AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ತೈಲಬೀಜ ಉತ್ಪಾದನೆಯನ್ನು ಹೆಚ್ಚಿಸಲು ರಾಷ್ಟ್ರೀಯ ಖಾದ್ಯ ತೈಲ ಮಿಷನನ್ನು ಬಜೆಟ್ನಲ್ಲಿ ತರಲು ಯೋಜನೆ
ಕೃಷಿ ವಾರ್ತಾಔಟ್ ಲುಕ್ ಕೃಷಿ
ತೈಲಬೀಜ ಉತ್ಪಾದನೆಯನ್ನು ಹೆಚ್ಚಿಸಲು ರಾಷ್ಟ್ರೀಯ ಖಾದ್ಯ ತೈಲ ಮಿಷನನ್ನು ಬಜೆಟ್ನಲ್ಲಿ ತರಲು ಯೋಜನೆ
ನವದೆಹಲಿ ಖಾದ್ಯ ತೈಲಗಳ ಮೇಲಿನ ಆಮದಿನ ಅವಲಂಬನೆಯನ್ನು ಕಡಿಮೆ ಮಾಡುವ ಸಲುವಾಗಿ, ಕೇಂದ್ರ ಸರ್ಕಾರವು ರಾಷ್ಟ್ರೀಯ ಖಾದ್ಯ ತೈಲ ಮಿಷನ್ (ಎನ್‌ಎಂಇಒ) ಯನ್ನು ಬಜೆಟ್‌ನಲ್ಲಿ ಪರಿಚಯಿಸಲು ಯೋಜಿಸುತ್ತಿದೆ, ಇದು ದೇಶೀಯವಾಗಿ ತೈಲಬೀಜಗಳ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ದೇಶದಲ್ಲಿ ಖಾದ್ಯ ತೈಲಗಳ ವಾರ್ಷಿಕ ಬಳಕೆ ಸುಮಾರು 250 ಲಕ್ಷ ಟನ್ ಆಗಿದ್ದರೆ, ಉತ್ಪಾದನೆಯು ಕೇವಲ 1 ಮಿಲಿಯನ್ ಟನ್ ಮಾತ್ರವಾಗಿದೆ. ಆದ್ದರಿಂದ, ವಾರ್ಷಿಕವಾಗಿ ಸುಮಾರು 150 ಲಕ್ಷ ಟನ್ ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಎನ್‌ಎಂಇಒ ಕರಡು ಬಹುತೇಕ ಸಿದ್ಧವಾಗಿದೆ. ಅನುಮೋದನೆಯ ನಂತರ ಇದನ್ನು ಪ್ರಾರಂಭಿಸಲಾಗುವುದು. ಮುಂಬರುವ ಹಣಕಾಸು ವರ್ಷದಲ್ಲಿ ಇದನ್ನು ಜಾರಿಗೆ ತರಲು ಯೋಜಿಸಲಾಗಿದೆ. ರೈತರು ಎಣ್ಣೆಬೀಜದ ಬೆಳೆಗಳನ್ನು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ, ಹಾಗೆಯೇ ಎಣ್ಣೆಕಾಳು ಬೆಳೆಗಳ ಉತ್ಪಾದನೆಯು ಗೋಧಿ ಮತ್ತು ಭತ್ತಕ್ಕಿಂತಲೂ ಪ್ರತಿ ಹೆಕ್ಟೇರಿಗೆ ಕಡಿಮೆಯಾಗಿದೆ. ಇದರಿಂದಾಗಿ ರೈತರು ಎಣ್ಣೆಬೀಜದ ಕೃಷಿಗೆ ಆದ್ಯತೆ ನೀಡುವುದಿಲ್ಲ. ಎನ್‌ಎಂಇಒದಿಂದ ಎಣ್ಣೆಬೀಜಗಳ ಉತ್ಪಾದನೆಯನ್ನು ಹೆಚ್ಚಿಸಲು ಒತ್ತು ನೀಡಲಾಗುವುದು. ಇದರ ಅಡಿಯಲ್ಲಿ, ಎಣ್ಣೆಬೀಜದ ಬೆಳೆಗಳ ರೈತರಿಗೆ ಸಮಂಜಸವಾದ ಬೆಲೆಯನ್ನು ನೀಡುವುದರ ಜೊತೆಗೆ, ಆಮದು ಮಾಡಬಹುದಾದ ಖಾದ್ಯ ತೈಲಗಳ ಸುಂಕ ಹೆಚ್ಚಳ ಮತ್ತು ಇತರ ಕ್ರಮಗಳನ್ನು ಸಹ ಸೇರಿಸಲಾಗಿದೆ. ಎಣ್ಣೆಕಾಳುಗಳಲ್ಲಿ ಸ್ವಾವಲಂಬಿಯಾಗಲು, ಮುಂದಿನ ಐದು ವರ್ಷಗಳಲ್ಲಿ ಎಣ್ಣೆಬೀಜಗಳನ್ನು ಸುಮಾರು 480 ಲಕ್ಷ ಟನ್‌ಗಳಿಗೆ ಹೆಚ್ಚಿಸುವ ಗುರಿಯನ್ನು ಎನ್‌ಎಂಇಒನಲ್ಲಿ ನಿಗದಿಪಡಿಸಲಾಗಿದೆ. ಮೂಲ - ಔಟ್ ಲುಕ್ ಅಗ್ರಿಕಲ್ಚರ್ , 11 ಜನವರಿ 2020 ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ,ಈ ಫೋಟೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
79
0