AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ದಾಳಿಂಬೆಯ ಕಾಂಡ ಕೊರಕದ  ನಿರ್ವಹಣೆ
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ದಾಳಿಂಬೆಯ ಕಾಂಡ ಕೊರಕದ ನಿರ್ವಹಣೆ
1. ಪೌಷ್ಠಿಕಾಂಶದ ಕೊರತೆಯಿಂದ ಮತ್ತು ಇತರ ಕೀಟಗಳ ದಾಳಿಯಿಂದ ಸಸ್ಯಗಳು ದುರ್ಬಲವಾಗುವುದನ್ನು ತಪ್ಪಿಸಿ. _x005F_x000D_ 2. ಜುಲೈ ನಿಂದ ಸೆಪ್ಟೆಂಬರ್ ವರೆಗೆ ದಾಳಿಂಬೆಯ ಕಾಂಡ ಕೊರಕದ ಬಾಧೆಯಾದ ರಂಧ್ರದಿಂದ ಕಾಂಡ ಕೊರಕದ ಮರಿಹುಳುವನ್ನು ಹೊರ ತೆಗೆದು ಸೀಮೆ ಎಣ್ಣೆ +ನೀರನಲ್ಲಿ ಹಾಕಿ ನಾಶಪಡಿಸಬೇಕು. ._x005F_x000D_ 3. ದಾಳಿಂಬೆಯ ಕಾಂಡ ಕೊರಕ ಬಾಧಿತ ಗಿಡದ ರಂಧ್ರದಲ್ಲಿದ್ದ ಮರಿಹುಳುವನ್ನು ಕಬ್ಬಿಣದ ತಂತಿಯ ಕೊಂಡಿಯ ಮೂಲಕ ಹೊರ ತೆಗೆದು ನಾಶಪಡಿಸಬೇಕು._x005F_x000D_ 4.ಮುಂಗಾರು ಮುಂಚಿತವಾಗಿ ಮತ್ತು ಬಹಾರ್ ತೆಗೆದುಕೊಳ್ಳುವ ಮೊದಲು ಸತ್ತ ಶಾಖೆಗಳ ಸಮರುವಿಕೆಯನ್ನು._x005F_x000D_ 5. ತೋಟದ ಒಳಗೆ ಅಥವಾ ಸುತ್ತಮುತ್ತಲು ಕೊಳೆತ ಮರಗಳ ರಾಶಿಯನ್ನು ಹಾಗೆಯೆ ಇಡಬೇಡಿ._x005F_x000D_ 6. 200 ವ್ಯಾಟಿನ ಸೋಡಿಯಂ ಬಲ್ಬ್ನೊಂದಿಗೆ ಬೆಳಕಿನ ಬಲೆಗಳನ್ನು ಸ್ಥಾಪನೆ ಮಾಡುವ ಮೂಲಕ ಪ್ರೌಢ ಕೀಟವನ್ನು ಆಕರ್ಷಿಸಿ ನಾಶಪಡಿಸಬಹುದು.
ರಾಸಾಯನಿಕ ನಿರ್ವಹಣೆ: 1. ಕೆಂಪುಮಣ್ಣಿನ ಲೇಪನದ ಉಪಚಾರ. 10 ಲೀಟರ್ ನೀರು + ಕೆಂಪು ಮಣ್ಣು (4 ಕೆಜಿ) + ಕ್ಲೋರಿಪಿರಫೊಸ್ 20 ಇಸಿ (20 ಮಿಲಿ) + ತಾಮ್ರ ಆಕ್ಸಿಕ್ಲೋರೈಡ್ (25 ಗ್ರಾಂ) 2. ಎರಡನೇ ವರ್ಷದ ಬೆಳೆ ನಂತರ 1-2 ಅಡಿಗಳಷ್ಟು ಮೇಲಕ್ಕೆ ಕುಂಚದ(ಬ್ರಶ್) ಸಹಾಯದಿಂದ ಕೀಟನಾಶಕದ ಲೇಪನವನ್ನು ಹಚ್ಚಬೇಕು 3.ಡೈಕ್ಲೋರೊವೊಸ್ 76 EC @ 70-80 ಮಿಲಿ ಪ್ರತಿ ಲೀಟರ್ನೊಂದಿಗೆ ಹಾನಿಗೊಳಗಾದ ಕಾಂಡಗಳಿಗೆ ಕೀಟನಾಶಕವನ್ನು ಇಂಜೆಕ್ಷನ್ನಿಂದ ಕೊಡಬೇಕು. 4.ಬಾಧೆಗೊಂಡ ಸುರಂಗ ರಂದ್ರ ತನಕ ಒತ್ತಿ ಬಾಟಲಿಯ ಸಹಾಯದಿಂದ ಡೈಕ್ಲೋರೊವೊಸ್ ಕೀಟನಾಶಕವನ್ನು ರಂದ್ರಕ್ಕೆ ಸುರಿದು ತದನಂತರ ಮಣ್ಣಿನಿಂದ ಮುಚ್ಚಿ. ಮೂಲ: ರಾಷ್ಟೀಯ ದಾಳಿಂಬೆ ಸಂಶೋಧನಾ ಕೇಂದ್ರ, ಸೋಲಾಪುರ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
1
0