AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕೀಟಗಳ ಜೀವನ ಚಕ್ರಕೊಪ್ಪರ್ಟ್ ಬಯೋಲಾಜಿಕಲ್ ಸಿಸ್ಟಮ್
ಟೊಮೇಟೊನಲ್ಲಿ ಟುಟಾ ಅಬ್ಸೊಲುಟಾ ಕೀಟದ ಜೀವನ ಚಕ್ರ
ಈ ಕೀಟವು ವಿಶ್ವದ ಟೊಮೆಟೊ ಉತ್ಪಾದನೆಯಲ್ಲಿ ದೊಡ್ಡ ಸಮಸ್ಯೆಯಾಗಿ ಕಾಣಿಸುತ್ತಿದೆ. ಈ ಕೀಟವು ಬೆಳೆ ಇಳುವರಿ ಮತ್ತು ಹಣ್ಣುಗಳ ಗುಣಮಟ್ಟದಲ್ಲಿ 50% ರಿಂದ 100% ನಷ್ಟವನ್ನು ಉಂಟುಮಾಡುತ್ತದೆ. ಈ ಕೀಟಗಳ ಆತಿಥೇಯ ಬೆಳೆಗಳು ಅವರೇಕಾಯಿ, ಆಲೂಗಡ್ಡೆ, ಬದನೆಕಾಯಿ ಮತ್ತು ದ್ವಿದಳ ಬೆಳೆಗಳು. ಇದು ಮುಖ್ಯವಾಗಿ ಟೊಮೆಟೊಗಳನ್ನು ಬಾಧಿಸುತ್ತದೆ. • ಮೊಟ್ಟೆ - ಇದರ ಮೊಟ್ಟೆಗಳು ಗೋಲಾಕಾರದಲ್ಲಿರುತ್ತವೆ ಮತ್ತು ಬಿಳಿ ಬಣ್ಣ ದಿಂದ ಹೊಳಪಿನಿಂದ ಕೂಡಿದ ಹಳದಿ ಬಣ್ಣಕ್ಕೆ ಬದಲಾಗುತ್ತದೆ, ಭ್ರೂಣದ ಹಂತದಲ್ಲಿ ಕಪ್ಪಾಗುತ್ತದೆ ಮತ್ತು ಮೊಟ್ಟೆಯಿಂದ ಮರಿಹುಳು ಹೊರ ಬರುವ ಸಮಯದಲ್ಲಿ ಕಪ್ಪಾಗಿ ಕಾಣುತ್ತವೆ. • ಮರಿಹುಳು - ಮೊದಲ ಮರಿಹುಳು ಅವಸ್ಥೆಯು ಮೊಟ್ಟೆಯಿಂದ ಹೊರ ಬಂದ ಮರಿಹುಳು ಬಿಳಿ ಬಣ್ಣದಾಗಿರುತ್ತವೆ, ಅದಕ್ಕೆ ತಿನ್ನಲು ದೊರಕುವ ಆಹಾರದ ಪ್ರಕಾರ ಎರಡನೆ ಮರಿಹುಳು ಅವಸ್ಥೆಯು ಯಿಂದ ನಾಲ್ಕನೇ ಮರಿಹುಳು ಅವಸ್ಥೆಗಳಲ್ಲಿ ಹಸಿರು ಬಣ್ಣ ಅಥವಾ ತಿಳಿ ಗುಲಾಬಿ ಬಣ್ಣದ್ದಾಗುತ್ತವೆ. ಸಾಮಾನ್ಯವಾಗಿ ಮರಿಹುಳು ೪ ಹಂತಗಳಿರುತ್ತವೆ. ಕೋಶವಾಸ್ಥೆ - ಕೋಶವಾಸ್ಥೆಯು ಮೊದಲಿಗೆ ಹಸಿರು ಬಣ್ಣವನ್ನು ಹೊಂದಿರುವ ಒಬ್ಟೆಕ್ಟ ಪ್ರಕಾರದ ಕೋಶವಾಸ್ಥೆಯಾಗಿರುತ್ತದ, ಪ್ರೌಢ ಹೊರ ಬರುವ ಸಮಯದಲ್ಲಿ ಕಂದು ಮತ್ತು ಗಾಢ ಕಂದು ಬಣ್ಣಕ್ಕೆ ತಿರುಗುತ್ತದೆ. • ಪ್ರೌಢ - ಪ್ರೌಢ ಪತಂಗಗಳು ಸುಮಾರು 10 ಮಿ.ಮೀ ಉದ್ದವಿದ್ದು, ಬೆಳ್ಳಿಯಿಂದ ಬೂದು ಬಣ್ಣದಾಗಿರುತ್ತವೆ.
ನೀವು ಈ ವೀಡಿಯೊವನ್ನು ಇಷ್ಟಪಟ್ಟರೆ, ಈ ಪ್ರಮುಖ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಲೈಕ್ ಮಾಡಿ ಮತ್ತು ಹಂಚಿಕೊಳ್ಳಿ!
35
0