ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ತರಕಾರಿ ಬೆಳೆಗಳ ಆರೋಗ್ಯಕರ ಸಸಿಗಳನ್ನು ತಯಾರಿಸುವ ವಿಧಾನ
ತರಕಾರಿ ಬೆಳೆಗಳಲ್ಲಿ ಗುಣಮಟ್ಟದ ಮತ್ತು ಆರೋಗ್ಯಕರ ಸಸಿಗಳ ಉತ್ಪಾದನೆ ಮತ್ತು ಉತ್ಪಾದನೆ ಅಭಿವೃದ್ಧಿಗೆ ಸರಿಯಾದ ನಾಟಿ ಅಗತ್ಯ. ಹಸರುಮನೆ ಪ್ಲಾಸ್ಟಿಕ್ ಟ್ರೇ, ಕೋಕೋಪೀಟ್ ಇಲ್ಲವಾದಲ್ಲಿ , ಹೊಲದಲ್ಲಿ ಸೂಕ್ತವಾದ ಸ್ಥಳವನ್ನು ಆರಿಸುವ ಮೂಲಕ ಸಸಿಮಡಿಯನ್ನು ತಯಾರಿಸಿ. ಸ್ಥಳವನ್ನು ಆಯ್ಕೆಮಾಡುವಾಗ, ದೊಡ್ಡ ಮರದ ಕೆಳಭಾಗ ಅಥವಾ ಅಣೆಕಟ್ಟಿನ ಬದಿ ಮತ್ತು ಸ್ಥಳವು ತುಂಬಾ ಒದ್ದೆಯಾಗಿರಬಾರದು , ಅದನ್ನು ನೋಡಿಕೊಳ್ಳಿ ಸಸಿಮಡಿಯನ್ನು ಸಿದ್ಧಪಡಿಸುವ ಮೊದಲು ಹೊಲದಲ್ಲಿ ನೇಗಿಲಿನ ಸಹಾಯದಿಂದ ಉಳುಮೆ ಮಾಡಬೇಕು. ಹೊಲದಲ್ಲಿ ಬೆಳೆಗಳಿಂದ ಉಳಿದ ತ್ಯಾಜ್ಯವನ್ನು ತೆಗೆದು ನಾಶಮಾಡಿ.
ಮಣ್ಣಿನಲ್ಲಿ ಹೆಂಟೆಗಳು ಅಥವಾ ಕಲ್ಲುಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಉಳುಮೆ ಮಾಡುವಾಗ ಕೊಳೆತ ಕೊಟ್ಟಿಗೆ ಗೊಬ್ಬರವನ್ನು ಸಹ ಮಡಿಯಲ್ಲಿ ಮಿಶ್ರಣ ಮಾಡಬೇಕು. ಮಣ್ಣಿನ ಪ್ರಕಾರ, ಆಳ ಮತ್ತು ಇಳಿಜಾರಿನ ಪ್ರಕಾರ, ಕನಿಷ್ಠ 3 ಮೀಟರ್ ಉದ್ದ, 1 ಮೀಟರ್ ಅಗಲ ಮತ್ತು 15 ರಿಂದ 20 ಸೆಂ.ಮೀ ಎತ್ತರವಿರುವ ಸಸಿಮಡಿಯನ್ನು ತಯಾರಿಸಿ. ತದ ನಂತರ, ಪ್ರತಿ ಸಸಿಮಡಿಗೆ 250 ಗ್ರಾಂ ಸಿಂಗಲ್ ಸೂಪರ್ ಫಾಸ್ಫೇಟ್, 150 ಗ್ರಾಂ ಪೊಟಾಶ್, 50 ಗ್ರಾಂ ಯೂರಿಯಾ ಮತ್ತು 30 ಗ್ರಾಂ ಕಾರ್ಬೋಫ್ಯೂರಾನ್ ಹರಳುಗಳನ್ನು ಹಾಕ ಬೇಕು. ಆರಂಭಿಕ ಹಂತದಲ್ಲಿ, ಸಸ್ಯಗಳು ಚೆನ್ನಾಗಿ ಬೆಳೆಯುತ್ತವೆ ಮತ್ತು ಸಸ್ಯಗಳನ್ನು ಶಿಲೀಂಧ್ರ ರೋಗಗಳಿಂದ ರಕ್ಷಣೆ ಸಿಗುತ್ತದೆ. ಅದರ ನಂತರ 5 ಮಡಿಗಳಲ್ಲಿ ಮಧ್ಯಂತರದಲ್ಲಿ ರೇಖೆಗಳನ್ನು ಮಾಡುವ ಮೂಲಕ, ಕೈಯಿಂದ ಬೀಜಗಳನ್ನು ಬಿತ್ತನೆ ಮಾಡಿ ಬೀಜಗಳ ಮೇಲೆ ನಿಧಾನವಾಗಿ ಮಣ್ಣನ್ನು ಹರಡಬೇಕು. ಬೀಜಗಳು 5 ಸೆಂ.ಮೀ ಗಿಂತ ಹೆಚ್ಚು ಆಳವಾಗಿರಬಾರದು ಎಂದು ಜಾಗರೂಕರಾಗಿರಿ.