AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಝೀರೋ ಎನರ್ಜಿ ಕೂಲ್ ಚೇಂಬರ್ ಅಥವಾ ದೇಸಿ ರೆಫ್ರಿಜಿರೇಟೋರ್  -ಕಡಿಮೆ ವೆಚ್ಚದಲ್ಲಿ ಶೀತಲಶೇಖರಣಾ ಕೊಠಡಿ
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಝೀರೋ ಎನರ್ಜಿ ಕೂಲ್ ಚೇಂಬರ್ ಅಥವಾ ದೇಸಿ ರೆಫ್ರಿಜಿರೇಟೋರ್ -ಕಡಿಮೆ ವೆಚ್ಚದಲ್ಲಿ ಶೀತಲಶೇಖರಣಾ ಕೊಠಡಿ
ಪರಿಚಯ: • ಕೊಯ್ಯಿಲೋತ್ತರ ಹಣ್ಣುಗಳು ಮತ್ತು ತರಕಾರಿಗಳನ್ನು ಶೇಖರಿಸಿಡಲು ಇದನ್ನು ಬಳಸಲಾಗುತ್ತದೆ. • ಇದು ಕೊಯ್ಯಿಲೋತ್ತರ • ಕೊಯ್ಯಿಲೋತ್ತರ ನಂತರದ ಹಣ್ಣುಗಳು ಮತ್ತು ತರಕಾರಿಗಳ ಪೌಷ್ಟಿಕ ಮೌಲ್ಯವನ್ನು ಕೂಡಾ ನಿರ್ವಹಿಸುತ್ತದೆ • ಯಾಂತ್ರಿಕ ಮತ್ತು ವಿದ್ಯುತ್ ಶಕ್ತಿಯ ಅಗತ್ಯವೂ ಇಲ್ಲ. • ಶೀತಶೇಖರಣೆಯು ನಂತರದ ಕೊಯ್ಯಿಲೋತ್ತರದ ಹಣ್ಣುಗಳು ಮತ್ತು ತರಕಾರಿಗಳ ಶೇಖರಣಾ ಜೀವಿತಾವಧಿಯನ್ನು ದೀರ್ಘಕಾಲದವರೆಗೆ ಮುಂದುವರಿಸಿದೆ. • ಮಾಲಿನ್ಯ ಇಲ್ಲದ ಪರಿಸರ ಸ್ನೇಹಿ ಶೇಖರಣಾ ವ್ಯವಸ್ಥೆ • ಒಬ್ಬ ಅನಕ್ಷರಸ್ಥ ವ್ಯಕ್ತಿಯು ರಚಿಸಬಹುದು ಝೀರೋ ಎನರ್ಜಿ ಕೂಲ್ ಚೇಂಬರ್ ಅನ್ನು ಹೇಗೆ ರಚಿಸುವುದು? ಸ್ಥಳದ ಆಯ್ಕೆ • ತಂಪಾದ ಮತ್ತು ನೆರಳಿನ ಪ್ರದೇಶವಾಗಿರಬೇಕು. • ಪ್ರದೇಶವು ಸರಿಯಾದ ಒಳಚರಂಡಿ ವ್ಯವಸ್ಥೆ ಒಳಗೊಂಡಿರಬೇಕು. • ನೀರಿನ ವ್ಯವಸ್ಥೆಯ ಹತ್ತಿರದಲ್ಲಿರಬೇಕು. ಅಗತ್ಯವಿರುವ ವಸ್ತುಗಳು: 1. ಇಟ್ಟಿಗೆ 2. ಮರಳು 3. ಬಿದಿರು 4. ಗೋಣಿ ಚೀಲಗಳು 5. ಹುಲ್ಲು
