ಕ್ಷಮಿಸಿ, ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಈ ಲೇಖನ ಲಭ್ಯವಿಲ್ಲ.
ನಿಮ್ಮ ರಾಜ್ಯದಲ್ಲಿ ಕೃಷಿ ಅಂಗಡಿ ಶೀಘ್ರದಲ್ಲೇ ಲಭ್ಯವಾಗುತ್ತದೆ.
ಗುರು ಜ್ಞಾನGOI - Ministry of Agriculture & Farmers Welfare
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಿಂದ ಮೆಕ್ಕೆ ಜೋಳದಲ್ಲಿ ಸೈನಿಕ ಕೀಟ ಭಾದೆಗೆ ಸಲಹೆ
ಇತ್ತೀಚೆಗೆ, ಭಾರತ ಸರ್ಕಾರದ, ಕೃಷಿ ಇಲಾಖೆ, ಸಹಕಾರ ಮತ್ತು ರೈತರ ಕಲ್ಯಾಣ ಸಚಿವಾಲಯದಿಂದ, ಮೆಕ್ಕೆ ಜೋಳದಲ್ಲಿ ಸೈನಿಕಕೀಟದ ನಿರ್ವಹಣೆಗೆ ಕೆಲವು ಹಂತಗಳನ್ನು ಸೂಚಿಸಿದ್ದಾರೆ. ಆಕ್ರಮಣಕಾರಿ ಕೀಟ, ಸೈನಿಕ ಕೀಟವು ಮೆಕ್ಕೆಜೋಳದ ಬೆಳೆಯಲ್ಲಿ ಬಾಧೆಯ ನಿಯಂತ್ರಣ ಮಾಡುವುದು ಗಂಭೀರ ಸಮಸ್ಯೆಯಾಗಿದೆ. ಹಿಂಗಾರಿನ ಬಿತ್ತನೆಯ ಮತ್ತು ತಡವಾಗಿ ಕೊಯ್ಯಿಲಿಗೆ ಬರುವ ತಳಿಗಳಲ್ಲಿ ಸೈನಿಕ ಕೀಟದ ಭಾದೆ ಸಾಧ್ಯತೆ ಹೆಚ್ಚಾಗಿರುತ್ತದೆ. ಸೈನಿಕ ಕೀಟ ಎಲೆಗಳನ್ನು ತಿನ್ನುತ್ತವೆ ಮತ್ತೆ ತೆನೆಗಳಿಗೆ ತುಂಬಾ ಹಾನಿ ಉಂಟು ಮಾಡುತ್ತವೆ. ಸೈನಿಕ ಕೀಟ ಮೆಕ್ಕೆಜೋಳದ ಬೆಳೆಗೆ ಎಲ್ಲಾ ಹಂತದಲ್ಲಿ ಹಾನಿ ಉಂಟು ಮಾಡುವುದರಿಂದ ಅದನ್ನು ಕೇವಲ ಮರಿ ಹುಳುವಾಗಿರುವಾಗ ಮಾತ್ರ ತಡೆಗಟ್ಟಲು ಸಾಧ್ಯವಿದೆ. ಅದು ತೆನೆಗಳಲ್ಲಿ ಸೇರಿಕೊಂಡರೆ ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಈ ಕೀಟವು 100 ಕ್ಕಿಂತ ಹೆಚ್ಚಿನ ಫಸಲುಗಳನ್ನು ಬಾಧೆಗೊಳಿಸುತ್ತದೆ. ಆದರೆ ಭಾರತದಲ್ಲಿ ಮೆಕ್ಕೆ ಜೋಳದಲ್ಲಿ (ಹಲವು ಧಾನ್ಯದ ಬೆಳೆಗಳು, ತರಕಾರಿಗಳು ಮತ್ತು ಕಾಡು ಸಸ್ಯಗಳು) ಮೊದಲ ಬಾರಿ ಕಂಡುಬಂದಿದೆ. ಮೂಲತಃ ಸೈನಿಕ ಕೀಟ ಅಮೇರಿಕಾದ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಿಗೆ ಸ್ಥಳೀಯವಾಗಿದೆ, ನಂತರ ದಕ್ಷಿಣ-ಪಶ್ಚಿಮ ನೈಜೀರಿಯಾದಿಂದ ಕಂಡುಬಂದಿದೆ, ನಂತರ ಇದು ಆಫ್ರಿಕಾಕ್ಕೆ ಹರಡಿತು. ಭಾರತದಲ್ಲಿ, ಮೊದಲ ಬಾರಿಗೆ ಕರ್ನಾಟಕದ ಶಿವಮೊಗ್ಗಾದಲ್ಲಿ 2018ರ ಮೇ ಮಧ್ಯದಲ್ಲಿ ಮತ್ತು ಇತರ ರಾಜ್ಯಗಳಲ್ಲಿ ಅಂದರೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡಿನಲ್ಲಿ ಕೂಡಾ ಕಂಡುಬಂದಿದೆ.
ರಾತ್ರಿ ಸಮಯದಲ್ಲಿ ಬಕಾಸುರಂತೆ ಮೆಕ್ಕೆಜೋಳದ ತೆನೆಯನ್ನು ತಿನ್ನುವ ಈ ಹುಳುಗಳ ನಿರ್ವಹಣೆಗೆ ಕೆಲವು ಕ್ರಮಗಳನ್ನು ತಗೆದುಕೊಳ್ಳಲು ರೈತರಿಗೆ ಸಲಹೆ ನೀಡಲಾಗುತ್ತದೆ. ಆರಂಭಿಕ ಹಂತದಲ್ಲಿ ಮಾಗಿ ಉಳುಮೆ ಆಳದವರೆಗೆ ಮಾಡಬೇಕು ಸೂರ್ಯನ ನೇರ ಬೆಳಕಿಗೆ ಮಣ್ಣು ಕಾಯುವದರಿಂದ ಮಣ್ಣಿನಲ್ಲಿರುವ ಕೋಶಾವಸ್ಥೆಗಳು ಮತ್ತು ಇತರ ಮಣ್ಣಿನಲ್ಲಿನ ಸೈನಿಕ ಕೀಟದ ಉಳಿದ ಹಂತಗಳನ್ನು ಸಾಯುತ್ತದೆ ಮತ್ತು ಪಕ್ಷಿಗಳು ಮಾಗಿ ಉಳುಮೆ ಮಾಡಿದ ಮೇಲೆ ಮಣ್ಣಿನಿಂದ ಹೊರ ಬರುವ ಹುಳುಗಳನ್ನು ಆರಿಸಿ ತಿನ್ನುತ್ತವೆ. ಇದು ನಿರ್ದಿಷ್ಟ ಪ್ರದೇಶದ ಸೂಕ್ತವಾದ ಧಾನ್ಯ ಬೆಳೆಗಳೊಂದಿಗೆ ಮೆಕ್ಕೆ ಜೋಳದಲ್ಲಿ ಅಂತರ ಬೆಳೆಯಾಗಿ ಉದಾ. ಮೆಕ್ಕೆ ಜೋಳ + ತೊಗರಿ / ಉದ್ದು / ಹೆಸರು ಬೆಳೆಯಬೇಕು.ಹೊಲದಲ್ಲಿ ಕೀಟ,ರೋಗವನ್ನು ಪರೀಕ್ಷಿಸಲು, ಸಾಪ್ತಾಹಿಕ ಅಂತರಗಳಲ್ಲಿ ಎಕರೆಗೆ ಟ್ರೈಕೊಗ್ರಾಮ ಪ್ರಿಟಿಯೊಸಮ್ ಅಥವಾ ಟೆಲಿನೋಮಸ್ ರೆಮಸ್ @ 50,000 ಬಿಡುಗಡೆ ಅಥವಾ 3 ಪತಂಗಗಳು / ಬಲೆಗೆ ಸಿಲುಕಿದಾಗ ಅದನ್ನು ಆಧರಿಸಿ ಎಕರೆಗೆ 5 ಮೋಹಕ ಬಲೆಗಳನ್ನು ಅಳವಡಿಸಿ. ಮೆಟಾರ್ಜಿಯಾಮ್ ಅನಿಸೊಪ್ಲಿಯಾ ಪುಡಿ ಸೂತ್ರೀಕರಣ @ 75 ಗ್ರಾಂ ಅಥವಾ ಬ್ಯಾಸಿಲಸ್ ತುರಿಂಜಿಯೆನ್ಸಿಸ್@ 30 ಗ್ರಾಂನಷ್ಟು 15-20 ದಿನಗಳ ಮಧ್ಯಂತರದಲ್ಲಿ 15 ಲೀಟರ್ ನೀರಿಗೆ ಬೇರೆಸಿ ಸುಳಿ ಹಂತದಲ್ಲಿ ಸಿಂಪಡಿಸಬೇಕು. ಪರಿಣಾಮಕಾರಿ ಕೀಟನಾಶಕಗಳ ನಿರ್ವಹಣೆಗಾಗಿ, ಬೀಜವನ್ನು ಸೈಂಟ್ರಾನಿಲಿಪ್ರೋಲ್ 19.8% + ಥೈಯಾಮೆಥೋಕ್ಸಮ 19.8% @ 4 ಮಿ.