AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಗೋಧಿಯಲ್ಲಿ ಗೆದ್ದಲುಗಳಿಗಾಗಿ ಬೀಜೋಪಚಾರ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಗೋಧಿಯಲ್ಲಿ ಗೆದ್ದಲುಗಳಿಗಾಗಿ ಬೀಜೋಪಚಾರ
ಗೋಧಿ ಬೆಳೆಯು ಚಳಿಗಾಲದ ಏಕದಳ ಬೆಳೆಯಾಗಿ ಬೆಳೆಯಲಾಗುತ್ತದೆ. ಗೋಧಿ ಬೆಳೆ ನೀರಾವರಿ ಅಥವಾ ಮಳೆಯಾಶ್ರಿತ ಎರಡೂ ಕೃಷಿ ಮಾಡಬಹುದು. ಈ ವರ್ಷ, ಮಾನ್ಸೂನ್ ಉತ್ತಮವಾಗಿದ್ದು ಮತ್ತು ಸಾಕಷ್ಟು ಮಳೆಯಾಗಿದೆ. ಆದ್ದರಿಂದ ರೈತರು ನೀರಾವರಿ ಪ್ರದೇಶದಲ್ಲಿಯೂ ಈ ಬೆಳೆ ಮುಂದುವರಿಸಬಹುದು. ಬೆಳೆ ಮೊಳಕೆಯೊಡೆದ ನಂತರ ಗೆದ್ದಲುಗಳಿಂದಾಗಿ ಬೆಳೆ ಹಾನಿಗೊಳಗಾಗಬಹುದು. ಗೆದ್ದಲಿನ ಬಾಧೆ ಸಾಮಾನ್ಯವಾಗಿ ಮರಳು ಮಿಶ್ರಿತ ಜೇಡು ಮಣ್ಣಿನಲ್ಲಿ ಕಡಿಮೆ ಆಗಾಗ್ಗೆ ಕಂಡುಬರುತ್ತದೆ. ಈ ಕೀಟದಿಂದಾಗಿ ಮರಳು ಮಿಶ್ರಿತ ಕಪ್ಪು ಮಣ್ಣಿನಲ್ಲಿ ಹಾನಿ ಹೆಚ್ಚು ಗಂಭೀರವಾಗಿರುತ್ತ ದೆ. ಗೆದ್ದಲಿನ ರಾಣಿಹುಳು ವರ್ಷಗಳವರೆಗೆ ನಿರಂತರವಾಗಿ ಮೊಟ್ಟೆಗಳನ್ನು ಇಡುತ್ತದೆ ಮತ್ತು ಗೆದ್ದಲಿನ ರಾಣಿಯನ್ನು ನಿಯಂತ್ರಿಸಲು ಅಸಾಧ್ಯ ಏಕೆಂದರೆ ಅದು 7-8 ಅಡಿ ಕೆಳಗೆ ಮಣ್ಣಿನಲ್ಲಿ ವಾಸಿಸುತ್ತದೆ. ಗೆದ್ದಲುಗಳು ಈ ಪ್ರದೇಶದಲ್ಲಿ ನೆಲೆಸಿದಕ್ಕೆ , ಪ್ರತಿ ವರ್ಷ ಬಾಧೆ ಕಂಡುಬರುತ್ತದೆ.
