AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ನರ್ಸರಿಯಲ್ಲಿ ಈರುಳ್ಳಿ  ನಿರ್ವಹಣೆ
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ನರ್ಸರಿಯಲ್ಲಿ ಈರುಳ್ಳಿ ನಿರ್ವಹಣೆ
ಒಂದು ಎಕರೆ ನರ್ಸರಿಗಾಗಿ ಈರುಳ್ಳಿಯನ್ನು ೪ ರಿಂದ ೫ ಗುಂಟೆ ಭೂಮಿಗೆ ಬೇಕಾಗುತ್ತದೆ._x000D_ ನರ್ಸರಿ ಮಾಡುವ ಜಾಗದಲ್ಲಿ ಗರಿಕೆ ಹುಲ್ಲು ಮತ್ತು ನೀರು ನಿಂತು ಇರುವ ಭೂಮಿಯನ್ನು ಆಯ್ಕೆ ಮಾಡಬಾರದು._x000D_ ಸೂರ್ಯನ ಬೆಳಕು ಇರುವ ಸ್ಥಳದಲ್ಲಿ ನರ್ಸರಿ ಯಾವಾಗಲೂ ಮಾಡಬೇಕು. ಸಗಣಿಗಳಿಂದ ಕಳೆ ಬರುವ ಅಥವಾ ಕಳೆ ಬೆಳೆಯುವ ಸಾಧ್ಯತೆ ಇದ್ದರೆ , ಬೀಜಗಳನ್ನು ಬಿತ್ತನೆ ಮಾಡುವ ಮೊದಲು ಸಸಿ ಮಡಿಯನ್ನು ತೇವಗೊಳಿಸಬೇಕು . ಕಳೆಗಳನ್ನು ಬಿತ್ತಿದ ನಂತರ ಕಳೆಗಳು ಬಂದರೆ ಖುರುಪಿಯಿಂದ ಕಳೆಗಳನ್ನು ತೆಗೆಯಬೇಕು.
• ಸಸಿ ಮಡಿಯಲ್ಲಿ ಸಸಿಗಳನ್ನು ತಯಾರಿಸಬೇಕು. ಸಸಿ ಮಡಿಯಲ್ಲಿ ಸಸಿಗಳು ಏಕರೂಪವಾಗಿ ಬೆಳೆಯುತ್ತವೆ. ಬೇರುಗಳ ಸುತ್ತ ಹೆಚ್ಚೋತ್ತು ನೀರು ನಿಂತಿರುವುದಿಲ್ಲ. ಆದ್ದರಿಂದ ಸಸಿಗಳು ಕೊಳೆಯುವುದಿಲ್ಲ. ನಾಟಿ ಮಾಡುವಾಗ ಮೊಳಕೆ ಸುಲಭವಾಗಿ ಕಿತ್ತು ತೆಗೆಯಬಹುದು. ಸಸಿಗಳು ದಪ್ಪವಾಗಿ ಮತ್ತು ವೇಗವಾಗಿ ಬೆಳೆಯುತ್ತವೆ._x000D_ ಸಸಿ ಮಡಿಯು ಒಂದು ಮೀಟರ್ ಅಗಲ, ಮೂರರಿಂದ ನಾಲ್ಕು ಮೀಟರ್ ಉದ್ದವಿರಬೇಕು. ಸಸಿ ಮಡಿಯ ಎತ್ತರವು ೨ ಸೆಂ.ಮೀ ಆಗಿರಬೇಕು._x000D_ ಸಸಿ ಮಡಿ ತಯಾರಿಸುವಾಗ, ಚೆನ್ನಾಗಿ ಕೊಳೆತ ಸಗಣಿ ಮತ್ತು ಟ್ರೈಕೊಡರ್ಮಾ ಮಿಶ್ರಣವನ್ನು ಸಸಿ ಮಡಿಗೆ ಬೇರೆಸಬೇಕು. _x000D_ ಬೀಜದ ಮೊಳಕೆಯೊಡೆಯುವಿಕೆಯು ಉತ್ತಮವಾಗಿದ್ದರೆ, ೧ ಎಕರೆಗೆ ೨.೫ ರಿಂದ ೩ ಕೆಜಿ ಬೀಜ ಸಾಕು._x000D_ ಬಿತ್ತನೆ ಮಾಡುವ ಮೊದಲು ಬೀಜಗಳನ್ನು ೧.೫ ರಿಂದ ೫ ಗ್ರಾಂ ಥೈರಾಮ್ ಅಥವಾ ಕ್ಯಾಪ್ಟನ್ ಅಥವಾ ಕಾರ್ಬೆಂಡಾಜಿಮ್ ನೊಂದಿಗೆ ಬೀಜೋಪಚಾರ ಮಾಡಬೇಕು._x000D_ ಬೀಜಗಳನ್ನು ಬಿತ್ತಿದ ನಂತರ ಕಾಲುವೆ ನೀರಾವರಿಯ ವೇಗವನ್ನು ಕಡಿಮೆ ಮಾಡಬೇಕು. ಬಿತ್ತನೆಯ ನಂತರ, ೩-೫ ದಿನಗಳ ಮಧ್ಯಂತರದಲ್ಲಿ ಇತರ ನೀರಾವರಿನ್ನು ಕೊಡಬೇಕು._x000D_ ಕಳೆ ಇದ್ದರೆ ಕಳೆ ತೆಗೆಯಬೇಕು. ಸಸ್ಯಗಳ ಸಾಲಿನಲ್ಲಿರುವ ಮಣ್ಣನ್ನು ಸಡಿಲಗೊಳಿಸಬೇಕು ಆದ್ದರಿಂದ ಸಸಿಗಳ ಬೇರುಗಳ ಸುತ್ತ ಗಾಳಿಯಾಡುವುದನ್ನು ಮುಂದುವರಿಸುತ್ತದೆ. ಮರು ನಾಟಿ ಮಾಡುವ ಮೊದಲು ನೀರನ್ನು ಕಡಿಮೆ ಮಾಡಿ. ಆದ್ದರಿಂದ, ಸಸಿಗಳು ಗಟ್ಟಿಯಾಗುತ್ತವೆ. ಸಸಿಗಳನ್ನು ಕಿತ್ತು ತೆಗೆಯುವ ಮುನ್ನ 2 ಗಂಟೆಗಳ ಕಾಲ ಸಸಿಗಳಿಗೆ ನೀರುಣಿಸಬೇಕು, ಆದ್ದರಿಂದಸಸಿಗಳನ್ನು ತೆಗೆಯಲು ಸುಲಭವಾಗುತ್ತದೆ._x000D_ ಮುಂಗಾರಿನ ಹಂಗಾಮಿನಲ್ಲಿ ೩ ರಿಂದ ೭ ದಿನಗಳಲ್ಲಿ ಸಸಿಗಳು ಸಿದ್ಧವಾಗುತ್ತವೆ._x000D_ _x000D_ ಉಲ್ಲೇಖ - ಅಗೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ _x000D_ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
439
2