AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ನುಗ್ಗೆಕಾಯಿಯಲ್ಲಿ ಪೋಷಕಾಂಶಗಳ ನಿರ್ವಹಣೆ
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ನುಗ್ಗೆಕಾಯಿಯಲ್ಲಿ ಪೋಷಕಾಂಶಗಳ ನಿರ್ವಹಣೆ
 ನುಗ್ಗೆಕಾಯಿ ವರ್ಷಕ್ಕೆ ಎರಡು ಬಾರಿ ಬೆಳೆಯಬಹುದು ಮತ್ತು ಆ ಸಮಯದಲ್ಲಿ ರಸಗೊಬ್ಬರವನ್ನು ಬಳಸುವುದು ಅತ್ಯಗತ್ಯ.  ರಾಸಾಯನಿಕ ರಸಗೊಬ್ಬರಗಳ ಜೊತೆಗೆ ಎಕರೆಗೆ 10-12 ಟನ್ ಕೊಟ್ಟಿಗೆ ಗೊಬ್ಬರ ನೀಡಿ.  ಎಕರೆಗೆ 50 ಕಿ.ಗ್ರಾಂ ಯೂರಿಯಾ, 50 ಕಿ.ಗ್ರಾಂ ಡಿಎಪಿ, ಮತ್ತು 50 ಕಿ.ಗ್ರಾಂ ಪೊಟಾಷ್ ರಸಗೊಬ್ಬರವನ್ನು ಹಾಕಿರಿ. ಅದಾದ ನಂತರ, 30 ರಿಂದ 40 ದಿನಗಳ ನಂತರ 50 ಕಿ.ಗ್ರಾಂ ಯೂರಿಯಾವನ್ನು ನೀಡಬೇಕು.  ಮಣ್ಣಿನ ಪರೀಕ್ಷೆಯ ಪ್ರಕಾರ ಮಣ್ಣಿನ ವಿಧ ಮತ್ತು ಸಸ್ಯ ಬೆಳವಣಿಗೆಯ ಅನುಸಾರ ಸಾರಜನಕದ ಪ್ರಮಾಣ ಹೆಚ್ಚಿಸಿ.  ಎರಡನೇ ಬಾರಿ ಬೆಳೆಯುವ ಸಮಯದಲ್ಲಿ ಮೊದಲನೆ ಬಾರಿ ಹೇಳಲಾದ ರಸಗೊಬ್ಬರ ನಿರ್ವಹಣೆ ಅನುಸರಿಸಿ.  ರಾಸಾಯನಿಕ ರಸಗೊಬ್ಬರವನ್ನು ವರ್ಷಕ್ಕೆ ಎರಡು ಬಾರಿ ಬಳಸುವುದರ ಜೊತೆಗೆ, ಬಣ್ಣ, ಗುಣಮಟ್ಟ ಮತ್ತು ಮೆರುಗು ಸುಧಾರಿಸಲು ಸಾವಯವ ಗೊಬ್ಬರವನ್ನು ಬಳಸಿ. ಹೆಚ್ಚುವರಿ ಚಿಗುರುಗಳು ಬೆಳೆದಾಗ , ಸಾರಜನಕದ ನೀಡುವುದನ್ನು ಕಡಿಮೆ ಮಾಡಬೇಕು.  ನುಗ್ಗೆಕಾಯಿಗಳು ಸಣ್ಣದಾಗಿದ್ದರೆ ಮತ್ತು ಹೂವುಗಳು ಉದುರುತ್ತಿದ್ದರೆ ರಂಜಕ ಗೊಬ್ಬರದ ಪ್ರಮಾಣವನ್ನು ಹೆಚ್ಚಿಸಿ. ಸಂದರ್ಭ: ಅಗ್ರೋಸ್ಟಾರ ಅಗ್ರೋನೋಮಿ ಎಕ್ಸಲೆನ್ಸ್ನ ಕೇಂದ್ರ
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
533
23