AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ದಾಳಿಂಬೆಯಲ್ಲಿ ಜಂತು ಹುಳುವಿನ  ಜೈವಿಕ ಹತೋಟಿ ಕ್ರಮಗಳು
ಸಾವಯವ ಕೃಷಿಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ದಾಳಿಂಬೆಯಲ್ಲಿ ಜಂತು ಹುಳುವಿನ ಜೈವಿಕ ಹತೋಟಿ ಕ್ರಮಗಳು
ಇತ್ತೀಚಿನ ದಿನಗಳಲ್ಲಿ, ಎಲ್ಲಾ ಬೆಳೆಗಳಲ್ಲಿ ಜಂತು ಹುಳುವಿನ ಪ್ರಮುಖ ಸಮಸ್ಯೆಯಾಗಿದೆ. ಹೆಚ್ಚು ತೇವಾಂಶವನ್ನು ಹೊಂದಿರುವ ಮಣ್ಣಿನಿಂದಾಗಿ, ಸಸ್ಯದ ಬೇರುಗಳ ಮೇಲೆ ಜಂತು ಹುಳುವಿನ ಬಾಧೆ ಅಥವಾ ಗಂಟುಗಳ ರಚನೆಯು ಗಿಡಗಳ ಬೇರುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಜಂತು ಹುಳು ಗಾತ್ರದಲ್ಲಿ ಅತಿ ಸೂಕ್ಷ್ಮವಾಗಿರುತ್ತದೆ ಮತ್ತು ದಾಳಿಂಬೆಯಲ್ಲಿ ತುಂತುರು ಬೇರುಗಳಲ್ಲಿ ವಾಸಿಸುವ ಮೂಲಕ ಬೆಳೆಯನ್ನು ಹಾನಿಗೊಳಿಸುತ್ತದೆ. ಇದು ಬೇರುಗಳ ಮೇಲೆ ಗಂಟುಗಳ ರಚನೆಯಿಂದಾಗಿ ಪರಿಣಾಮ ಬೀರುತ್ತದೆ ಮತ್ತು ಸಸ್ಯಗಳ ಪೋಷಕಾಂಶಗಳ ಕೊರತೆಯನ್ನುಂಟು ಮಾಡುತ್ತವೆ. ಬಾಧೆಯಿಂದಾಗಿ ಸಸ್ಯಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ಜಂತು ಹುಳುಗಳು ದಾಳಿಂಬೆ ತೋಟದಲ್ಲಿ ಸೊರಗು ರೋಗಕ್ಕೆ ಕಾರಣವಾಗುತ್ತವೆ. ದಾಳಿಂಬೆ ತೋಟದಲ್ಲಿ ಜಂತು ಹುಳುಗಳುಗಳನ್ನು ನಿಯಂತ್ರಿಸಲು ನಿಯತಕಾಲಿಕವಾಗಿ ಈ ಜೈವಿಕ ನಿರ್ವಹಣಾ ಪದ್ಧತಿಗಳನ್ನು ಅನುಸರಿಸಿ: • ದಾಳಿಂಬೆಯ ಹೊಸ ಹಣ್ಣಿನ ತೋಟವನ್ನು ನೆಡುವ ಮೊದಲು, ಮಣ್ಣಿನ ಸೌರೀಕರಣವನ್ನು ಮಾಡಬೇಕು, ಇದು ಮಣ್ಣಿನಲ್ಲಿ ಜಂತು ಹುಳುಗಳು ನಿಯಂತ್ರಿಸಲು ಸಹಾಯ ಮಾಡುತ್ತದೆ. • ದಾಳಿಂಬೆ ತೋಟಗಳಲ್ಲಿ ಅಂತರ ಬೆಳೆಗಳಾಗಿ -ಟೊಮೇಟೊ, ಬದನೆಕಾಯಿ, ಮೆಣಸಿನಕಾಯಿ ಮತ್ತು ಬೆಂಡೆಕಾಯಿ ಇತ್ಯಾದಿ ಗಳನ್ನು ಬೆಳೆಯಬೇಡಿ. • ದಾಳಿಂಬೆಯಲ್ಲಿ ಚಾಟಣಿ ನಂತರ, ಆಫ್ರಿಕನ್ ಚೆಂಡು ಹೂವುಗಳನ್ನು ತೋಟದಲ್ಲಿ ಮತ್ತು ಗಿಡಗಳ ಸುತ್ತಲೂ ನೆಡಬೇಕು. • ಮರಗಳ ಸುತ್ತಲೂ ರಿಂಗ್ ಬೇಸಿನ್ ಮಾಡಿ ಮತ್ತು ಬೇವಿನ ಹಿಂದಿಯನ್ನು ಪ್ರತಿಯೊಂದು ಗಿಡಕ್ಕೆ 2-3 ಕೆಜಿ ಮರಗಳ ಸುತ್ತಲೂ ಹಾಕಬೇಕು. • ಟ್ರೈಕೊಡರ್ಮಾಪ್ಲಸ್ @ 500 ಗ್ರಾಂ ಮತ್ತು ಪೆಸಿಲೋಮೈಸಸ್ ಲಿಲಾಸಿನಸ್ @ 1-3 ಕೆಜಿ ಪ್ರತಿ ಎಕರೆಗೆ ಕೊಟ್ಟಿಗೆ ಗೊಬ್ಬರದ ಜೊತೆ ಮಣ್ಣಿನ ಮೂಲಕ ನೀಡಬೇಕು ಮತ್ತು ಅದನ್ನು ನಿಯಮಿತವಾಗಿ 30 ದಿನಗಳ ಮಧ್ಯಂತರದಲ್ಲಿ ನೀಡಬೇಕು. ಉಲ್ಲೇಖ: ಆಗ್ರೋಸ್ಟಾರ್ ಅಗ್ರೋನೋಮಿ ಸೆಂಟರ್ ಓಫ್ ಎಕ್ಸೆಲೆನ್ಸ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
353
3