ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಸಾವಯವ ಕೃಷಿಅಗ್ರೋವನ್
ಗೆರ್ಬೆರಾದಲ್ಲಿ ಸಾವಯವ ಕೃಷಿ
ಗೆರ್ಬೆರಾ ಹೂಗಳು ಆಕರ್ಷಕವಾಗಿ ಕಾಣುತ್ತವೆ ಮತ್ತು ಅವುಗಳು ಬಹಳ ಸಮಯದ ವರೆಗೆ ತಾಜಾತನದಿಂದ ಕೂಡಿರುತ್ತವೆ. ಆದ್ದರಿಂದ, ಅವುಗಳನ್ನು ವಿವಾಹ ಸಮಾರಂಭಗಳಲ್ಲಿ ಮತ್ತು ಪುಷ್ಪಾ ಗುಚ್ಛವಾಗಿಯೂ ವ್ಯಾಪಕವಾಗಿ ಬಳಸಲಾಗುತ್ತದೆ. ಇದರಿಂದಾಗಿ ಈ ಹೂವಿನ ಬೇಡಿಕೆ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ ಮತ್ತು ಅವು ಉತ್ತಮವಾದ ಮಾರುಕಟ್ಟೆ ಬೆಲೆ ಸಿಗುತ್ತದೆ, ಇದರ ಪರಿಣಾಮವಾಗಿ ದಿನ ಕಳೆದಂತೆ ಹೂವುಗಳ ಕೃಷಿ ಹೆಚ್ಚಾಗುತ್ತದೆ. ಗೆರ್ಬೆರಾದಲ್ಲಿ ಸಾವಯವ ಗೊಬ್ಬರಗ ಬಳಕೆ ಅಜೋಸ್ಪಿರಿಲಮ್ @ 500 ಗ್ರಾಂ, ರಂಜಕ-ಕರಗುವ ಬ್ಯಾಕ್ಟೀರಿಯಾದ ಗೊಬ್ಬರ@ 500 ಗ್ರಾಂ, ಟ್ರೈಕೊಡರ್ಮಾ 500 ಗ್ರಾಂ / 10 ಕೆಜಿ ಕೊಟ್ಟಿಗೆ ಗೊಬ್ಬರದೊಂದಿಗೆ ಸೇರಿಸಿ ಮತ್ತು ಅದನ್ನು ತಡಪತ್ರಿಯಿಂದ ಆವರಿಸಿ 8-10 ದಿನಗಳವರೆಗೆ ಮುಚ್ಚಿಡಿ. ಅದರ ನಂತರ, ನಾಟಿ ಮಾಡಿದ ಮೂರು ವಾರಗಳ ನಂತರ ಅದನ್ನು ಪಾಲಿಹೌಸ್‌ನಲ್ಲಿರುವ ಗೆರ್ಬೆರಾಕ್ಕಾಗಿ ಬಳಸಿ. ರೋಗ ನಿಯಂತ್ರಣ ಮಾಡುವಲ್ಲಿ ಸಾವಯವ ಗೊಬ್ಬರಗಳ ಉಪಯೋಗ: ರೋಗದ ಆರಂಭಿಕ ಬೆಳವಣಿಗೆಯ ಹಂತದಲ್ಲಿ ಶಿಲೀಂಧ್ರಗಳ ಬಾಧೆಯಿಂದಾಗಿ ಬೇರು ಅಥವಾ ಕಾಂಡ ಕೊಳೆತವಾಗುವ ಸಾಧ್ಯತೆಗಳು ಹೆಚ್ಛಾಗಿ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಸಸ್ಯಕ್ಕೆ ಸೋಂಕು ತರುವ ರೋಗಕಾರಕ ಶಿಲೀಂಧ್ರಗಳು ರೈಜೋಕ್ಟೊನಿಯಾ, ಫ್ಯುಸಾರಿಯಮ್, ಪೈಥಿಯಂ, ಫೈಟೊಫ್ಥೊರಾ ಮತ್ತು ಸ್ಕ್ಲಿರೋಸಿಸ್ಮ್ ಈ ಎಲ್ಲಾ ಶಿಲೀಂಧ್ರಗಳಿಂದ ಬರುವ ರೋಗಗಳನ್ನು ತಡೆಗಟ್ಟುತ್ತದೆ. ಬಾಧೆಯ ಲಕ್ಷಣಗಳು ರೋಗಕಾರಕ ಶಿಲೀಂಧ್ರಗಳು ರೈಜೋಕ್ಟೊನಿಯಾ, ಫ್ಯುಸಾರಿಯಮ್, ಪೈಥಿಯಂ, ಫೈಟೊಫ್ಥೊರಾ ಮತ್ತು ಸ್ಕ್ಲಿರೋಸಿಸ್ಮ್ ಈ ಎಲ್ಲಾ ಶಿಲೀಂಧ್ರಗಳಿಂದ ಬರುವ ರೋಗದಿಂದಾಗಿ, ನರ್ಸರಿಯ ಹಂತದಲ್ಲಿಯೇ ಸಸಿಗಳು ಸಾಯುತ್ತವೇ. ಶಿಲೀಂಧ್ರವು ಸಾಮಾನ್ಯವಾಗಿ ನೆಲದ ಅಂತರಕ್ಕೆ ಇರುವ ಕಾಂಡದ ಭಾಗವು ಕೊಳೆಯಲಾರಂಭಿಸುತ್ತದೆ ಮತ್ತು ಇದರಿಂದಾಗಿ ತದನಂತರ ಇಡೀ ಗಿಡವು ಒಣಗಿಸುತ್ತದೆ. ಮಣ್ಣಿನಲ್ಲಿ ನೀರು ನಿಲ್ಲದಂತೆ ಮತ್ತು ಹೆಚ್ಚಿನ ತೇವಾಂಶ, ಆದ್ರತೆಯ ಹೆಚ್ಚಾದರೆ ರೋಗದ ತೀವ್ರತೆ ಹೆಚ್ಚಾಗುತ್ತದೆ. ಪರಿಹಾರ ಸಸಿಗಳನ್ನು ನೆಡುವ ಮೊದಲು ಮಣ್ಣನ್ನು ಮಣ್ಣಿನ ಸೌರೀಕರಣವನು ಮಾಡಬೇಕು. ಸಸಿ ಮಡಿಗಳನ್ನು ತಯಾರಿಸಿ ನಂತರ 7-10 ದಿನಗಳ ನಂತರ ನಾಟಿ ಮಾಡಬೇಕು. ಆರೋಗ್ಯಕರ ಸಸಿಗಳನ್ನು ನೆಡಬೇಕು. ಟ್ರೈಕೊಡರ್ಮಾ ಮತ್ತು ಸ್ಯೂಡೋಮೊನಾಸನ್ನು ಬಳಸಿ, ಜೈವಿಕ ಶಿಲೀಂಧ್ರನಾಶಕ @ 500 ಗ್ರಾಂ / 10 ಕೆಜಿ ಕೊಟ್ಟಿಗೆ ಗೊಬ್ಬರವನ್ನು ಪ್ರತ್ಯೇಕವಾಗಿ ಬಳಸಿ, ನಾಟಿ ಮಾಡುವ ಮೊದಲೇ ರೋಗವನ್ನು ನಿಯಂತ್ರಿಸಿ. ನೀರಿನ ಸರಿಯಾಗಿ ಬಸಿದು ಹೋಗಿದೆಯೇ ಎಂದು ಖಚಿತಪಡಿಸಿಕೊಳ್ಳಿ, ಮಣ್ಣು ಮತ್ತು ಬೇರಿನ ಮಣ್ಣಿನ ತೇವಾಂಶವನ್ನು ಪರೀಕ್ಷಿಸಿ. ಸೂಚನೆ ತಯಾರು ಮಾಡಿದ ದ್ರಾವಣವನ್ನು ಪ್ರತಿ ತಿಂಗಳಂತೆ ಗಿಡದ ಸುತ್ತಲೂ ಹಾಕ್ಬೇಕು. ಗೊಬ್ಬರವನ್ನು ಶಿಫಾರಸ್ಸುಗಳ ಅನುಸಾರವಾಗಿ ಸಮ ಪ್ರಮಾಣದಲ್ಲಿ ಕೊಡಬೇಕು. ಮೂಲ: ಆಗ್ರೊವನ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
285
0
ಕುರಿತು ಪೋಸ್ಟ್