AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಬದನೆಯಲ್ಲಿ ಕುಡಿ ಮತ್ತು ಹಣ್ಣಿನ  ಕೊರಕ ಸಮಗ್ರ ಕೀಟ ನಿರ್ವಹಣೆ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಬದನೆಯಲ್ಲಿ ಕುಡಿ ಮತ್ತು ಹಣ್ಣಿನ ಕೊರಕ ಸಮಗ್ರ ಕೀಟ ನಿರ್ವಹಣೆ
 ರೋಗ ನಿರೋಧಕ ತಳಿಗಳನ್ನು ಸಸಿ ಮಡಿಗಾಗಿ ಬಳಸಿ.  ಬದನೆಕಾಯಿಯಲ್ಲಿ ಕುಡಿ ಮತ್ತು ಹಣ್ಣಿನ ಕೊರಕದಿಂದಾಗುವ ಹಾನಿಯನ್ನು ಕಡಿಮೆ ಮಾಡಲು ಎಲೆಗಳ ತುದಿಗಳಿಗೆ ಕ್ಲಿಪ್ ಅನ್ನು ಹಚ್ಚಿ. ಹೊಲಗಳಲ್ಲಿ, ಎಕರೆಗೆ 10-12 ಮೋಹಕ ಬಲೆಗಳನ್ನು ಬಳಸಿ. ಹಾನಿಯ ಆರಂಭಿಕ ಹಂತದಲ್ಲಿ, ಸಸ್ಯಜನ್ಯ ಕೀಟನಾಶಕಗಳನ್ನು ಸಿಂಪಡಿಸಿ.  ಹಸುವೀನ ಮೂತ್ರ (20%) ಮತ್ತು ಬೇವು, ಸೀತಾಫಲ, ಜಟ್ರೋಫಾ (10%) ನಿಂದ ತಯಾರಿಸಿದ ಸಾರಗಳನ್ನು ಸಿಂಪಡಿಸಿ.  ಅತಿಯಾದ ಬಾಧೆಯ ಹಂತದಲ್ಲಿ, ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್‌.ಸಿ 4 ಮೀ. ಲೀ ಅಥವಾ ಎಮಾಮ್ಯಾಕ್ಟಿನ್ ಬೆಂಜೊಯೇಟ್ 5 ಎಸ್‌.ಜಿ @ 4 ಗ್ರಾಂ ಅಥವಾ ಥಿಯೋಡಿಕಾರ್ಬ್ 75 ಡಬ್ಲ್ಯೂಪಿ @ 10 ಗ್ರಾಂ ಅಥವಾ ಸೈಪರ್‌ಮೆಥ್ರಿನ್ 3% + ಕ್ವಿನಾಲ್ಫೋಸ್ 20ಇಸಿ@ 5ಮೀ.ಲೀ ಅಥವಾ ಡೆಲ್ಟಾಮೆಥ್ರಿನ್ 1% + ಟ್ರಯಾಜೋಫೋಸ್ 35% ಇಸಿ@ 10 ಮಿಲಿ@ 10 ಲೀಟರ್ ನೀರಿಗೆ ಸಿಂಪಡಿಸಿ.
 ಪ್ರತಿ ಸಿಂಪಡಣೆ ಸಮಯಯಲ್ಲಿ ಕೀಟನಾಶಕವನ್ನು ಬದಲಾಯಿಸಿ.  ಬೆಳೆ ಅವಶೇಷಗಳನ್ನು ಹೊಲದ ಬದುವಿನ ಮೇಲೆ ಎಸೆಯದೆ ಅವುಗಳನ್ನು ಸುಟ್ಟು ನಾಶಮಾಡಬೇಕು ಮೂಲ: ಭಾರತ ಸರ್ಕಾರ- ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ. ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
552
1