ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಬಟಾಣಿಯಲ್ಲಿ ಸಮಗ್ರ ಕೀಟಪೀಡೆ ಮತ್ತು ರೋಗ ನಿರ್ವಹಣೆ
ಬಟಾಣಿಯಲ್ಲಿ ಬರುವ ಪ್ರಮುಖ ಕೀಟಗಳು ಸಸ್ಯ ಹೇನು : ಈ ಕೀಟಗಳ ಮರಿ ಹುಳುಗಳು ಮತ್ತು ಪ್ರೌಢ ಹೇನುಗಳು ಸಸ್ಯಗಳ ಕೋಮಲವಾದ ಭಾಗಗಳಿಂದ ರಸವನ್ನು ಹೀರುವ ಮೂಲಕ ಹಾನಿಯನ್ನುಂಟು ಮಾಡುತ್ತವೆ. ಈ ಕೀಟಗಳ ಬಾಧೆಯ ನಂತರ, ಎಲೆಗಳ ಮೇಲೆ ಕಪ್ಪು ಬಣ್ಣದ ಶಿಲಿಂದ್ರಗಳು ಕಾಣಿಸಿಕೋಳ್ಳುತ್ತವೆ. ಇದು ಸಸ್ಯಗಳ ಬೆಳವಣಿಗೆ ಮತ್ತು ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ.
ನಿರ್ವಹಣೆ: _x000D_ 1. ಸಸ್ಯ ಹೇನಿನಿಂದ ಬಾಧೆಗೊಂಡ ಭಾಗಗಳನ್ನು ತೆಗೆದು ನಾಶಪಡಿಸಿ. _x000D_ 2. ಪ್ರತಿ ಎಕರೆಗೆ ಬೇವಿನ ಎಣ್ಣೆ ೧೫೦೦ ಪಿಪಿಎಂ ೧ ಲೀಟರನ್ನು ೨೦೦ ಲೀಟರ್ ನೀರಿನಲ್ಲಿ ಬೇರೆಸಿ ಸಿಂಪಡಿಸಿ ಮತ್ತು ೧೦ ದಿನಗಳ ಮಧ್ಯಂತರದಲ್ಲಿ ಸಿಂಪಡಿಸಿ._x000D_ 3. ಏಕಾಏಕಿ ಹೆಚ್ಚಿನ ಬಾಧೆ ಸಂಭವಿಸಿದಲ್ಲಿ, ಥಿಯೋಮಿಥಾಕ್ಸಮ್ ೨೫ % ಡಬ್ಲ್ಯೂಜಿ @ ೪೦ ಗ್ರಾಂ / ೨೦೦ ಲೀಟರ್ ನೀರಿನಲ್ಲಿ ಪ್ರತಿ ಎಕರೆಗೆ ಸಿಂಪಡಿಸಬೇಕು._x000D_ _x000D_ ಎಲೆ ಸುರಂಗ ಕೀಟ: ಸಸ್ಯಗಳ ಬೆಳವಣಿಗೆಯ ಹಂತದಲ್ಲಿ ಈ ಕೀಟ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ. ಈ ಕೀಟದ ಮರಿಹುಳುಗಳು ಎಲೆಗಳಲ್ಲಿ ಸುರಂಗವನ್ನು ಮಾಡುತ್ತದೆ ಮತ್ತು ಎಲೆಗಳ ಹಸಿರು ಪತ್ರ ಹರಿತ್ತನ್ನು ತಿನ್ನುವ ಮೂಲಕ ಹಾನಿಯನ್ನುಂಟು ಮಾಡುತ್ತದೆ._x000D_ _x000D_ ನಿರ್ವಹಣೆ: _x000D_ ೧. ಈ ಕೀಟವನ್ನು ನಿಯಂತ್ರಿಸಲು ೫% ಪ್ರತಿಶತದಷ್ಟು ಬೇವಿನ ತಿರುಳಿನ ಪುಡಿಯನ್ನು (ಪ್ರತಿ ಲೀಟರ್ ನೀರಿಗೆ ೪೦ ಗ್ರಾಂ ) ಸಿಂಪಡಿಸುವುದು ಪ್ರಯೋಜನಕಾರಿ ಎಂದು ಕಂಡುಬಂದಿದೆ._x000D_ _x000D_ ೨. ಏಕಾಏಕಿ ಹೆಚ್ಚಿನ ಬಾಧೆ ಸಂಭವಿಸಿದಲ್ಲಿ ,ಪ್ರತಿ ಎಕರೆಗೆ ಇಮಿಡಾಕ್ಲೋಪ್ರಿಡ17.8% ಎಸ್ಎಲ್ @ ೪೦ ಮಿಲಿ / ೨೦೦ ಲೀಟರ್ ನೀರು ಅಥವಾ ಥಿಯೋಮಿಥಾಕ್ಸಮ್ ೨೫ % ಡಬ್ಲ್ಯೂಜಿ @ ೪೦ ಗ್ರಾಂ ಪ್ರತಿ ಎಕರೆಗೆ ೨೦೦ ಲೀಟರ್ಗೆ ೧೦ ರಿಂದ 15 ದಿನಗಳ ಮಧ್ಯಂತರದಲ್ಲಿ ಸಿಂಪಡಿಸಬೇಕು._x000D_ _x000D_ ಬಟಾಣಿಯಲ್ಲಿ ಪ್ರಮುಖ ರೋಗ_x000D_ _x000D_ ಬೂದಿರೋಗ : ಕಾಂಡ, ಎಲೆಗಳು ಮತ್ತು ಬೀಜಕೋಶಗಳು ಈ ರೋಗದಿಂದ ಬಾಧೆಗೊಳ್ಳುತ್ತವೆ. ರೋಗ ಪೀಡಿತ ಗಿಡದ ಭಾಗದ ಮೇಲೆ ಬುದು ಬಣ್ಣದ ಪುಡಿಯನ್ನು ಕಾಣುತ್ತವೆ, ಕ್ರಮೇಣ ಇಡೀ ಎಲೆ ಮತ್ತು ಸಸ್ಯವನ್ನು ಬಿಳಿ ಪುಡಿಯಿಂದ ಆವರಿಸಿರುತ್ತದೆ ಮತ್ತು ನಂತರ ಎಲೆಗಳು ಉದುರಿ ಹೋಗುತ್ತವೆ._x000D_ _x000D_ ನಿರ್ವಹಣೆ: _x000D_ ೧ . ರೋಗ ನಿರೋಧಕ ತಳಿಗಳನ್ನು ಬೆಳೆಯಿರಿ._x000D_ ೨ . ಏಕಾಏಕಿ ಹೆಚ್ಚಿನ ಬಾಧೆ ಪ್ರಾರಂಭದಲ್ಲಿ, ಪ್ರತಿ ಎಕರೆಗೆ ೨೦೦ ಲೀಟರ್ ನೀರಿನಲ್ಲಿ ಎಕರೆಗೆ ಸಲ್ಫರ್ (ಗಂಧಕ) ೮೦ % ಡಬ್ಲ್ಯೂಜಿ @ ೫೦೦ ಗ್ರಾಂ ಸಿಂಪಡಿಸಿ._x000D_ ಸೊರಗು ರೋಗ : ಇದು ಬಟಾಣಿಗಳ ಶಿಲೀಂಧ್ರ ರೋಗ. ಪೀಡಿತ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಸಸ್ಯಗಳು ಒಣಗುತ್ತವೆ._x000D_ _x000D_ ನಿರ್ವಹಣೆ: _x000D_ ೧ . ಬೆಳೆಯಲ್ಲಿ ರೋಗ ತಡೆಗಟ್ಟುವಿಕೆಗಾಗಿ, ಥೈರಾಮ್ ೨ ಗ್ರಾಂ + ಕಾರ್ಬೆಂಡಜಿಮ್ ೧ ಗ್ರಾಂ ಅಥವಾ ಟ್ರೈಕೊಡರ್ಮಾ ೪ ಗ್ರಾಂ + ಬೀಟಾವಾಕ್ಸ್ ೨ ಗ್ರಾಂ / ಪ್ರತಿ ಕೆಜಿ ಬೀಜಕ್ಕೆ ಬಿತ್ತನೆ ಮಾಡುವ ಮೊದಲು ಬೀಜೋಪಚಾರವನ್ನು ಮಾಡಬೇಕು._x000D_ ೨ . ರೋಗಕ್ಕೆ ನಿರೋಧಕವಾದ ತಳಿಗಳನ್ನು ಆಯ್ಕೆ ಮಾಡಬೇಕು._x000D_ ೩ . ಬೆಳೆಯಲ್ಲಿ ರೋಗವನ್ನು ತಡೆಗಟ್ಟಲು, ಕಾರ್ಬೆಂಡಜಿಮ ೫೦ % WP@ ೨೦೦ ಗ್ರಾಂನ್ನು ಮಣ್ಣಿನಲ್ಲಿ ೨೦೦ ಲೀಟರ್ ನೀರಿನಲ್ಲಿ ಬೇರೆಸಿ ಮಣ್ಣಿಗೆ ಹಾಕಬೇಕು._x000D_ _x000D_ ಮೂಲ: ಆಗ್ರೊಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ _x000D_ _x000D_ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋ ಕೆಳಗೆ ಹಳದಿ ಹೆಬ್ಬೆರಳು ಗುರುತಿನ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ._x000D_
192
0
ಕುರಿತು ಪೋಸ್ಟ್