ಕೃಷಿ ವಾರ್ತಾಕೃಷಿ ಜಾಗರಣ್
ಗೋಧಿಯ ಮೂರು ಬಣ್ಣದ ತಳಿಗಳನ್ನು ಬಿಡುಗಡೆ ಮಾಡಲಾಗಿದೆ.
ಕೃಷಿ ಜೈವಿಕ ತಂತ್ರಜ್ಞಾನ ತಜ್ಞರು ಕೆಲವು ಬಗೆಯ ಬಣ್ಣದ ಗೋಧಿಯನ್ನು ಅಭಿವೃದ್ಧಿಪಡಿಸಿದ್ದಾರೆ, ಇದರಲ್ಲಿರುವ ಪೋಷಕಾಂಶಗಳು ಸಾಮಾನ್ಯ ಗೋಧಿಗಿಂತ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿವೆ. ಈ ಬಗೆಯ ಗೋಧಿಯನ್ನು ಪಂಜಾಬ್‌ನ ಮೊಹಾಲಿಯಲ್ಲಿರುವ ರಾಷ್ಟ್ರೀಯ ಕೃಷಿ ಆಹಾರ ಜೈವಿಕ ತಂತ್ರಜ್ಞಾನ ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಿದೆ.
ಕೆನ್ನೇರಳೆ, ಕಪ್ಪು ಮತ್ತು ನೀಲಿ ಬಣ್ಣದ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತವಾಗಿ ಇದನ್ನು ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ಮತ್ತು ಬಿಹಾರದಲ್ಲಿ ನೂರು ಎಕರೆ ಪ್ರದೇಶದಲ್ಲಿ ಸಾಗುವಳಿ ಮಾಡಲಾಗಿದೆ. ಇದರಿಂದ ಜನರಿಗೆ ಹೆಚ್ಚಿನ ಪ್ರಯೋಜನಗಳನ್ನು ತಲುಪಿಸಬಹುದಾಗಿದೆ. ಅಲ್ಲದೆ, ಅದರಿಂದ ಯಾವುದೇ ರೀತಿಯ ಹಾನಿ ಸಂಭವಿಸಿದಲ್ಲಿ, ಅದನ್ನು ಸಹ ಕಂಡುಹಿಡಿಯಬಹುದು, ಅದಕ್ಕಾಗಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಸಿಎಆರ್) ಪರೀಕ್ಷಿಸುತ್ತಿದೆ. ಜಪಾನ್‌ನಿಂದ ಮಾಹಿತಿ ಪಡೆದ ನಂತರ 2011 ರಿಂದ ಎನ್ ಬಿ ಎ ಐ ಅದರ ಕೆಲಸವನ್ನು ಪ್ರಾರಂಭಿಸಿತು. ಹಲವಾರು ಹಂಗಾಮುಗಳಲ್ಲಿ ಪ್ರಯೋಗಗಳನ್ನು ಮಾಡಿದ ನಂತರ ಇದು ಯಶಸ್ವಿಯಾಗಿದೆ. ೩ ಬಣ್ಣದ ಗೋಧಿಯಿಂದ ನೀವು ಅಗತ್ಯವಾದ ಪ್ರಮಾಣದ ಆಂಥೋಸಯಾನಿನ್ ಪಡೆಯಬಹುದು. ಆಂಥೋಸಯಾನಿನ್ ಉತ್ಕರ್ಷಣ(ಆಂಟಿಓಕ್ಸಿಡೆಂಟ್) ನಿರೋಧಕವಾಗಿದೆ ಮತ್ತು ಇದನ್ನು ತಿನ್ನುವುದು ಜೀವನಶೈಲಿ ಕಾಯಿಲೆಗಳಾದ ಹೃದ್ರೋಗಗಳು, ಮಧುಮೇಹ ಮತ್ತು ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಎಕರೆಗೆ ಈ ಬಣ್ಣದ ಗೋಧಿಯಿಂದ 17 ರಿಂದ 20 ಕ್ವಿಂಟಾಲ್ ಇಳುವರಿಯನ್ನು ಪಡೆಯಬಹುದು. ಮೂಲ - ಕೃಷಿ ಜಾಗರಣ, 21 ನವೆಂಬರ್ 2019 ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಈ ಫೋಟೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
401
1
ಇತರ ಲೇಖನಗಳು