AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಪ್ಯಾಸಿಲೋಮೈಸಸ್ ಲಿಲಾಸಿನಸ್
ಸಾವಯವ ಕೃಷಿಅಗ್ರೋವನ್
ಪ್ಯಾಸಿಲೋಮೈಸಸ್ ಲಿಲಾಸಿನಸ್
ಪ್ಯಾಸಿಲೋಮೈಸಸ್ ಲಿಲಾಸಿನಸ್ ಅನೇಕ ವಿಧದ ಮಣ್ಣಿನಲ್ಲಿ ನೈಸರ್ಗಿಕವಾಗಿ ಕಂಡುಬರುವ ಶಿಲೀಂಧ್ರವಾಗಿದೆ. ಸಸ್ಯದ ಬೇರುಗಳ ಮೇಲೆ ಬಾಧೆ ಮಾಡುವ ಜಂತು ಹುಳುಗಳನ್ನು ನಿಯಂತ್ರಿಸಲು ಈ ಶಿಲೀಂಧ್ರವು ಉಪಯುಕ್ತವಾಗಿದೆ. ಅದೇ ಸಮಯದಲ್ಲಿ, ಇದು ೨೧ ರಿಂದ ೩೨ ಡಿಗ್ರಿ ತಾಪಮಾನದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಆದ್ದರಿಂದ ತಾಪಮಾನವು ೩೬ ಡಿಗ್ರಿಗಳನ್ನು ಮೀರದಿದ್ದರೆ, ಅದು ಬದುಕಲು ಸಾಧ್ಯವಿಲ್ಲ. ಇದು ಜಂತು ಹುಳುವಿನ ಮೊಟ್ಟೆ, ಮರಿಹುಳು,ಕೋಶಾವಸ್ಥೆಗಳು ಮತ್ತು ಪ್ರೌಢ ಕೀಟಕ್ಕೆ ಬಾಧಿಸುತ್ತದೆ.
ಬೆಳೆಗಳು - ಆಲೂಗಡ್ಡೆ,ಮೆಣಸು,ಟೊಮ್ಯಾಟೊ, ಸೌತೆಕಾಯಿ, ಪುಷ್ಪ ಬೆಳೆಗಳು ಇತ್ಯಾದಿ. ಬಾಧೆಗೊಳಗಾಗುವ ಸಸ್ಯ ಜಂತುಗಳು - ಉದಾ., ಬೇರು ಗಂಟು ಜಂತು ಹುಳು, ಸಿಸ್ಟ್ ಜಂತು ಹುಳು, ರೆನಿಫಾರ್ಮ್ ಜಂತು ಹುಳು. ಬಳಸುವ ವಿಧಾನ -ನೀರಿನೊಂದಿಗೆ ಬೇರೆಸಿ ಮಣ್ಣನ್ನು ತೇವಗೊಳಿಸಬೇಕು. ಪ್ರಮಾಣ: ಮಣ್ಣಿನಲ್ಲಿ ೪-೫ ಕೆಜಿ ಎಕರೆ ಕೊಟ್ಟಿಗೆ ಗೊಬ್ಬರದೊಂದಿಗೆ ಬಳಸಬೇಕು. ಉಲ್ಲೇಖ - ಅಗ್ರೋವನ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
120
0