AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಪ್ರಾಣಿಗಳಲ್ಲಿ ಕೃತಕ ಗರ್ಭಧಾರಣೆ ಮತ್ತು ಅದರ ಅನುಕೂಲಗಳು
ಪಶುಸಂಗೋಪನೆಗುಜರಾತ್ ಜಾನುವಾರು ಅಭಿವೃದ್ಧಿ ಮಂಡಳಿ (ಗಾಂಧಿನಗರ)
ಪ್ರಾಣಿಗಳಲ್ಲಿ ಕೃತಕ ಗರ್ಭಧಾರಣೆ ಮತ್ತು ಅದರ ಅನುಕೂಲಗಳು
ವೈಜ್ಞಾನಿಕ ಕಾರ್ಯವಿಧಾನದ ಮತ್ತು ಕೃತಕ ಉಪಕರಣಗಳ ಸಹಾಯದಿಂದ ಉತ್ತಮ ತಳಿಯ ಗಂಡು ಪ್ರಾಣಿಯ ವಿರ್ಯವನ್ನು ಸಂಗ್ರಹಿಸಿ ಹೆಣ್ಣು ಪ್ರಾಣಿಯ ಸಂತಾನೋತ್ಪತ್ತಿ ಅಂಗದಲ್ಲಿ ಸೇರಿಸುವ ಪ್ರಕ್ರಿಯೆಯನ್ನು ಕೃತಕ ಗರ್ಭಧಾರಣೆ ಎಂದು ಕರೆಯಲಾಗುತ್ತದೆ. ಕೃತಕ ಗರ್ಭಧಾರಣೆ ಪ್ರಯೋಜನಗಳು: ● ನಮ್ಮ ದೇಶದಲ್ಲಿ ನಾವು ಉತ್ತಮ ಸಂಖ್ಯೆಯ ಜಾನುವಾರುಗಳನ್ನು ಹೊಂದಿದ್ದೇವೆ ಆದರೆ ಉತ್ತಮ ತಳಿಯ ಘುಳಿ ಜಾನುವಾರುಗಳ ಅಭಾವವಿದೆ. ಆದ್ದರಿಂದ ಒಂದು ಘುಳಿಯನ್ನು ಹಲವು ಜಾನುವಾರಗಳ ತಳಿ ಸಂವರ್ಧನೆ ಮಾಡುವುದಕ್ಕಾಗಿ ಕೃತಕ ಗರ್ಭಧಾರಣೆಯು ಒಂದು ಒಳ್ಳೆಯ ವಿಧಾನವಾಗಿದೆ. ● ಹಸುಗಳಲ್ಲಿ ಮತ್ತು ಎಮ್ಮೆಗಳಲ್ಲಿ ವಿವಿಧ ಆನುವಂಶಿಕ ಕಾಯಿಲೆಗಳನ್ನು ಪತ್ತೆ ಹಚ್ಚಲು ಇದು ಸಹಾಯ ಮಾಡುತ್ತದೆ. ● ಆದ್ದರಿಂದ ಕೇವಲ ಆರೋಗ್ಯಕರ ಘುಳಿಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ ಮತ್ತು ಅವುಗಳ ಆರೋಗ್ಯವನ್ನು ನಿಯಮಿತವಾಗಿ ಪರಿಶೀಲಿಸಬೇಕು.ಇದು ಸಂತಾನೋತ್ಪತ್ತಿ ರೋಗಗಳ ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ. ● 5 ರಿಂದ 8-ಜಾನುವಾರುಗಳನ್ನು ಹೊಂದಿರುವ ರೈತರಿಗೆ ಒಂದು ಘುಳಿಯನ್ನು ಸಾಕಲು ಶಕ್ತರಾಗಿರುವುದಿಲ್ಲ. ಆದಾಗ್ಯೂ ಅವರು ಅತ್ಯಲ್ಪ ಶುಲ್ಕದಲ್ಲಿ ಎಲ್ಲ ಸೌಲಭ್ಯವನ್ನು ಪಡೆಯಬಹುದು.
● ಹೆಚ್ಚು ಫಲವತ್ತಾದ ಶುದ್ಧ ತಳಿಯ ಒಂದು ಘುಳಿ ಅತಿ ಹೆಚ್ಚಿನ ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ಹೊಂದಿದೆ, ಇದು ಹಾಲು ಉತ್ಪಾದನೆಯಲ್ಲಿ ಮಹತ್ತರವಾದ ಹೆಚ್ಚಳವನ್ನು ಉಂಟುಮಾಡುತ್ತದೆ. ● 100 ರಿಂದ 200-ಪ್ರಾಣಿಗಳಿಗೆ ಕೃತಕ ಗರ್ಭಧಾರಣೆ ಮಾಡಿಸಲು ಒಂದೇ ಘುಳಿಯನ್ನು ಬಳಸಬಹುದು. ● ಘನೀಕೃತ ವೀರ್ಯವನ್ನು ಅನೇಕ ವರ್ಷಗಳ ಕಾಲ ದ್ರವರೂಪದ ಸಾರಜನಕದಲ್ಲಿ ಶೇಖರಿಸಿಡಬಹುದು ಮತ್ತು ಸಂತಾನೋತ್ಪತ್ತಿಯ ಪ್ರಕ್ರಿಯೆಗಾಗಿ ಘುಳಿಯ ಮರಣದ ನಂತರವೂ ಅದನ್ನು ಬಳಸಬಹುದು. ಉಲ್ಲೇಖ: ಗುಜರಾತ್ ಜಾನುವಾರು ಅಭಿವೃದ್ಧಿ ಮಂಡಳಿ (ಗಾಂಧಿನಗರ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
494
0