ಗೆದ್ದಲಿನ ಕೆಲಸಗಾರ ಮಣ್ಣಿನ ಮೇಲೆ ಇರುವ ಸಸ್ಯದ ಭಾಗಗಳನ್ನು ಕತ್ತರಿಸಿ ಬೇರುಗಳನ್ನು ಆಹಾರವಾಗಿ ತಿನ್ನುತ್ತದೆ. ಪರಿಣಾಮವಾಗಿ, ಸಸ್ಯಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಒಣಗುತ್ತವೆ. ಅಂತಹ ಬಾಧಿತ ಸಸ್ಯಗಳನ್ನು ಸುಲಭವಾಗಿ ಮಣ್ಣಿನಿಂದ ಕಿತ್ತು ತೆಗೆಯಬಹುದು. ಅಲ್ಲಿ ಇಲ್ಲಿ ಬಾಧೆ ಕಂಡುಬರುತ್ತದೆ. ನೀರಾವರಿ ದೀರ್ಘಕಾಲದವರೆಗೆ ಸೋಂಕು ಉಲ್ಬಣಗೊಳ್ಳುತ್ತದೆ. ಗೆದ್ದಲುಗಳು ಆರಂಭಿಕ ಹಂತದಲ್ಲಿ ಮತ್ತು ತೆನೆ ಬರುವ ಹಂತದಲ್ಲಿ ಹಾನಿಯನ್ನುಂಟು ಮಾಡುತ್ತವೆ. ಗೋಧಿ ಬಿತ್ತನೆ ನಿಯಂತ್ರಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಿ: ಗೋಧಿ ಬಿತ್ತನೆ ಮಾಡುವ ಮೊದಲು ಹೊಲದಿಂದ ಬೆಳೆ ಅವಶೇಷಗಳನ್ನು ತೆಗೆದು ನಾಶಮಾಡಿ. ಚೆನ್ನಾಗಿ ಕೊಳೆತ ಸಗಣಿ ಗೊಬ್ಬರವನ್ನು ಮಾತ್ರ ಈ ಪ್ರದೇಶಕ್ಕೆ ಬಳಸಿ. ಕೊಟ್ಟಿಗೆ ಗೊಬ್ಬರದ ಬದಲಾಗಿ, ರೈತರು ಔಡಲ ಹಿಂಡಿ, ಬೇವಿನ ಹಿಂಡಿಯನ್ನು ಪ್ರತಿ ಹೆಕ್ಟೇರಿಗೆ 1 ಟನ್ ಬಳಸಿ. ಕಡಿಮೆ ವೆಚ್ಚದಲ್ಲಿ ಬಿತ್ತನೆ ಮಾಡುವ ಮೊದಲು ಬೀಜೋಪಚಾರವನ್ನು ಮಾಡುವ ಮೂಲಕ ಗೆದ್ದಲುಗಳನ್ನು ನಿರ್ವಹಿಸಬಹುದು. ಬೀಜೋಪಚಾರಕ್ಕಾಗಿ ಬೈಫೆಂಥ್ರಿನ್ 10 ಇಸಿ @ 200 ಮಿಲಿ ಅಥವಾ ಫಿಪ್ರೊನಿಲ್ 5% ಎಸ್‌ಸಿ 5 ಲೀಟರ್ ನೀರಿನಲ್ಲಿ @ 500 ಮಿಲಿ ಅಥವಾ ಕ್ಲೋರೋಪೈರಿಫಾಸ್ 20 ಇಸಿ @ 400 ಮಿಲಿ ಯನ್ನು ೫ ಲೀಟರ್ ನೀರಿಗೆ ಬೇರೆಸಿ 100 ಕೆಜಿ ಬೀಜಗಳನ್ನು ಬೀಜೋಪಚಾರ ಮಾಡಿ. ಬೀಜಗಳನ್ನು ಪ್ಲಾಸ್ಟಿಕ್ ಹಾಳೆಯಲ್ಲಿ ಹರಡಿ ಮತ್ತು ಈ ದ್ರಾವಣವನ್ನು ಗೋಧಿಯ ಮೇಲೆ ಕೈಗಳಿಗೆ ರಬ್ಬರ್ ಕೈಗವಸುಗಳನ್ನು ಧರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೀಜೋಪಚಾರ ಮಾಡಿದ ಬೀಜಗಳನ್ನು ಒಣಗಲು ರಾತ್ರಿಯಿಡೀ ಇಡಬೇಕು ಮತ್ತು ಮರುದಿನ ಬೆಳಿಗ್ಗೆ ಬಿತ್ತನೆ ಮಾಡಲು ಬಳಸಬೇಕು. ಬೀಜೋಪಚಾರವನ್ನು ಮಾಡದಿದ್ದರೆ, ಗೆದ್ದಲಿನ ಬಾಧೆಯನ್ನು ಗಮನಿಸಿದರೆ, ಫಿಪ್ರೊನಿಲ್ 5 ಎಸ್ಸಿ 1.5 ಲೀಟರ್ ಅಥವಾ ಕ್ಲೋರೋಪೈರಿಫಾಸ್ 20 ಇಸಿ 1.5 ಲೀಟರನ್ನು 100 ಕೆಜಿ ಮರಳಿನೊಂದಿಗೆ ಬೇರೆಸಿ. ಬೆಳೆಯಲ್ಲಿ ಈ ಎಲ್ಲಾ ಕೀಟನಾಶಕಗಳನ್ನು ಸಿಂಪಡಿಸಿ ಮತ್ತು ಸ್ವಲ್ಪ ನೀರಾವರಿಯನ್ನು ಒದಗಿಸಬೇಕು. ನಿಯಮಿತವಾಗಿ ನೀರಾವರಿ ನೀಡುವ ಮೂಲಕ ಬೆಳೆಯಲ್ಲಿ ತೇವಾಂಶವನ್ನು ಕಾಪಾಡಬಹುದು. ಮೂಲ: ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
631
3