AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ತೊಗರಿಯಲ್ಲಿ ಕಾಯಿಕೊರಕದ ಸಮಗ್ರ ಕೀಟ ನಿರ್ವಹಣೆ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ತೊಗರಿಯಲ್ಲಿ ಕಾಯಿಕೊರಕದ ಸಮಗ್ರ ಕೀಟ ನಿರ್ವಹಣೆ
ಭಾರತದ ಹೆಚ್ಚಿನ ಭಾಗಗಳಲ್ಲಿ ಉತ್ಪತ್ತಿಯಾಗುವ ಬೆಳೆಗಳಲ್ಲಿ ತೊಗರಿಯು ಒಂದಾಗಿದೆ. ಈ ಬೆಳೆಯನ್ನು ಮೆಕ್ಕೆಜೋಳ ಅಥವಾ ಹತ್ತಿಯೊಂದಿಗೆ ಅಂತರ ಬೆಳೆಯಾಗಿಯೂ ಹಲವಾರು ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ. ಬೀಜೋತ್ಪತ್ತಿ ಹಂತದಲ್ಲಿ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳದಿದ್ದರೆ, ವಿವಿಧ ರೀತಿಯ ಕಾಯಿ ಕೊರಕಗಳು ಆರ್ಥಿಕ ಹಾನಿಯನ್ನುಂಟುಮಾಡುತ್ತವೆ. ವಿವಿಧ ಕಾಯಿ ಕೊರಕಗಳ ಜೊತೆಗೆ, ಸಸ್ಯಹೇನುಗಳು, ಗೆದ್ದಲುಗಳು,ಹಿಟ್ಟು ತಿಗಣೆಗಳು, ಜಿಗಿಹುಳುಗಳು, ಕಾಯಿ ತಿಗಣೆಗಳು ಇತ್ಯಾದಿ ಕೀಟಪೀಡೆಗಳು ಈ ಬೆಳೆಯಲ್ಲಿ ಕಂಡುಬರುತ್ತವೆ. ಕಾಯಿ ಕೊರಕಗಳಲ್ಲಿ, ಕಾಯಿ ನೊಣ, ನೀಲಿ ಚಿಟ್ಟೆ, ಕಾಯಿ ಕೊರಕ, ಚುಕ್ಕೆ ಕಾಯಿ ಕೊರಕಗಳು ಹೂಬಿಡುವ ಮತ್ತು ಕಾಯಿಯಾಗುವ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡುತ್ತದೆ.ಕಾಯಿ ನೊಣ ಮತ್ತು ಕಾಯಿ ಕೊರಕದ ಬಾಧೆಯು ಮಧ್ಯಮ-ತಡವಾಗಿ ಮತ್ತು ತಡವಾಗಿ ಬಿತ್ತನೆ ಮಾಡುವ ತಳಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸಾಮಾನ್ಯವಾಗಿ, ಕಾಯಿ ಕೊರಕದ ಜನಸಂಖ್ಯೆಯು ಗೊಂಚಲು ಪ್ರಕಾರದ ಕಾಯಿಯ ತಳಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತವೆ. ಕಾಯಿ ಕೊರಕದ ಮರಿಹುಳುಗಳು ರಂಧ್ರವನ್ನು ಮಾಡುವ ಮೂಲಕ ಮತ್ತು ಅಭಿವೃದ್ಧಿ ಹೊಂದುತ್ತಿರುವ ಬೀಜಗಳಿಗೆ ತಿನ್ನುವ ಮೂಲಕ ಕಾಯಿಗೆ ಪ್ರವೇಶಿಸುತ್ತವೆ. ಕಾಯಿ ನೊಣದ ಮರಿಹುಳುಗಳು ಸಹ ಕಾಯಿಯನ್ನು ಪ್ರವೇಶಿಸಿ ಒಳಗಿನಿಂದ ಬಾಧಿಸುತ್ತವೆ. ಆರಂಭದಲ್ಲಿ, ಕಾಯಿ ಕೊರಕಗಳು ಬೀಜಕೋಶಗಳ ಎಪಿಡರ್ಮಲ್ ಪದರವನ್ನು ಕೆರೆದು ನಂತರ ಬೀಜಗಳಿಗೆ ಪ್ರವೇಶಿಸಿ ಬಾಧಿಸುತ್ತವೆ. ಸಮಗ್ರ ಕೀಟ ನಿರ್ವಹಣೆ:  ಕಳೆಯ ಆಸರೆಯ ಸಸ್ಯಗಳನ್ನು ಹೊಲದ ಬದುಗಳಿಂದ ನಾಶಮಾಡಿ.  