ಸಾವಯವ ಕೃಷಿಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ತೊಗರಿ ಬೆಳೆಯಲ್ಲಿ ಬೀಜೋಪಚಾರದ ಪ್ರಯೋಜನಗಳು
ಇತ್ತೀಚಿಗೆ ರೈತರು ತೊಗರಿ ಬೆಳೆಯನ್ನು ನಗದು ಬೆಳೆಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿದ್ದಾರೆ. ತೊಗರಿ ಬಿತ್ತನೆಯ ಆರಂಭದಿಂದಲೂ ಈ ಬೆಳೆಯ ಕಡೆ ಗಮನ ವಹಿಸಿದರೆ, ಬೆಳೆಯ ಇಳುವರಿಯನ್ನು ಹೆಚ್ಚಿಸುವ ಮೂಲಕ ರೈತರಿಗೆ ಆರ್ಥಿಕವಾಗಿ ಲಾಭ ಸಿಗುತ್ತದೆ. ಇಂದು, ನಾವು ತೊಗರಿಯಲ್ಲಿ ಬೀಜೋಪಚಾರದ ಪ್ರಯೋಜನಗಳನ್ನು ನೋಡೋಣ.
 ತೊಗರಿ ಬೆಳೆಯಲ್ಲಿ ಸೊರಗು ರೋಗವನ್ನು ತಡೆಗಟ್ಟಲು, ಟ್ರೈಕೊಡರ್ಮಾ ಪ್ಲಸ್ @ 1 ಗ್ರಾಂ / ಕೆಜಿ ಬೀಜಗಳಿಗೆ ಬೀಜೋಪಚಾರ ಮಾಡುವುದು ಸೂಕ್ತವಾಗಿದೆ. ಬೀಜೋಪಚಾರ ಮಾಡುವಾಗ ಮೊದಲನೆಯದಾಗಿ ರಾಸಾಯನಿಕ ಕೀಟನಾಶಕದೊಂದಿಗೆ ಬೀಜೋಪಚಾರ ಮಾಡಬೇಕು ಮತ್ತು ನಂತರ ಜೈವಿಕ ಕೀಟನಾಶಕದೊಂದಿಗೆ ಬೀಜೋಪಚಾರ ಮಾಡಬೇಕು._x000D_  ಮಣ್ಣಿನಲ್ಲಿ ಸ್ಥಿರವಾಗಿರುವ ರಂಜಕವನ್ನು ಲಭ್ಯವಾಗುವಂತೆ ಮಾಡಲು ರಂಜಕ ಕರಗಿಸುವ ಅಣುಜೀವಿಯನ್ನು ೨೫೦ ಗ್ರಾಂ ಪ್ರತಿ ೧೦ ಕೆಜಿ ಬೀಜಕ್ಕೆ ಬೀಜೋಪಚಾರ ಮಾಡಬೇಕು. ಆದ್ದರಿಂದ, ಉತ್ಪಾದನೆಯನ್ನು ೧೫ ರಿಂದ ೨೦ % ಪ್ರತಿಶತದಷ್ಟು ಇಳುವರಿಯಲ್ಲಿ ಹೆಚ್ಚಳವನ್ನು ಕಾಣಬಹುದು._x000D_  ಬೀಜೋಪಚಾರ ಮಾಡುವುದರಿಂದ ಬೀಜದ ಮೊಳಕೆಯೊಡೆಯುವಿಕೆಯನ್ನು ಸುಧಾರಿಸುತ್ತದೆ._x000D_  ಭೂಮಿಯ ಉತ್ಪಾದಕತೆ ಮತ್ತು ಫಲವತ್ತತೆಯನ್ನು ಹೆಚ್ಚಿಸುತ್ತದೆ._x000D_  ರಾಸಾಯನಿಕ ಗೊಬ್ಬರಗಳಿಗಿಂತ ಜೈವಿಕ ಗೊಬ್ಬರ ಬಹಳ ಅಗ್ಗವಾಗಿದೆ. ಇದು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಕಾರಣವಾಗುತ್ತದೆ._x000D_  ಬೀಜೋಪಚಾರ ಉತ್ಪನ್ನದೊಂದಿಗೆ ಬೆಳೆಯ ಗುಣಮಟ್ಟವನ್ನು ಕೂಡಾ ಸುಧಾರಿಸುತ್ತದೆ._x000D_ ಮೂಲ - ಆಗ್ರೋಸ್ಟಾರ್ ಅಗ್ರೋನೋಮಿ ಸೆಂಟರ್ ಆಫ್ ಎಕ್ಸೆಲೆನ್ಸ್_x000D_
171
1
ಇತರ ಲೇಖನಗಳು