ಪಶುಸಂಗೋಪನೆAgroStar Animal Husbandry Expert
ಜಾನುವಾರುಗಳಿಗಾಗಿ ಬಹುಮಿಶ್ರಿತ ಮೇವಿನ ಪ್ರಾಮುಖ್ಯತೆ
ಜಾನುವಾರುಗಳ ಆಹಾರಕ್ಕಾಗಿ ಬಳಸುವ ಒಣಹುಲ್ಲು , ಗೋಧಿ ಹೊಟ್ಟು, ಸಸ್ಯದ ಒಣಗಿದ ಎಲೆಗಳು, ಕಬ್ಬಿನ ತ್ಯಾಜ್ಯ ಇತ್ಯಾದಿಗಳು ಆಹಾರ ಜೀರ್ಣವಾಗುವಂತಹ ಪ್ರೋಟೀನ್ಗಳನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿರುತ್ತವೆ. ಪ್ರಸ್ತುತ ಹಂಗಾಮಿನಲ್ಲಿ, ಹಸಿರು ಮೇವು ಸಾಕಷ್ಟು ಲಭ್ಯವಿರುವುದಿಲ್ಲ ಮತ್ತು ಒಣ ಮೇವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಖರ್ಚು ದುಬಾರಿಯಾಗುವುದರಿಂದ, ಒಣ ಮೇವುಗಳಲ್ಲಿ ಇತರ ವಸ್ತುಗಳನ್ನು ಬೇರೆಸಿ ಜಾನುವಾರುಗಳಿಗೆ ಆಹಾರವನ್ನು ನೀಡಬಹುದು. ಒಣ ಮೇವಿನ ಪ್ರಾಮುಖ್ಯತೆ ಮತ್ತು ಆರ್ಥಿಕ ಬಳಕೆಗಾಗಿ, ಸಣ್ಣ ಪ್ರಮಾಣದ ಬೆಲ್ಲ, ಉಪ್ಪು, ಖನಿಜ ಮಿಶ್ರಣ ಮತ್ತು ಯೂರಿಯಾ ಇತ್ಯಾದಿಗಳನ್ನು ಬೇರೆಸಿ ಮಾಡಿದ ಘನ ರೂಪದ ಮೇವಿನ ಉಂಡೆಯನ್ನು ಕಡಿಮೆ ಜಾಗದಲ್ಲಿ ಸಂಗ್ರಹಿಸಿಡಬಹುದು. ಪಶುಗಳ ಆಹಾರದಲ್ಲಿ ಬಹು ಮಿಶ್ರಿತ ಮೇವನ್ನು ಬಳಸುವುದರಿಂದ ಪ್ರೌಢ ಜಾನುವಾರುಗಳಿಗೆ ಒಂದು ದಿನದಲ್ಲಿ ಹತ್ತು ಕಿಲೋಗ್ರಾಂಗಳಷ್ಟು ಪಶು ಆಹಾರವಾಗಿ ನೀಡಬಹುದು. ಬೆಲ್ಲ, ಉಪ್ಪು, ಯೂರಿಯಾ ಮತ್ತು ಖನಿಜ ಪದಾರ್ಥಗಳ ಮಿಶ್ರಣವನ್ನು ಸರಿಯಾದ ಪ್ರಮಾಣದಲ್ಲಿ ಬೇರೆಸಿ, ನಂತರ ಈ ಮಿಶ್ರಣವನ್ನು ಜಾನುವಾರುಗಳಿಗೆ ನೀಡಬಹುದು.
ಈ ಮಾಹಿತಿಯು ನಿಮಗೆ ಉಪಯುಕ್ತವಿದೆ ಎಂದೆನಿಸಿದರೆ,.ಅದನ್ನು ಲೈಕ್ ಮಾಡಿ ಮತ್ತು ನಿಮ್ಮ ರೈತ ಮಿತ್ರರೊಂದಿಗೆ ಶೇರ್ ಮಾಡಿ.
650
0
ಇತರ ಲೇಖನಗಳು