AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಗೋಧಿ ಬಿತ್ತನೆ ಶೇಕಡಾ 9.62 ರಷ್ಟು ಹೆಚ್ಚಾಗಿದೆ, ಒಟ್ಟು ಬಿತ್ತನೆ 487 ಲಕ್ಷ ಹೆಕ್ಟೇರ ಆಗಿದೆ
ಕೃಷಿ ವಾರ್ತಾಔಟ್ ಲುಕ್ ಕೃಷಿ
ಗೋಧಿ ಬಿತ್ತನೆ ಶೇಕಡಾ 9.62 ರಷ್ಟು ಹೆಚ್ಚಾಗಿದೆ, ಒಟ್ಟು ಬಿತ್ತನೆ 487 ಲಕ್ಷ ಹೆಕ್ಟೇರ ಆಗಿದೆ
ನವದೆಹಲಿ ಕೃಷಿ ಸಚಿವಾಲಯದ ಪ್ರಕಾರ, ಪ್ರಸ್ತುತ ಹಿಂಗಾರು ಹಂಗಾಮಿನಲ್ಲಿ ಗೋಧಿಯ ಬಿತ್ತನೆ ಶೇಕಡಾ 9.62 ರಷ್ಟು ಏರಿಕೆಯಾಗಿದ್ದು, 248.03 ಲಕ್ಷ ಹೆಕ್ಟೇರ್‌ಗೆ ತಲುಪಿದೆ. ಆದರೆ ಅನೇಕ ರಾಜ್ಯಗಳಲ್ಲಿ ಅಕ್ಟೋಬರ್-ನವೆಂಬರ್‌ನ ಮಳೆಯಿಂದಾಗಿ ಒಟ್ಟು ಹಿಂಗಾರು ಹಂಗಾಮಿನ ಬೆಳೆಗಳ ಬಿತ್ತನೆ ಸಹ ಶೇಕಡಾ 5.22 ರಷ್ಟು ಏರಿಕೆಯಾಗಿ 487.09 ಲಕ್ಷ ಹೆಕ್ಟೇರ್‌ಗೆ ತಲುಪಿದೆ. ಕಳೆದ ವರ್ಷ ಈ ಹೊತ್ತಿಗೆ 463.33 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಮಾತ್ರ ಬಿತ್ತಲಾಗಿದೆ. ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ, ದ್ವಿದಳ ಧಾನ್ಯಗಳ ಬಿತ್ತನೆ ಸ್ವಲ್ಪ ಮಟ್ಟಿಗೆ 119.16 ಲಕ್ಷ ಹೆಕ್ಟೇರ್‌ಗೆ ಇಳಿದಿದ್ದರೆ, ಕಳೆದ ವರ್ಷ ಈ ಸಮಯದವರೆಗೆ 120.91 ಲಕ್ಷ ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯಗಳನ್ನು ಬಿತ್ತಲಾಗಿದೆ. ಹಿಂಗಾರು ಹಂಗಾಮಿನ ದ್ವಿದಳ ಧಾನ್ಯಗಳ ಮುಖ್ಯ ಬೆಳೆಯಾದ ಕಡಲೆ ಬಿತ್ತನೆ ಕಳೆದ ವರ್ಷ 80.50 ಲಕ್ಷ ಹೆಕ್ಟೇರ್‌ನಿಂದ 80.63 ಲಕ್ಷ ಹೆಕ್ಟೇರ್‌ಗೆ ಏರಿದೆ.
ಇತರ ದ್ವಿದಳ ಧಾನ್ಯಗಳ ಪೈಕಿ, ಹಿಂಗಾರು ಹಂಗಾಮಿನಲ್ಲಿ 13.75 ಲಕ್ಷ ಹೆಕ್ಟೇರ್ ಮತ್ತು 8.30 ಲಕ್ಷ ಹೆಕ್ಟೇರ್ ಬಟಾಣಿಗಳಲ್ಲಿ ಮತ್ತು ಚೆನ್ನಂಗಿ ಬಿತ್ತನೆ ಮಾಡಲಾಗಿದ್ದು, ಕಳೆದ ವರ್ಷ ಈ ಹೊತ್ತಿಗೆ ಕ್ರಮವಾಗಿ 14.89 ಮತ್ತು 7.80 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಉದ್ದು ಮತ್ತು ಹೆಸರನ್ನು ಕ್ರಮವಾಗಿ 4.32 ಮತ್ತು 1.44 ಲಕ್ಷ ಹೆಕ್ಟೇರ್ನಲ್ಲಿ ಬಿತ್ತಲಾಗಿದೆ. ಮೂಲ - ಔಟ್‌ಲುಕ್ ಅಗ್ರಿಕಲ್ಚರ್, 14 ಡಿಸೆಂಬರ್ 2019 ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
121
0