ಕೀಟಗಳ ಜೀವನ ಚಕ್ರTnau.agritech
ನಿಂಬೆಯಲ್ಲಿ ಚಿಟ್ಟೆ ಜೀವನ ಚಕ್ರ
ನಿಂಬೆಯಲ್ಲಿ ಚಿಟ್ಟೆ ಜೀವನ ಚಕ್ರ ನಿಂಬೆ ಚಿಟ್ಟೆಯು ಸಿಟ್ರಸ್ ಕುಟುಂಬದ ತೋಟಗಾರಿಕಾ ಬೆಳೆಯ ಮೇಲೆ ಅತಿಯಾದ ಹಾನಿಯನ್ನುಂಟು ಮಾಡುವ ಕೀಟವಾಗಿದೆ. ಮರಿಹುಳುಗಳು ತಿಳಿ ಹಸಿರು ಕೋಮಲ ಎಲೆಗಳ ಮೇಲೆ ಬಾಧಿಸಲು ಆದ್ಯತೆ ನೀಡುತ್ತವೆ, ಅವು ಹೊಟ್ಟೆಬಾಕತನದಿಂದ ತಿಂದು ಎಲೆಗಳನ್ನು ಬಾಧಿಸುತ್ತವೆ ಮತ್ತು ಮಧ್ಯದ ಎಲೆಗಳ ಶಿರ ನಾಳಗಳನ್ನು ಮಾತ್ರ ಬಿಡುತ್ತವೆ. ತೀವ್ರವಾದ ಬಾಧೆಯಿಂದ ಇಡೀ ಮರವನ್ನು ವಿರೂಪಗೊಳಿಸುತ್ತದೆ. ಕೀಟವನ್ನು ಗುರುತಿಸುವಿಕೆ ಮೊಟ್ಟೆಗಳು: ಮೊಟ್ಟೆಗಳಿಂದ ಮರಿಹುಳು ಹೊರ ಬರುವ ಕಾಲಾವಧಿ 2-3 ದಿನಗಳು, ಮೊಟ್ಟೆಗಳು ಹಳದಿ ಕೆನೆ ಬಣ್ಣದಲ್ಲಿರುತ್ತವೆ, ಹೆಣ್ಣು ಚಿಟ್ಟೆ ಮೊಟ್ಟೆಗಳನ್ನು ಒಂದೊಂದಾಗಿ ಮೊಟ್ಟೆಗಳನ್ನು ಹೆಚ್ಚಾಗಿ ಕೋಮಲ ಎಲೆಗಳ ಮೇಲ್ಮೈಯಲ್ಲಿ ಮತ್ತು ಕೋಮಲ ಕೊಂಬೆಗಳ ಮೇಲೆ ಇಡುತ್ತದೆ.
ಮರಿಹುಳು: ಮರಿಹುಳುವಿನ ಅವಧಿಯು 8-9 ದಿನಗಳವರೆಗೆ ಇರುತ್ತದೆ, ಈ ಕೀಟವು ಅದರ ಜೀವನ ಚಕ್ರಮುಗಿಯುವ ವರೆಗೂ 4 ಮರಿಹುಳುವಿನ ಹಂತಗಳನ್ನು ಮುಗಿಸುತ್ತದೆ. ಮೊದಲ ಹಂತದ ಮರಿಹುಳುಗಳು ಪಕ್ಷಿಗಳ ಹಿಕ್ಕೆಯನ್ನು ಹೋಲುತ್ತವೆ. ಬೆಳೆದ ಮರಿಹುಳುಗಳು ಸಿಲಿಂಡರಾಕಾರದ,ದಪ್ಪ, ಹಸಿರು ಮತ್ತು ಕಂದು ಬಣ್ಣದಾಗಿರುತ್ತದೆ. ಕೋಶಾವಸ್ಥೆ ಹಂತ: ಮರಿಹುಳುವಿನ ಅವಧಿ ಪೂರ್ಣಗೊಂಡ ನಂತರ ಅದು ಕೋಶಾವಸ್ಥೆ ಹಂತಕ್ಕೆ 10-12 ದಿನಗಳವರೆಗೆ ಹೋಗುತ್ತದೆ. ಪ್ರೌಢ : ಪ್ರೌಢ ಕೀಟದ ಅವಧಿ ಒಂದು ವಾರದವರೆಗೆ ಇರುತ್ತದೆ , ಕಪ್ಪು ಬಣ್ಣದ ಚಿಟ್ಟೆ ರೆಕ್ಕೆಗಳ ಮೇಲೆ ಹಲವಾರು ಹಳದಿ ಬಣ್ಣದ ಗುರುತುಗಳನ್ನು ಹೊಂದಿರುತ್ತದೆ. ನಿರ್ವಹಣೆ ಮರಿಹುಳುಗಳನ್ನು ಕೈಯಿಂದ ಆರಿಸಿ ನಾಶಮಾಡಿ. ಪರಜೀವಿ ಕೀಟಗಳಾದ ಟ್ರೈಕೊಗ್ರಾಮ್ ಇವಾನೆಸ್ಸೆನ್ಸ್ ಮತ್ತು ಟೆಲೆನೊಮಸ್ ಪ್ರಭೇದಗಳ ಮೊಟ್ಟೆಗಳ ಮೇಲೆ ಬ್ರಾಕಿಮೆರಿಯಾ ಪ್ರಭೇದಗಳ ಮತ್ತು ಪ್ಟೆರೋಲುಸ್ ಪ್ರಭೇದಗಳ ಕೋಶಾವಸ್ಥೆಯನ್ನು ತೋಟದಲ್ಲಿ ಬಿಡುಗಡೆ ಮಾಡಿ. ಮೂಲ: Tnau.agritech ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ವಿಡಿಯೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ .
33
0
ಇತರ ಲೇಖನಗಳು