AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ದಾಳಿಂಬೆಯಲ್ಲಿ ಜಂತುಹುಳುವಿನ ನಿಯಂತ್ರಣ
ಸಾವಯವ ಕೃಷಿಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ದಾಳಿಂಬೆಯಲ್ಲಿ ಜಂತುಹುಳುವಿನ ನಿಯಂತ್ರಣ
ಭಾರತದ ಅನೇಕ ರಾಜ್ಯಗಳಲ್ಲಿ ದಾಳಿಂಬೆ ಬೆಳೆಯುವ ವರದಿಗಳು ಹೆಚ್ಚುತ್ತಿವೆ. ಹಲವಾರು ಕೀಟಪೀಡೆಗಳು ಮತ್ತು ರೋಗಗಳು ದಾಳಿಂಬೆ ಗಿಡವನ್ನು ಬಾಧಿಸುತ್ತವೆ, ಇದರಿಂದಾಗಿ ನಷ್ಟವಾಗುತ್ತದೆ. ದಾಳಿಂಬೆಯಲ್ಲಿ ಹೆಚ್ಚು ಸ್ಪಷ್ಟವಾಗಿ ಕಣ್ಣುಗಳಿಗೆ ಕಾಣದ ಜಂತು ಹುಳುವಿನ ಬಾಧೆ ಹೆಚ್ಚುತ್ತಿದೆ. ಆದ್ದರಿಂದ ಸರಿಯಾದ ಸಮಯದಲ್ಲಿ ಜಂತು ಹುಳುಗಳನ್ನು ನಿಯಂತ್ರಿಸುವುದು ಅವಶ್ಯಕ.
ಕೆಳಗಿನ ಹತೋಟಿ ಕ್ರಮಗಳನ್ನು ಕೈಗೊಳ್ಳಿ: 1. ಕಸಿ ಮಾಡುವಾಗ ಜಂತು ಹುಳುಗಳಿಂದ ಬಾಧೆಗೆ ಒಳಗಾದ ಮಣ್ಣನ್ನು ಬಳಸಬೇಡಿ. 2. ದಾಳಿಂಬೆ ನಾಟಿ ಮಾಡುವ ಮೊದಲು 1 ರಿಂದ 2 ವರ್ಷಗಳ ವರೆಗೆ ಹೊಲಗಳಲ್ಲಿ ತರಕಾರಿಗಳು ಬೆಳೆಗಳನ್ನು ಬೆಳೆಸಬಾರದು. 3. ದಾಳಿಂಬೆ ನಾಟಿ ಮಾಡುವ ಮೊದಲು, 2-3 ಬಾರಿ ಆಳವಾದ ಉಳುಮೆ ಮಾಡಿ ನಂತರ ಬೇಸಿಗೆಯಲ್ಲಿ ಮಣ್ಣನ್ನು ಕಾಯಲು ಬಿಡಿ. 4. ದಾಳಿಂಬೆ ಕಸಿ ಮಾಡುವಾಗ, ನಾಟಿ ಮಾಡುವ ಗುಂಡಿಯಲ್ಲಿ ಬೇವಿನ ಹಿಂಡಿಯನ್ನು ಬಳಸಿ. 5. ದಾಳಿಂಬೆಯಲ್ಲಿ ಟೊಮ್ಯಾಟೊ, ಬದನೆಕಾಯಿ, ಮೆಣಸಿನಕಾಯಿ, ಓಕ್ರಾ, ಇತ್ಯಾದಿಗಳನ್ನು ಬೆಳೆಯ ಬೇಡಿ 6. ದಾಳಿಂಬೆ ಮರದಲ್ಲಿ ಹೂಬಿಡುವ ಸಮಯದಲ್ಲಿ, ಮರದ ಮೂಲದಲ್ಲಿ ಪ್ರತಿ ಗಿಡಕ್ಕೆ 1 ರಿಂದ 1.5 ಕೆಜಿ ಬೇವಿನ ಹಿಂಡಿಯನ್ನು ಬಳಸಿ. 7. ಜಂತುಹುಳುವನ್ನು ನಿಯಂತ್ರಿಸಲು ಸಾವಯವ ಗೊಬ್ಬರವನ್ನು ಬಳಸಬೇಕು. ಉದಾಹರಣೆಗೆ, ಜಂತುಹುಳುಗಳನ್ನು ನಿಯಂತ್ರಿಸಲು ಪ್ಯಾಸಿಲೋಮೈಸಿಸ್, ಟ್ರೈಕೊಡರ್ಮಾ ಪ್ಲಸ್, ಸ್ಯೂಡೋಮೊನಾಸನ್ನು ಬಳಸಿ. ಮೂಲ: ಆಗ್ರೊಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
248
7