ಕೀಟಗಳ ಜೀವನ ಚಕ್ರICAR-DIRECTORATE OF GROUNDNUT RESEARCH
ಬಿಳಿ ಗೊಣ್ಣೆ ಹುಳುವಿನ ಜೀವನ ಚಕ್ರದ ಮಾಹಿತಿ
ಇದು ಬಹು ಭಕ್ಷಕ ಕೀಟವಾಗಿದ್ದು, ಮುಖ್ಯವಾಗಿ ಪ್ರಮುಖ ಬೆಳೆಗಳಾದ ಕಬ್ಬು ಮತ್ತು ನೆಲಗಡಲೆಗೆ ಬಾಧಿಸುತ್ತದೆ. ಬಿಳಿ ಗೊಣ್ಣೆ ಹುಳುವಿನಲ್ಲಿ ಎರಡು ಪ್ರಭೇದಗಳಿವೆ, ಅಂದರೆ ಹೊಲೊಟ್ರಿಚಿಯಾ ಕಾನ್ಸಾಂಗುನಿಯಾ ಮತ್ತು ಹೊಲೊಟ್ರಿಚಿಯಾ ಸೆರಾಟಾ ಪ್ರಮುಖ ಬೆಳೆಗಳಾದ ಕಬ್ಬು, ತೆಂಗಿನಕಾಯಿ, ಅಡಿಕೆ, ತಂಬಾಕು, ಆಲೂಗಡ್ಡೆ ಮತ್ತು ಇತರ ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು ಮತ್ತು ತರಕಾರಿ ಇತ್ಯಾದಿಗಳನ್ನು ಬಾಧಿಸುತ್ತವೆ. ಬಿಳಿ ಗೊಣ್ಣೆ ಹುಳು , ಹೊಲೊಟ್ರಿಚಿಯಾ ಕಾನ್ಸಾಂಗುನಿಯಾ ತನ್ನ ಜೀವನ ಚಕ್ರವನ್ನು 76-96 ದಿನಗಳಲ್ಲಿ ಪೂರ್ಣಗೊಳಿಸುತ್ತದೆ. ಮೊಟ್ಟೆಯ ಅವಧಿ 8-10 ದಿನಗಳು, ಮರಿಹುಳು ಅವಧಿ 56-70 ದಿನಗಳು ಮತ್ತು ಕೋಶಾವಸ್ಥೆ ಅವಧಿ 12-16 ದಿನಗಳು, ಆದರೆ ಹೋಲೊಟ್ರೈಕಿಯಾ ಸೆರಾಟಾ ತನ್ನ ಜೀವನ ಚಕ್ರವನ್ನು 141-228 ದಿನಗಳಲ್ಲಿ ಪೂರ್ಣಗೊಳಿಸುತ್ತದೆ, ಇದರಲ್ಲಿ ಮೊಟ್ಟೆ, ಮರಿಹುಳು ಮತ್ತು ಕೋಶಾವಸ್ಥೆ ಅವಧಿಗಳು, ಕ್ರಮವಾಗಿ 10-12, 121-202 ಮತ್ತು 10-14 ದಿನಗಳಾಗಿರುತ್ತದೆ. ಗೊಣ್ಣೆ ಹುಳುಗಳು ಮಳೆಗಾಲದಲ್ಲಿ (ಜುಲೈ-ಅಕ್ಟೋಬರ್) ತಮ್ಮ ಎರಡನೇ, ಮೂರನೇ ಮತ್ತು ನಾಲ್ಕನೇ ಹಂತದ ಮರಿಹುಳುಗಳು ಸಕ್ರಿಯವಾಗಿರುತ್ತವೆ ಮತ್ತು ಸಸ್ಯಗಳ ಜೀವಂತ ಬೇರುಗಳೊಂದಿಗೆ ಸಂಪರ್ಕಕ್ಕೆ ಬರುವವರೆಗೂ ಸಾವಯವ ಪದಾರ್ಥಗಳನ್ನು ತಿನ್ನುತ್ತವೆ. ಮೊಟ್ಟೆಗಳು ಬಿಳಿ ಮತ್ತು ದುಂಡಗಿನ ಆಕಾರದಲ್ಲಿರುತ್ತವೆ. ಪ್ರಾಥಮಿಕ ಹಂತದ ಬಿಳಿ ಗೊಣ್ಣೆ ಹುಳುವಿನ ದೇಹವು ಅರೆಪಾರದರ್ಶಕ. ಆದರೆ ಪ್ರಬುದ್ಧ ಬಿಳಿ ಗೊಣ್ಣೆ ಹುಳುಗಳು ಮಸುಕಾದ ಬಣ್ಣದಲ್ಲಿರುತ್ತವೆ ಮತ್ತು ಅರೆ ವೃತ್ತ ಆಕಾರದಲ್ಲಿರುತ್ತವೆ. ಕೋಶಾವಸ್ಥೆ ಮೊದಲು ಗೊಣ್ಣೆ ಹುಳುವೀನ ಮರಿಹುಳುಗಳು ಆಹಾರ ತಿನ್ನುವುದನ್ನು ನಿಲ್ಲಿಸುತ್ತದೆ. ಕೋಶಾವಸ್ಥೆಗಾಗಿ ಒಂದು ಮಣ್ಣಿನಲ್ಲಿ ಪೂರ್ವ- ಕೋಶಾವಸ್ಥೆಯಲ್ಲಿ ಹುಳುವು ಮಣ್ಣಿನ ಸಹಾಯದಿಂದ ತನ್ನ ಜೊಲ್ಲನ್ನು ಉಪಯೋಗಿಸಿ ಕೊಂಡು ಕೋಶಾವಸ್ಥೆಯ ಕವಚವನ್ನು ತಯಾರಿಸಲು ಸ್ವಲ್ಪ ಅವಧಿಯನ್ನು ತೆಗೆದುಕೊಳ್ಳುತ್ತದೆ.ಮಣ್ಣಿನಲ್ಲಿ 40-70 ಸೆಂ.ಮೀ ಆಳಕ್ಕೆ ಹೋಗಿ ಕೋಶಾವಸ್ಥೆಯಲ್ಲಿರುತ್ತದೆ. ಮಾನ್ಸೂನ್ ಮಳೆ ಬರುವವರೆಗೂ ದುಂಬಿಗಳುಗಳು ಸುಮಾರು ಒಂದು ಮೀಟರ್ ಆಳದಲ್ಲಿ ಸ್ತೂಪತಾವಸ್ಥೆಯಲ್ಲಿ ಮಣ್ಣಿನಲ್ಲಿ ಉಳಿಯುತ್ತವೆ. ಈ ಕಾರಣದಿಂದಾಗಿ ಇದನ್ನು ಜೂನ್ ದುಂಬಿ ಎಂದೂ ಕರೆಯುತ್ತಾರೆ. ಎಲ್ಲಾ ಜಾತಿಯ ಬಿಳಿ ಗೊಣ್ಣೆಹುಳುಗಳು ನೆಲಗಡಲೆ ಮೇಲೆ ಸಕ್ರಿಯ ಮರಿಹುಳು ಸ್ತೂಪತಾವಸ್ಥೆ ಹಂತದೊಂದಿಗೆ ವರ್ಷಕ್ಕೆ ಒಂದೇ ಪೀಳಿಗೆಯನ್ನು ಮುಂದುವರಿಸುತ್ತವೆ. ನಿರ್ವಹಣೆ: ಆಳವಾದ ಬೇಸಿಗೆ ಉಳುಮೆಯಿಂದಾಗಿ ಕೋಶಾವಸ್ಥೆಗಳು ಭೂಮಿಯಿಂದ ಮೇಲೆ ಬರುತ್ತವೆ ಮತ್ತು ಪಕ್ಷಿಗಳ ಪರಭಕ್ಷಣೆ ಹಾಗು ಸೂರ್ಯನ ಕಿರಣಗಳಿಂದ ಕೋಶಾವಸ್ಥೆಗಳು ಸಾಯುತ್ತವೆ. ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರಗಳನ್ನು ಬಳಸಿ. ಜೋಳ ಮತ್ತು ಮುತ್ತು ರಾಗಿ ಜೊತೆ ಬೆಳೆ ಪಲ್ಲಟನೆ. ಮಾನ್ಸೂನ್ ಮಳೆ ಬಂದ ನಂತರ ಬೆಳಕಿನ ಬಲೆಗಳನ್ನು ಪ್ರತಿ ಹೆಕ್ಟೇರಿಗೆ 7 ಗಂಟೆಯ ಯಿಂದ 10 ಗಂಟೆಯ ನಡುವೆ ಇರಿಸಬೇಕು. ಮೂಲ: ಭಾ.ಕೃ.ಅ.ಸಂ-ಭಾರತೀಯ ಸಂಶೋಧನಾ ಕೇಂದ್ರ-ನೆಲಗಡಲೆ. ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಇದನ್ನು ಲೈಕ್ ಮಾಡಿ ಮತ್ತು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
4
0
ಕುರಿತು ಪೋಸ್ಟ್