ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ದಾಳಿಂಬೆ ಹಣ್ಣು ಕೊರೆಕ (ವೈಜ್ಞಾನಿಕ ಹೆಸರು: ಡ್ಯೂಡೋರಿಕ್ಸ್ ಐಸೊಕ್ರೇಟ್ಸ್)
ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ , ಹಿಮಾಚಲ ಪ್ರದೇಶ, ಒಡಿಶಾ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ದಾಳಿಂಬೆಯನ್ನು ಬೆಳೆಯಲಾಗುತ್ತದೆ. ಈ ರಾಜ್ಯಗಳಲ್ಲಿ, ದಾಳಿಂಬೆ ಉತ್ಪಾದಿಸುವಲ್ಲಿ ಮಹಾರಾಷ್ಟ್ರ ಪ್ರಮುಖವಾಗಿದೆ. ಈ ಹಣ್ಣಿನ ಬೆಳೆ ಭಾರತದಲ್ಲಿ ಸರಾಸರಿ 109.2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಹಣ್ಣಿನ ಬೆಳೆಗಳಲ್ಲಿ, ಹೆಚ್ಚಾಗಿ ಹಾನಿ ಉಂಟುಮಾಡುವ ಕೀಟವೆಂದರೆ ಹಣ್ಣು ಕೊರೆಕ ಕೀಟ, ತೊಗಟೆ ಹುಳು, ಹಣ್ಣಿನ ರಸ ಹೀರುವ ಪತಂಗ, ಹಿಟ್ಟು ತಿಗಣೆ ಮತ್ತು ಥ್ರಿಪ್ಸ್. ಇದಲ್ಲದೆ, ಸಾಂದರ್ಭಿಕವಾಗಿ ಗಿಳಿಗಳು ಮತ್ತು ಅಳಿಲುಗಳು ಅಭಿವೃದ್ಧಿ ಹೊಂದುತ್ತಿರುವ ಹಣ್ಣುಗಳನ್ನು ಹಾನಿಯನ್ನುಂಟುಮಾಡತ್ತವೆ. ಹಣ್ಣು ಕೊರೆಕ ಕೀಟದಿಂದ ಮಾತ್ರ ಉಂಟಾಗುವ ಹಾನಿಯು 50% ಕ್ಕಿಂತ ಹೆಚ್ಚು ನಷ್ಟವನ್ನು ವರದಿ ಮಾಡಲಾಗಿದೆ.
ದಾಳಿಂಬೆ ಹಣ್ಣು ಕೊರೆಕ ಕೀಟವನ್ನು ದಾಳಿಂಬೆಯ ಪಾತರಗಿತ್ತಿ ಎಂದೂ ಕರೆಯಲಾಗುತ್ತದೆ. ಪಾತರಗಿತ್ತಿಯು ಹಣ್ಣುಗಳು ಅಥವಾ ಮೊಗ್ಗುಗಳು ಅಥವಾ ಸಣ್ಣ ಹಣ್ಣುಗಳ ದೇಟಿನ ಮೇಲೆ ಮೊಟ್ಟೆಗಳನ್ನು ಇಡುತ್ತವೆ.ಮರಿಹುಳುಗಳು ಹಣ್ಣಿನ ಮೇಲೆ ರಂಧ್ರವನ್ನು ಮಾಡುತ್ತವೆ ಮತ್ತು ಹಣ್ಣಿನ ಒಳಗೆ ಹೋಗುತ್ತವೆ ಮತ್ತು ಬೀಜಗಳನ್ನು ತಿನ್ನುತ್ತವೆ. ಮರಿಹುಳುಗಳಿಂದ ಆದ ರಂಧ್ರದ ಮೂಲಕ ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳು ಹಣ್ಣನ್ನು ಪ್ರವೇಶಿಸುತ್ತವೆ ಮತ್ತು ಅದರಿಂದಾಗಿ ಹಣ್ಣಿನ ಕೊಳೆತ ಸಂಭವಿಸುತ್ತದೆ. ಬಾಧೆಗೊಂಡಿರುವ ಹಣ್ಣಿನಿಂದ ಕೆಟ್ಟ ವಾಸನೆ ಹೊರಸೂಸುತ್ತದೆ. ಹಾಗಾಗಿ ಹಣ್ಣಿನ ಉದುರುವಿಕೆ ಮತ್ತು ಹಣ್ಣಿನ ಗುಣಮಟ್ಟ ಮತ್ತು ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದಾಳಿಂಬೆಯ ಜೊತೆಗೆ, ಈ ಕೀಟವು ಭಾರತೀಯ ನೆಲ್ಲಿಕಾಯಿ, ಲಿಚಿ, ಪೀಚ್, ಸೀಬೆಕಾಯಿ , ಬಾರೆಹಣ್ಣು , ಪೇರಲ ಮತ್ತು ಸಪೋಟಾಗೆ ಹಾನಿಯನ್ನುಂಟುಮಾಡುತ್ತದೆ. ಸಮಗ್ರ ಕೀಟ ನಿರ್ವಹಣೆ :  ಹೊಸ ತೋಟದಲ್ಲಿ, ಧೋಲ್ಕಾ, ಕಾಶ್ಮೀರಿ ಲೋಕಲ್, ಬೆದಾನಾ, ಮುಂತಾದ ಕಡಿಮೆ ತಳಿಗಳಿಗೆ ಆದ್ಯತೆ ನೀಡಿ.  ಕಳೆ ಸಸ್ಯಗಳನ್ನು ತೆಗೆಯಬೇಕು ಹಣ್ಣಿನ ತೋಟವನ್ನು ಸ್ವಚ್ಛವಾಗಿರಿಸಿ.  ಹಣ್ಣಿನ ತೋಟದಲ್ಲಿ ಒಂದು ಬೆಳಕಿನ ಬಲೆ ಅಳವಡಿಸಬೇಕು.  ರಂಧ್ರವಿರುವ ಬಾಧೆಗೊಂಡಿರುವ ಹಣ್ಣುಗಳನ್ನು ಸಂಗ್ರಹಿಸಿ ಅದನ್ನು ನಾಶಮಾಡಿ.  ಬಿದ್ದ ಹಣ್ಣುಗಳನ್ನು ನಿಯತಕಾಲಿಕವಾಗಿ ಸಂಗ್ರಹಿಸಿ ನಾಶಮಾಡಿ.  ಹಣ್ಣು ನಿಂಬೆ ಗಾತ್ರದಲ್ಲಿದಾಗ 30-50 ದಿನಗಳಲ್ಲಿ ಕಾಗದ ಅಥವಾ ಬೆಣ್ಣೆ ಕಾಗದದ ಕೋನ್ ಆಕಾರದ ಟೋಪಿಗೆಯನ್ನು ಅಥವಾ ಕಾಗದದ ಚೀಲಗಳನ್ನು ಅಳವಡಿಸಬೇಕು ಹಾನಿಯ ಪ್ರಮಾಣವನ್ನು ಕಡಿಮೆ ಮಾಡಬಹುದು.  ಮೊಟ್ಟೆ ಪರಾವಲಂಬಿ - ಟ್ರೈಕೊಗ್ರಾಮಾ ಪ್ರಭೇದವನ್ನು 2-3 ಬಾರಿ @ 1 ಲಕ್ಷ ಪ್ರತಿ ಎಕರೆಗೆ ಬಿಡುಗಡೆ ಮಾಡಬೇಕು. ಈ ಕೀಟದ ಮೊಟ್ಟೆಗಳು ಅವುಗಳಿಂದ ಪರಾವಲಂಬಿಯಾಗುತ್ತವೆ.  ಬಾಧೆಯ ಪ್ರಾರಂಭದಲ್ಲಿ, ಎಕರೆಗೆ ಬೇರಿನ ಬೀಜದ ತಿರುಳಿನ ಪುಡಿ @ 500 ಗ್ರಾಂ (5%) ಅಥವಾ ಬೇವಿನ ಆಧಾರಿತ ಕೀಟನಾಶಕ (1% ಇಸಿ) @10 ಮಿಲಿ ಯನ್ನು 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು.  ಬ್ಯಾಸಿಲಸ್ ಥುರಿಂಜಿಯೆನ್ಸಿಸ್, ದುಂಡಾಣು ಆಧಾರಿತ ಪುಡಿ@ 15 ಗ್ರಾಂನ್ನು 10 ಲೀಟರ್ ನೀರಿಗೆ ನೀರಿಗೆ ಬೇರೆಸಿ ಸಿಂಪಡಿಸಬೇಕು.  ಬಾಧೆಯು ಹೆಚ್ಚಿದಾಗ, ಹಣ್ಣುಗಳನ್ನು ಕೊಯ್ಯಲು ಮಾಡಿದ ನಂತರ ಶಿಫಾರಸ್ಸು ಮಾಡಿದ ಕೀಟನಾಶಕವನ್ನು ಸಿಂಪಡಿಸಿ. ಮೂಲ: ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
203
2
ಕುರಿತು ಪೋಸ್ಟ್