ಕೃಷಿ ವಾರ್ತಾಅಗ್ರೋವನ್
ಜೇನುತುಪ್ಪದ ರಫ್ತಿನಲ್ಲಿ ಹೆಚ್ಚಳ
ಭಾರತದಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ಜೇನುತುಪ್ಪಕ್ಕೆ ವಿದೇಶೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ೨೦೧೮-೧೯ ರಲ್ಲಿ ಜೇನು ಉತ್ಪಾದನೆಯು 1 ಲಕ್ಷ 20 ಸಾವಿರ ಟನ್ ಮತ್ತು ರಫ್ತು 61 ಸಾವಿರ 333 ಟನ್ ಆಗಿತ್ತು. ಕಳೆದ ಐದು ವರ್ಷಗಳಲ್ಲಿ ಉತ್ಪಾದನೆಯು ಶೇಕಡಾ 57.58 ರಷ್ಟು ಹೆಚ್ಚಾಗಿದೆ ಮತ್ತು ರಫ್ತು ಶೇಕಡಾ 116.13 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರರವರು ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಭಾರತದಿಂದ 61 ಸಾವಿರ 333 ಟನ್ ರಫ್ತು ಮಾಡಲಾಗಿದ್ದು, ಅದರಲ್ಲಿ 732 ಕೋಟಿ 16 ಲಕ್ಷ ವಿದೇಶಿ ಕರೆನ್ಸಿಯನ್ನು ಭಾರತದಿಂದ ಸ್ವೀಕರಿಸಲಾಗಿದೆ. ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಕರ್ನಾಟಕ, ಉತ್ತರ ಪ್ರದೇಶ, ಬಿಹಾರ ಮತ್ತು ಹಿಮಾಚಲ ಪ್ರದೇಶ ಈ ವ್ಯವಸಾಯದಲ್ಲಿ ಭಾರಿ ಬೆಳವಣಿಗೆಯನ್ನು ಕಾಣುತ್ತಿವೆ. ಜೇನುತುಪ್ಪವು ಔಷದಿಯ ವಸ್ತುವಾಗಿ , ತಿನ್ನಲು ಮತ್ತು ಆಹಾರ ತಯಾರಿಕೆಗೆ ಬಳಸುವುದರಿಂದ, ಹೊರ ದೇಶದಲ್ಲಿ ಜೇನುತುಪ್ಪಕ್ಕೆ ಭಾರಿ ಬೇಡಿಕೆಯಿದೆ. ಮೂಲ- ಆಗ್ರೋವನ್, ಮಾರ್ಚ್ 20, 2020 ಈ ಪ್ರಮುಖ ಮಾಹಿತಿಯನ್ನು ಲೈಕ್ ಮಾಡಿ ಮತ್ತು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ.
40
0
ಇತರ ಲೇಖನಗಳು