ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಪಪಾಯನಲ್ಲಿ ಹಿಟ್ಟು ತಿಗಣೆಯ ಸಮಗ್ರ ನಿರ್ವಹಣೆ
ಪಪಾಯನಲ್ಲಿ ಹಿಟ್ಟು ತಿಗಣೆಯ ಸಮಗ್ರ ನಿರ್ವಹಣೆ: ಪಪಾಯ ಹಿಟ್ಟು ತಿಗಣೆಯ ಬಾಧೆಯನ್ನು ಮೊದಲ ಬಾರಿಗೆ 2008 ರಲ್ಲಿ ತಮಿಳುನಾಡಿನ ಕೊಯಬತ್ತೂರುನಲ್ಲಿ ಕಾಣಿಸಿ ಕೊಂಡಿತ್ತು ತದ ನಂತರ ಕೇರಳ, ಕರ್ನಾಟಕ, ತ್ರಿಪುರಾ ಮತ್ತು ಮಹಾರಾಷ್ಟ್ರಗಳಲ್ಲಿ ಹರಡಿತು. ಹಿಟ್ಟು ತಿಗಣೆಯ ಮರಿಹುಳುವಿನ ಹಂತವು ಎಲೆಗಳು, ಕಾಂಡ ಮತ್ತು ಪಕ್ವತೆಯಿಂದ ಕುಡಿದ ಹಣ್ಣುಗಳಿಂದ ರಸವನ್ನು ಹೀರುವವುದರ ಮೂಲಕ ಬಾಧೆಯನ್ನು ಮಾಡುತ್ತದೆ . ಹಣ್ಣುಗಳು ತಿನ್ನಲು ಮತ್ತು ಮಾರುಕಟ್ಟೆ ಮಾರಲು ಉಪಯುಕತ್ತವಾಗಿರುವುದಿಲ್ಲ. ಈ ಕೀಟದಿಂದ ಸರಿಸುಮಾರು 60% -70% ಇಳುವರಿ ನಷ್ಟ ಕಂಡುಬರುತ್ತದೆ.
ಸಮಗ್ರ ನಿರ್ವಹಣೆ:_x005F_x000D_  ತೋಟಕ್ಕೆ ಪ್ರತಿ ದಿನ ನಿರಂತರವಾಗಿ ಭೇಟಿ ಮಾಡಿ. _x005F_x000D_  ಬಾಧೆಗೊಂಡಿರುವ ಎಲೆಗಳು ಮತ್ತು ಹಣ್ಣುಗಳನ್ನು ಸಂಗ್ರಹಿಸಿ ನಾಶಮಾಡಿ. _x005F_x000D_  ತೋಟದ ಸ್ವಚ್ಛತೆ ಮಾಡಿ • ಗಿಡದ ಸುತ್ತಲು ಮತ್ತು ಕೆಳಭಾಗದ ಮಣ್ಣನ್ನು ಖುರೂಪಿಂದ ಅಗಿಯಬೇಕು ಅದರಿಂದ ಹಿಟ್ಟು ತಿಗಣೆಯ ಕೋಶಾವಸ್ಥೆಗಳು ಮೇಲೆ ಬರುತ್ತವೆ ಮತ್ತು ಬಿಸಿಲಿನ ಉಷ್ಣತೆಯಿಂದ ಸಾಯುತ್ತವೆ._x005F_x000D_  ನಿಯಮಿತವಾಗಿ ಕಳೆ ಮತ್ತು ಕಳೆ ಸಸ್ಯಗಳನ್ನು ಕಿತ್ತು ನಾಶಮಾಡಿ. _x005F_x000D_  ಯಾವುದೇ ಶಿಫಾರಸ್ಸು ಕೀಟನಾಶಕಗಳನ್ನು ಸಿಂಪಡಿಸುವಾಗ ಸರಿಯಾದ ಅಂಟು ಪದಾರ್ಥವನ್ನು ಬಳಸಿ._x005F_x000D_  ಪಪ್ಪಾಯ ಹಿಟ್ಟು ತಿಗಣೆಯಿಂದ ಬಾಧೆಗೊಂಡ ತೋಟದಲ್ಲಿ ಲಭ್ಯವಿದ್ದ ಅಸೆರೋಫಾಗಸ್ ಪಪಾಯೆ ಮತ್ತು ಅನಗೈರಸ್ ಲೂಕೆ ಮುಂತಾದ ಪರಾವಲಂಬಿಗಳನ್ನು ಬಿಡಬೇಕು._x005F_x000D_ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
589
4
ಇತರ ಲೇಖನಗಳು