ಕಾಯಿಕೊರಕದ (ಪ್ಲ್ಯೂಮ್ ಚಿಟ್ಟೆ ) ಜನಸಂಖ್ಯೆಯು ಸಾಮಾನ್ಯವಾಗಿ ಗೊಂಚಲುಗಳಲ್ಲದ ತೊಗರಿ ತಳಿಗಳಲ್ಲಿ ಕಡಿಮೆ ಇರುತ್ತದೆ.  ಮೆಕ್ಕೆ ಜೋಳದ ಬೆಳೆಯೊಂದಿಗೆ ಅಂತರ ಬೆಳೆಯಾಗಿ ಬೆಳೆಸುವ ತೊಗರಿಯಲ್ಲಿ ಹಸಿರು ಹುಳುವಿನ ಬಾಧೆ ಕಡಿಮೆ.  ಹೂಬಿಡುವಿಕೆಯ ಪ್ರಾರಂಭದ ಮೇಲೆ ಕಾಯಿ ಕೊರಕ (ಹೆಲಿಕೊವರ್ಪಾ)ಗಾಗಿ 5 ಬಲೆಗಳನ್ನು ಸ್ಥಾಪಿಸಿ ಮತ್ತು ಸಾಕಷ್ಟು ಸಂಖ್ಯೆಯಲ್ಲಿ ಪತಂಗಗಳನ್ನು ಗಮನಿಸಿದರೆ, ಇನ್ನೂ ಹೆಚ್ಚಿನ ಬಲೆಗಳನ್ನು ಸ್ಥಾಪಿಸಿ.  ಕ್ಷೇತ್ರದಲ್ಲಿ ವಿದ್ಯುತ್ತಿನ ಒಂದು ಬೆಳಕಿನ ಬಲೆ ಸ್ಥಾಪಿಸಿ ನಿರ್ವಹಿಸಬಹುದು.  ಕೀಟಗಳ ಪ್ರಾರಂಭದ ನಂತರ, ಬೇವಿನ ಬೀಜದ ತಿರುಳಿನ ಪುಡಿಯನ್ನು 10 ಲೀಟರ್ ನೀರಿಗೆ 500 ಗ್ರಾಂ ಬೇರೆಸಿ ಸಿಂಪಡಿಸಿ (5%).  HaNPV @ 250 LE ನಂಜಾಣುಜನ್ಯ ಕೀಟನಾಶಕವನ್ನು ಪ್ರತಿ ಹೆಕ್ಟಾರೆಗೆ ಸಿಂಪಡಿಸಿ.  ಬೆಸಿಲಸ್ ಥುರಿಂಜಿಯೆನ್ಸಿಸ್ (ಬಿಟಿ) ಪುಡಿ @ 15 ಗ್ರಾಂ ಅಥವಾ ಬೌವೇರಿಯಾ ಬಸ್ಸಿಯಾನಾ ಶಿಲೀಂಧ್ರ ಆಧಾರಿತ ಪುಡಿಯನ್ನು40 ಗ್ರಾಂನ್ನು 10 ಲೀಟರ್ ನೀರಿಗೆ .  ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಪರಭಕ್ಷಕ ಪಕ್ಷಿಗಳನ್ನು ಆಕರ್ಷಿಸಲು ನಿಯೋಜನೆ ಮಾಡಿ .  ಸಸ್ಯಗಳಲ್ಲಿ ಹೂಬಿಡುವಾಗ, ಅಸೆಫೇಟ್ 75 ಎಸ್‌ಪಿ @ 15 ಗ್ರಾಂ ಅಥವಾ ಎಮಾಮ್ಯಾಕ್ಟಿನ್ ಬೆಂಜೊಯೇಟ್ 5 ಎಸ್‌ಜಿ 3 ಗ್ರಾಂ ಅಥವಾ ಇಂಡೊಕ್ಸಾಕಾರ್ಬ್ 15.8 ಇಸಿ 4 ಮಿಲಿ ಅಥವಾ ಥಿಯೋಡಿಕಾರ್ಬ್ 75 ಡಬ್ಲ್ಯೂಪಿ 20 ಗ್ರಾಂ ಅಥವಾ ಕ್ಲೋರಾಂಟ್ರಾನಿಲಿಪ್ರೊಲ್ 18.5 ಎಸ್‌ಸಿ 3 ಮಿಲಿ ಅಥವಾ ಫ್ಲುಬೆಂಡಿಯಾಮೈಡ್ 480 ಎಸ್‌ಸಿ 3 ಮಿಲಿ ಅಥವಾ ಸ್ಪಿನೋಸಾಡ್ 45 ಎಸ್‌ಸಿ 4 ಮಿಲಿ ಅಥವಾ ಡೆಲ್ಟಾಮೆಥ್ರಿನ್ 1% + ಟ್ರಯಾಜೋಫೋಸ್ 35% ಇಸಿ 10 ಮಿಲಿ ಅಥವಾ ಫ್ಲುಬೆಂಡಿಯಾಮೈಡ್ 20 ಡಬ್ಲ್ಯೂಜಿ 5 ಗ್ರಾಂ ಅಥವಾ ಕ್ಲೋರ್ಪಿರಿಫೋಸ್ 50% + ಸೈಪರ್‌ಮೆಥ್ರಿನ್ 5% ಇಸಿ 10 ಮಿಲಿ ಅಥವಾ ಪ್ರೊಫೆನೋಫೋಸ್ 40% + ಸೈಪರ್‌ಮೆಥ್ರಿನ್ 4% ಇಸಿ 10 ಮಿಲಿ 10 ಲೀಟರ್ ನೀರಿಗೆ. ಪ್ರತಿ ಸಿಂಪಡಣೆಯಲ್ಲಿಯೂ ಕೀಟನಾಶಕವನ್ನು ಬದಲಾಯಿಸಿ.  ತರಕಾರಿಗಾಗಿ ಬೆಳೆದ ತೊಗರಿಯಲ್ಲಿ ಮೊನೊಕ್ರೊಟೊಫಾಸನ್ನು ಸಿಂಪಡಿಸಬೇಡಿ. ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
83
1