತು ಒಣಗಿಸಿ. ಮೂಲ: ಶ್ರೀ ಸುಭಾಷ್ ಪಾಲೇಕರ್ ಅವರ ಝೀರೋ ಬಜೆಟ್ ಕೃಷಿ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
818
0