ಬಿತ್ತನೆ ಮಾಡಿದ ನಂತರ, ಮಡಿಗೆ ನೀರಿನ ಕ್ಯಾನ್ ಅಥವಾ ಪಂಪ್ ಬಳಸಿ ನೀರು ಹಾಕಿ. ನೀರು ಹರಿದು ಹೋಗುವ ವಿಧಾನದಿಂದ ನೀರಾವರಿ ಒದಗಿಸಬಾರದು. ಇಲ್ಲದಿದ್ದರೆ ಬೀಜಗಳು ನೀರಿನಿಂದ ಹರಿದು ಹೋಗಬಹುದು. ಅದರ ನಂತರ, ಗೋಣಿ ಚೀಲಗಳನ್ನು ಒದ್ದೆ ಮಾಡಿ (ಚೀಲಗಳು) ಎರಡು ದಿನಗಳವರೆಗೆ ಗೋಣಿ ಚೀಲಗಳನ್ನು ಹರಡಿಡಬೇಕು . ಮಡಿಗಳ ಮೇಲೆ ನೀರನ್ನು ಪಂಪ್‌ನಿಂದ ಸಿಂಪಡಿಸಿ. ಒದ್ದೆ ಗೋಣಿ ಚೀಲದಿಂದಾಗಿ ತೇವಾಂಶದ ವಾತಾವರಣವು ಬೀಜವನ್ನು ತ್ವರಿತವಾಗಿ ಮೊಳಕೆಯೊಡೆಯಲು ಸಹಾಯ ಮಾಡುತ್ತದೆ. ಬೀಜಗಳನ್ನು ಬೆಳೆದ ನಂತರ ಆರಂಭಿಕ ಸಮಯದಲ್ಲಿ ಕೆಲವು ಕೀಟಗಳು ಮತ್ತು ರೋಗಗಳು ಹರಡುವುದನ್ನು ತಪ್ಪಿಸಲು, ಕಾರ್ಬೆಂಡಜಿಮ್ 1 ಗ್ರಾಂ / ಪ್ರತಿ ಲೀಟರ್ ಮತ್ತು ಮ್ಯಾಂಕೋಜೆಬ್ 2 ಗ್ರಾಂ / ಪ್ರತಿ ಲೀಟರ್ ನೀರಿಗೆ ಕೀಟನಾಶಕ/ಶಿಲಿಂಧ್ರನಾಶಕಗಳನ್ನು ಸಿಂಪಡಿಸುವುದನ್ನು ಮಾಡಬೇಕು ಅಲ್ಲದೆ, ಸಸ್ಯಗಳ ಉತ್ತಮ ಬೆಳವಣಿಗೆಗೆ ಮತ್ತು ಜೈವಿಕ ಮತ್ತು ಅಜೀವಕ ಬರಗಳ ವಿರುದ್ಧ ಪ್ರತಿರೋಧವನ್ನು ಹೆಚ್ಚಿಸಲು ಮತ್ತು ಸಸ್ಯಗಳನ್ನು ಬಲಪಡಿಸಲು ಸಿಲಿಕಾನ್ @ 1 ಮಿಲಿ / ಪ್ರತಿ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ. ಮೆಣಸಿನಕಾಯಿ, ಟೊಮೆಟೊ, ಬದನೆಕಾಯಿ, ಎಲೆಕೋಸು, ಹೂಕೋಸು ಮುಂತಾದ ಬೆಳೆಯಲ್ಲಿ ಬೀಜಗಳು 8-10 ದಿನಗಳಲ್ಲಿ ಮೊಳಕೆಯೊಡೆಯುತ್ತವೆ. ಬಿತ್ತನೆಗೆ ಪೂರ್ವ ಸೂಕ್ತವಾದ ಬೆಳೆಯನ್ನು ಆಯ್ಕೆಮಾಡಿ. ಮೆಣಸಿನಕಾಯಿ-35 ದಿನಗಳು, ಟೊಮೆಟೊ-25 ದಿನಗಳು, ಸೌತೆಕಾಯಿ / ಕಲ್ಲಂಗಡಿ -18 ದಿನಗಳು. ಯಾವುದೇ ಬೆಳೆಯ ಉತ್ತಮ ಬೆಳವಣಿಗೆ, ಉತ್ಪಾದನೆಗಾಗಿ, ಉತ್ತಮ ಗುಣಮಟ್ಟದ ತಳಿಗಳನ್ನು ಆಯ್ಕೆ ಮಾಡುವುದು ಅವಶ್ಯಕ. ಮೂಲ - ಅಗೋಸ್ಟಾರ್ ಅಗ್ರೋನೋಮಿ ಸೆಂಟರ್ ಆಫ್ ಎಕ್ಸೆಲೆನ್ಸ್ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
164
0
ಕುರಿತು ಪೋಸ್ಟ್