ಕೃಷಿ ವಾರ್ತಾಕೃಷಿ ಜಾಗರಣ್
ಕೃಷಿ, ರೈತರು ಮತ್ತು ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಪಿಎಂ ಕಿಸಾನ್ ಸಂಪದಾ ಯೋಜನೆ
ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆ (ಪಿಎಂಕೆಎಸ್‌ವೈ) ಅಡಿಯಲ್ಲಿ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಸುಮಾರು 32 ಯೋಜನೆಗಳಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿದೆ. ಸುಮಾರು 17 ರಾಜ್ಯಗಳಲ್ಲಿ ಈ ಯೋಜನೆಗಳನ್ನು ಜಾರಿಗೆ ತರಲು ಸಿದ್ಧತೆಗಳು ನಡೆಯುತ್ತಿವೆ. ಈ ಯೋಜನೆಯಡಿ ಸುಮಾರು ರೂ.406 ಕೋಟಿಯನ್ನು ಮಂಜೂರು ಮಾಡಲಾಗಿದೆ._x000D_ _x000D_ ಯೋಜನೆಯ ಉದ್ದೇಶವೇನು?_x000D_ _x000D_ 1. ಈ ಯೋಜನೆಗಳ ಅಡಿಯಲ್ಲಿ ಸುಮಾರು 15 ಸಾವಿರ ಜನರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ನೀಡಲಾಗುವುದು. ಇದಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಉದ್ಯೋಗಾವಕಾಶ ಕಲ್ಪಿಸಲಾಗುವುದು._x000D_ 2. ಆಧುನಿಕ ಸಂಸ್ಕರಣಾ ತಂತ್ರಗಳು ಕೃಷಿ ಉತ್ಪನ್ನಗಳನ್ನು ವ್ಯರ್ಥ ಮಾಡುವುದನ್ನು ತಡೆಯುತ್ತದೆ, ಇದರಿಂದ ರೈತರ ಆದಾಯವನ್ನು ದ್ವಿಗುಣಗೊಳಿಸಬಹುದು._x000D_ 3. ಭಾರತೀಯ ರೈತರು ಅಂತರರಾಷ್ಟ್ರೀಯ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿ ಗ್ರಾಹಕರೊಂದಿಗೆ ಸಂಪರ್ಕ ಹೊಂದುತ್ತಾರೆ._x000D_ ಪಿಎಂ ಕಿಸಾನ್ ಸಂಪದಾ ಯೋಜನೆ ಎಂದರೇನು?_x000D_ ಈ ಯೋಜನೆ ಆಗಸ್ಟ್ 2017 ರಲ್ಲಿ ಪ್ರಾರಂಭವಾಯಿತು. ಕೃಷಿಯನ್ನು ಆಧುನೀಕರಿಣಗೋಳಿ ಸುವುದು ಮತ್ತು ಕೃಷಿಯಲ್ಲಿ ಆಗುವ ವ್ಯರ್ಥವನ್ನು ಕಡಿಮೆ ಮಾಡುವುದರ ಜೊತೆಗೆ ಆಧುನಿಕ ಮೂಲ ಸೌಕರ್ಯಗಳ ಸಹಾಯದಿಂದ ಕೃಷಿ ಅಭಿವೃದ್ಧಿಯನ್ನು ಮುನ್ನಡೆಸುವುದು ಇದರ ಮುಖ್ಯ ಉದ್ದೇಶವಾಗಿದೆ. _x000D_ ಕೃಷಿ ಅಭಿವೃದ್ಧಿಯಲ್ಲಿ ಸರಿಯಾದ ನಿರ್ವಹಣೆ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಬೇಕು. ರೈತರು ತಮ್ಮ ಉತ್ಪನ್ನಗಳಿಗೆ ಸರಿಯಾದ ಮತ್ತು ಉತ್ತಮ ಬೆಲೆ ಪಡೆಯಬೇಕು. ಇದಲ್ಲದೆ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದು._x000D_ ಮೂಲ - ಕೃಷಿ ಜಾಗರಣ , 3 ಮಾರ್ಚ್ 2020_x000D_ ಈ ಉಪಯುಕ್ತ ಮಾಹಿತಿಯನ್ನು ಲೈಕ್ ಮಾಡಿ ಮತ್ತು ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಶೇರ್ ಮಾಡಿ._x000D_
572
1
ಇತರ ಲೇಖನಗಳು