ನಿರ್ಮಿಸುವುದು ಹೇಗೆ • ಇಟ್ಟಿಗೆಗಳಿಂದ ಬೇಸ್ನು ಮಾಡಿ (165 * 115 ಸೆಂ) • ಗೋಡೆಗಳ ನಡುವೆ 70 ಸೆಂ ಎತ್ತರ ಮತ್ತು 7.5 ಸೆಂ.ಮೀ ಅಗಲವನ್ನು ಹೊಂದಿರುವ ಎರಡು ಗೋಡೆಗಳನ್ನು ನಿರ್ಮಿಸಿ •· ಕಡಿಮೆ ವೆಚ್ಚದ ಕೋಣೆಗಾಗಿ, ಬಿದಿರು, ಹುಲ್ಲು ಮತ್ತು ಒಣ ಹುಲ್ಲಿನ ಮುಚ್ಚಳವನ್ನು ಮಾಡಿ. ಇಲ್ಲದಿದ್ದರೆ ಮರದ ಮುಚ್ಚಳವನ್ನು ಮಾಡಿ. • ಮುಚ್ಚಳವನ್ನು ಕೊಠಡಿಯ ಮೇಲೆ ಮುಚ್ಚಬೇಕು ಶೀತಲಶೇಖರಣಾ ಕೊಠಡಿಯನ್ನು ಉಪಯೋಗಿಸುವ ವಿಧಾನ • ಮರಳು, ಇಟ್ಟಿಗೆಗಳ ಮತ್ತು ಕೋಣೆಯ ಮೇಲ್ಭಾಗವನ್ನು ತಂಪಾಗಿರಿಸಬೇಕು. ನೀರನ್ನು ಮುಂಜಾನೆ ಮತ್ತು ಸಂಜೆ ಒಮ್ಮೆ ಕೋಣೆಯ ಸುತ್ತಲೂ ಹಾಕಬೇಕು. • ನಿರ್ವಹಣೆ ಮಾಡುವಾಗ ಹಾನಿಯನ್ನು ತಪ್ಪಿಸಲು ಹಣ್ಣುಗಳು ಮತ್ತು ತರಕಾರಿಗಳನ್ನು ಪ್ಲ್ಯಾಸ್ಟಿಕ್ ರಂದ್ರ ದೋಣಿಗಳಲ್ಲಿ ಶೇಖರಿಸಿಡಬೇಕು. ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು. • ಶಿಲೀಂಧ್ರಗಳ ರೋಗವನ್ನು ಆಹ್ವಾನಿಸುವಂತೆ ಸಂಗ್ರಹಿಸಿದ ಉತ್ಪನ್ನಗಳ ಮೇಲೆ ನೀರಿನ ಹನಿಗಳನ್ನು ತಡೆಯಿರಿ. • ಮರಳು ಯಾವುದೇ ಜೈವಿಕ ವಿಷಯಗಳಿಂದ, ಮಣ್ಣಿನ ಇತ್ಯಾದಿಗಳಿಂದ ಮುಕ್ತವಾಗಿರಬೇಕು, • ಕೊಠಡಿಯನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು • ಖಾಲಿ ಕೋಣೆಯನ್ನು ಅಂಗೀಕರಿಸಿದ ಶಿಲೀಂಧ್ರನಾಶಕ ಅಥವಾ ಕೀಟನಾಶಕದಿಂದ ಚಿಕಿತ್ಸೆ ಮಾಡಬೇಕು. • ಈ ರಾಸಾಯನಿಕಗಳೊಂದಿಗೆ ಚಿಕಿತ್ಸೆ ನೀಡುವ ಮೊದಲು ಕೊಠಡಿಯಿಂದ ಉತ್ಪಾದನೆಯನ್ನು ತೆಗೆದು ಹಾಕಬೇಕೆಂಬುದನ್ನು ಗಮನಿಸಿ. ಉಲ್ಲೇಖ: IMOT ಕೃಷಿ ಫಾರ್ಮ್ ಲಿಂಕ್ಡ್ಇನ್ ಸ್ಲೈಡ್ ಹಂಚಿಕೆ: Garima.T. ಜಿಬಿ ಪಂತ್ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಉತ್ತರಾಖಂಡ್. ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
273
0