ಲಿ ಪ್ರತಿ ಕಿ.ಗ್ರಾಂ ಪ್ರಮಾಣದಲ್ಲಿ ಬೀಜೋಪಚಾರ ಮಾಡಬೇಕು. ಬೀಜದ ಮೊಳಕೆಯೊಡೆಯುವ ಹಂತದಲ್ಲಿ ಬೇವಿನ ಬೀಜದ ಕಷಾಯವನ್ನು 5% / ಅಜಾರ್ಡೈರಕ್ಟಿನ್ 1500ppm @ 5 ಮಿಲೀ ನೀರಿಗೆ ಬೇರೆಸಿ ಸಿಂಪಡಿಸಿ.ನಂತರ ಸುರುಳಿ/ಸುಳಿ ಬಳೆಯುವ ಹಂತದಲ್ಲಿ ಎಮ್ಯಾಮ್ಯಾಕ್ಟಿನ್ ಬೆಂಜೊಯೇಟ್ @) 0.4 ಗ್ರಾಂ / ಲೀ ನೀರಿಗೆ ಬೇರೆಸಿ ಅಥವಾ ಸ್ಪಿನೋಸಾಡ್ @ 0.3 ಮಿಲಿ / ಲೀ ನೀರಿಗೆ ಬೇರೆಸಿ ಅಥವಾ ಥೈಯಾಮೆಥೋಕ್ಸಮ 12.6% + ಲ್ಯಾಂಬ್ಡಸೈಹಲೋಥ್ರಿನ್ 9.5% 0.5 ಮಿಲಿ / ಲೀ ನೀರು ಅಥವಾ ಕ್ಲೋರಂಟ್ರಾನಿಲಿಪ್ರೊಲ್ 18.5% ಎಸ್ಸಿ @ 0.3 ಮಿ.ಲಿ / ಲೀ ನೀರಿಗೆ ಬೇರೆಸಿ ಸಿಂಪಡಿಸಿ. ಬಹಳ ನಂತರದ ಹಂತವು ನಿರ್ವಹಿಸಲು ಬಹಳ ಕಷ್ಟವಾಗಬಹುದು, ಆದ್ದರಿಂದ ರೈತರಿಗೆ ಕೀಟವನ್ನು ನಿಯಂತ್ರಿಸಲು ಮುಂಚಿತವಾಗಿ ಅಗತ್ಯ ಕ್ರಮ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಮೂಲ: ಭಾರತ ಸರ್ಕಾರ , ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ. ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
191
1
ಕುರಿತು ಪೋಸ್ಟ್