AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಪಪಾಯಿಯಲ್ಲಿ ಬರುವ ಪ್ರಮುಖ ರೋಗಗಳು ಮತ್ತು ತಡೆಗಟ್ಟುವ ಕ್ರಮಗಳು
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಪಪಾಯಿಯಲ್ಲಿ ಬರುವ ಪ್ರಮುಖ ರೋಗಗಳು ಮತ್ತು ತಡೆಗಟ್ಟುವ ಕ್ರಮಗಳು
ಪಪಾಯಿ ವಿಶ್ವದ ಉಷ್ಣವಲಯದ ಪ್ರದೇಶಗಳಲ್ಲಿ ಬೆಳೆಯುವ ಪ್ರಮುಖ ಹಣ್ಣು. ಬಾಳೆಹಣ್ಣಿನ ನಂತರ, ಇದು ಹೆಚ್ಚು ಇಳುವರಿ ನೀಡುವ ಹಣ್ಣಿನ ಬೆಳೆ ಮತ್ತು ಔಷಧೀಯ ಗುಣಗಳಿಂದ ಕೂಡಿದೆ. ಉಂಗುರ ಚುಕ್ಕೆ ರೋಗ: ಪಪಾಯಿಯ ಯಾವುದೇ ಹಂತದಲ್ಲಿ ಉಂಗುರ ಚುಕ್ಕೆ ರೋಗವನ್ನು ಕಾಣಬಹುದು. ರೋಗದ ಲಕ್ಷಣಗಳು ಮೇಲಿನ ಎಲೆಗಳಲ್ಲಿ ಕಂಡುಬರುತ್ತವೆ, ಅವು ಮೃದು ಮತ್ತು ಪೀಡಿತ ಎಲೆಗಳು ಹಳದಿ ಬಣ್ಣದಾಗಿರುತ್ತವೆ ಮತ್ತು ಗಾತ್ರದಲ್ಲಿ ಸಣ್ಣದಾಗಿರುತ್ತವೆ. ಕಡು ಹಸಿರು ಗುಳ್ಳೆಗಳ ಎಲೆಯ ಮೇಲ್ಮೈ ಒರಟಾಗಿರುತ್ತದೆ. ಹೊಸ ಎಲೆಗಳ ಮೇಲೆ, ಹಳದಿ ನಂಜು ರೋಗದ ಬಾಧೆ ಕಂಡು ಬರುತ್ತವೆ.
ರೋಗದ ಕಾರಣ:  ಉಂಗುರ ಚುಕ್ಕೆ ರೋಗ ಎಂಬ ರೋಗ ನಂಜಾಣುವಿನ ಈ ರೋಗಕ್ಕೆ ಕಾರಣವಾಗುತ್ತದೆ.  ಈ ನಂಜಾಣು ಒಂದು ಗಿಡದಿಂದ ಬೇರೆ ಹತ್ತಿರದ ಇತರ ಗಿಡಗಳಿಗೆ ಹರಡಬಹುದು. ಇದು ಸಾಮಾನ್ಯವಾಗಿ ನಂಜಾಣು ರೋಗಕಾರಕ ಕೀಟ ಪೀಡೆಗಳ ಮೂಲಕ ಹರಡುತ್ತದೆ, ಅದರಲ್ಲಿ ಸಸ್ಯ ಹೇನಿನ (ಆಫಿಸ್ ಗಾಸಿಪಿ) ರೋಗವಾಹಕವಾಗಿ ಕಾರ್ಯನಿರ್ವಹಿಸುತ್ತದೆ. ಹಳದಿ ನಂಜಾಣು ರೋಗ: ಈ ರೋಗದ ವಿಶಿಷ್ಟ ಲಕ್ಷಣವೆಂದರೆ ಎಲೆಗಳ ಮೇಲಿನ ಹಸಿರು ಮೊಸಾಯಿಕ್. ಆದಾಗ್ಯೂ, ಉಂಗುರ ಚುಕ್ಕೆ ರೋಗದಂತೆಯೇ ಎಲೆಗಳು ಮುಟುರಿ ಕೊಂಡಂತೆ ಕಾಣುತ್ತವೆ . ಉಳಿದ ಲಕ್ಷಣಗಳು ಉಂಗುರ ಚುಕ್ಕೆ ರೋಗದ ಲಕ್ಷಣಗಳಿಗೆ ಹೋಲುತ್ತದೆ . ಈ ರೋಗವು ಪಪ್ಪಾಯಿ ಮೊಸಾಯಿಕ್ ವೈರಸ್‌ನಿಂದ ಉಂಟಾಗುತ್ತದೆ ಮತ್ತು ಇದು ಸಸ್ಯ ಹೇನಿನ (ಆಫಿಸ್ ಗೋಸಿಪಿ) ಮೂಲಕ ಹರಡುತ್ತದೆ. ರೋಗ ನಿರ್ವಹಣೆ:  ನಂಜಾಣು ರೋಗಗಳ ನಿರ್ಮೂಲನೆಗೆ ಸಂಬಂಧಿಸಿದ ಸರಿಯಾದ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಆದ್ದರಿಂದ, ಕೆಳಗೆ ನೀಡಲಾದ ಕ್ರಮಗಳನ್ನು ಅನುಸರಿಸುವ ಮೂಲಕ, ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು.  ತೋಟಗಳನ್ನು ಸ್ವಚ್ವಾಗಿಡಿ. ಗಿಡ ಬಾಧೆಗೊಂಡ ಸಮಯದಲ್ಲಿ , ಅವಶೇಷಗಳನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಿ ನಾಶಪಡಿಸಬೇಕು.  ಹೊಸ ತೋಟಕ್ಕೆ ಗಿಡಗಳ ನಾಟಿಯನ್ನು ಆರಂಭಿಸುವಾಗ, ಆರೋಗ್ಯಕರ ಮತ್ತು ರೋಗ ಮುಕ್ತ ಸಸ್ಯಗಳನ್ನು ಆಯ್ಕೆ ಮಾಡಬೇಕು  ಯಾವುದೇ ಚಿಕಿತ್ಸೆಯಿಂದ ರೋಗಪೀಡಿತ ಸಸ್ಯಗಳನ್ನು ಆರೋಗ್ಯಕರವಾಗಿಸಲು ಸಾಧ್ಯವಿಲ್ಲ. ಆದ್ದರಿಂದ, ಅವುಗಳನ್ನು ಕಿತ್ತು ಮತ್ತು ಸುಟ್ಟು ನಾಶ ಮಾಡಬೇಕು ; ಇಲ್ಲದಿದ್ದರೆ, ಅವು ವೈರಸ್‌ನ ಶಾಶ್ವತ ಮೂಲವಾಗಿ ಬಿಡುತ್ತವೆ ಮತ್ತು ಇತರ ಸಸ್ಯಗಳ ಮೇಲೆ ರೋಗವನ್ನು ಹರಡಬಹುದು.  ರೋಗಕಾರಕ ಕೀಟಗಳನ್ನು ತಡೆಗಟ್ಟಲು, ಇಮಿಡಾಕ್ಲೋಪ್ರಿಡ್ 17.8% ಎಸ.ಎಲ್@0.3 ಮಿಲಿ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೇರೆಸಿ 10-12 ದಿನಗಳ ಮಧ್ಯಂತರದಲ್ಲಿ ನಿಯಮಿತವಾಗಿ ಸಿಂಪಡಿಸಬೇಕು. ಉಲ್ಲೇಖ - ಶ್ರೀ ಎಸ್. ಕೆ. ತ್ಯಾಗಿ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಖರಗೋನ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
533
8