AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಪ್ರಾಣಿಗಳಿಗಾಗಿ  ಹಸಿರು ಮೇವಿನ ಪ್ರಾಮುಖ್ಯತೆ
ಪಶುಸಂಗೋಪನೆಅಗ್ರೋವನ್
ಪ್ರಾಣಿಗಳಿಗಾಗಿ ಹಸಿರು ಮೇವಿನ ಪ್ರಾಮುಖ್ಯತೆ
• ಒಣ ಮೇವಿಗೆ ಹೋಲಿಸಿದರೆ ಹಸಿರು ಮೇವು ನೀರಿನ ಪ್ರಮಾಣವು ಹೆಚ್ಚಾಗಿದೆ. ಹಸಿರು ಮೇವು ರುಚಿಕರವಾದ್ದರಿಂದ ಪ್ರಾಣಿಗಳು ಮೇವನ್ನು ಅತ್ಯುತ್ಸಾಹದಿಂದ ತಿನ್ನುತ್ತವೆ ಮತ್ತು ಮೇವು ಹಾಳಾಗುವುದಿಲ್ಲ. • ಈ ಮೇವಿನಿಂದ ಪ್ರಾಣಿಗಳು ಸುಲಭವಾಗಿ ಗ್ಲೂಕೋಸ್ ಅಂಶವನ್ನು ಪಡೆಯುತ್ತವೆ, ಇದು ಮೇವುಗಳ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. • ಹಸಿರು ಮೇವು ಖನಿಜಗಳು ಮತ್ತು ಪ್ರೋಟೀನ್ಗಳಿಂದ ಕೂಡಿರುತ್ತದೆ. • ರುಚಿಕರ ಮತ್ತು ರಸಭರಿತವಾದ, ಹಸಿರು ಮೇವು ಪೌಷ್ಟಿಕವಾಗಿರುತ್ತದೆ. ಪ್ರಾಣಿಗಳಿಗೆ ಹಸಿವನ್ನು ಹೆಚ್ಚಿಸಲು ಈ ಮೇವು ಸಹಾಯ ಮಾಡುತ್ತದೆ. • ಪ್ರತಿದಿನ ಹಸಿರು ಮೇವು ನೀಡುವಲ್ಲಿ ಪ್ರಾಣಿ ಆರೋಗ್ಯವು ಚೆನ್ನಾಗಿರುತ್ತದೆ. • ಪ್ರಾಣಿಗಳ ದೇಹಕ್ಕೆ ಅನುಕೂಲಕರವಾದ ನೈಸರ್ಗಿಕ ರೂಪದಲ್ಲಿ ಪೋಷಕಾಂಶಗಳು ದೊರಕುತ್ತವೆ. • ಇದು ಪ್ರಾಣಿಗಳ ದೇಹದಲ್ಲಿ ವಿಟಮಿನ್-ಎ ಕ್ಯಾರೋಟಿನ್ ಅನ್ನು ಪೂರೈಸುತ್ತದೆ ಮತ್ತು ರಾತ್ರಿ ಕುರುಡುತನವನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ಪ್ರಾಣಿಯ ಚರ್ಮವು ಸಹ ಚೆನ್ನಾಗಿರುತ್ತದೆ.
• ಹಸಿರು ಮೇವು ಒಳ್ಳೆಯ ಚಯಾಪಚಯ ಕ್ರಿಯೆಯಾಗುವ ಅಂಶಗಳನ್ನು ಹೊಂದಿದೆ, ಆದ್ದರಿಂದ ಪ್ರಾಣಿ ಅದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುವುದಿಲ್ಲ. • ಹಸಿರು ಮೇವು ಅರ್ಜಿನೈನ್, ಗ್ಲುಟಾಮಿಕ್ನಂತಹ ಸಾಕಷ್ಟು ಅಮೈನೊ ಆಮ್ಲಗಳನ್ನು ಹೊಂದಿರುತ್ತದೆ. • ಹಸಿರು ಮೇವು ನವಜಾತ ಕರು ಮತ್ತು ಗರ್ಭಾವಸ್ಥೆಯಲ್ಲಿಯ ಪ್ರೌಢ ಪ್ರಾಣಿಗಳಿಗೆ ತಿನ್ನಲು ಕೊಟ್ಟರೆ ಕೊಡದಿದ್ದಾಗ ರಾತ್ರಿ ಕುರುಡುತನ ಅಥವಾ ಇತರ ದೈಹಿಕ ವಿಕಲತೆ, ಬರುತ್ತದೆ. • ಸಮತೋಲಿತ ಪೌಷ್ಟಿಕ ಹಸಿರು ಮೇವು ನೀಡಿದ ಪ್ರಾಣಿಗಳು ಕನಿಷ್ಠ 8 ಲೀಟರ್ ಹಾಲು ನೀಡುತ್ತವೆ . • ಉತ್ತಮ ಹಾಲಿನ ಉತ್ಪಾದಕತೆ ಮತ್ತು ಪ್ರಾಣಿಗಳ ಉತ್ತಮ ಆರೋಗ್ಯಕ್ಕಾಗಿ, ದೈನಂದಿನ ಆಹಾರಕ್ರಮದಲ್ಲಿ ಹಸಿರು ಮೇವು ನೀಡಿ. ಸಂದರ್ಭ - ಅಗ್ರೋವನ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
865
0