ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಕೃಷಿಯು ನಮ್ಮ ದೇಶದ ಬೆನ್ನೆಲುಬು'
ಭಾರತದಲ್ಲಿ ಕೃಷಿಯ ಬಗ್ಗೆ ಚರ್ಚೆ ನಡೆದರೆ, 'ಕೃಷಿಯು ನಮ್ಮ ದೇಶದ ಬೆನ್ನೆಲುಬು' ಎಂದು ಯಾವಾಗಲೂ ಖಚಿತವಾಗಿ ಹೇಳಲಾಗುತ್ತದೆ. ಇದು ನಮ್ಮ ಎಲ್ಲಾ ಪೂರ್ವಜರ ನುಡಿಗಟ್ಟಾಗಿದೆ.ಹೇಗಾದರೂ, ಕೃಷಿ ಆರ್ಥಿಕತೆಗೆ ಯಾರಾದರೂ ಎಷ್ಟು ಆಳವಾಗಿ ಭಾವಿಸುತ್ತಾರೆ ಎಂಬುದು ನಾನು ಇತ್ತೀಚೆಗೆ ಯುರೋಪಿನಲ್ಲಿ ಅನುಭವಿಸಿದೆ. ನನ್ನ ಸಹೋದ್ಯೋಗಿಗಳು ಮತ್ತು ನಾನು ಇತ್ತೀಚೆಗೆ ಯುರೋಪಿನ ನೆದರ್‌ಲ್ಯಾಂಡ್ಸ್‌ನಲ್ಲಿ ತರಬೇತಿಗಾಗಿ ಸ್ವಲ್ಪ ಸಮಯ ಕಳೆಯುವ ಅವಕಾಶವನ್ನು ಪಡೆದುಕೊಂಡೆವು. ನನ್ನ ಒಂದು ವಾರ ಇಲ್ಲಿಯೇ ಇದ್ದಾಗ, ಅನೇಕ ವಿಷಯಗಳನ್ನು ತಿಳಿದುಕೊಳ್ಳುವ ಮತ್ತು ಅನುಭವಿಸುವ ಭಾಗ್ಯ ನನಗೆ ಸಿಕ್ಕಿತು. ಕೃಷಿಯ ಇತ್ತೀಚಿನ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡುವುದು ಈ ಭೇಟಿಯ ಉದ್ದೇಶವಾಗಿರುವುದರಿಂದ, ನಾವು ಅನೇಕ ಕೃಷಿ ತಜ್ಞರು, ರೈತರು ಮತ್ತು ಕೃಷಿ ಕಾರ್ಮಿಕರನ್ನು ಭೇಟಿ ಮಾಡಬೇಕಾಯಿತು. ಈ ಸಂಭಾಷಣೆಯ ಮೂಲಕ, ಡಚ್ ಜನರು ಶಿಸ್ತುಬದ್ಧರು, ಮೌನ ಮತ್ತು ವೃತ್ತಿ ಪ್ರೀತಿಯರು ಜನರು ಎಂದು ನಾನು ಕಲಿತ್ತಿದ್ದೇನೆ. ಈ ಭೇಟಿಯ ಕೊನೆಯ ದಿನದಲ್ಲಿ, ನಾವು ಫೈವ್ ಸ್ಟಾರ್ ಹೋಟೆಲ್‌ಗೆ ಭೇಟಿ ನೀಡಿ ಒಂದು ಅಲ್ಲೇ ನೆಲೆಸಿದ್ದೆವು. ಹೋಟೆಲ್‌ನಲ್ಲಿ ಬೆಳಗಿನ ಉಪಾಹಾರಕ್ಕಾಗಿ ಹೋದಾಗ ಅಲ್ಲಿ ನಾವು ಕಟ್ಟಿಗೆಯ ಹಲಗೆಯ ಮೇಲೆ ಬರೆದಿರುವ ಒಂದು ವಾಕ್ಯ ಓದಿದೆ. ಕಟ್ಟಿಗೆಯ ಹಲಗೆಯ ಮೇಲೆ ಬರೆದಿರುವ ಒಂದು ಸರಳ ವಾಕ್ಯ ನನ್ನ ಮನಸ್ಸಿನಲ್ಲಿ ಸ್ಪರ್ಶಿಸುವ ಹಾಗಿತ್ತು. ಈ ಕಟ್ಟಿಗೆಯ ಹಲಗೆಯ ಮೇಲೆ ಬರೆದಿರುವ ವಾಕ್ಯವು ಈ ತರಹ ಇತ್ತು ಈ ಉಪಹಾರವು ಯೂರಿಪಿನ ರೈತರ ಮತ್ತು ಅವರ ಸಮೂಹದ ಆಧಾರವಾಗಿದೆ ಎಂದು ಹೇಳುತ್ತಿತ್ತು. ಈ ಕಟ್ಟಿಗೆಯ ಹಲಗೆಯ ಸುತ್ತಲೂ ಹಣ್ಣುಗಳು, ಟೊಮೆಟೊ, ಸೌತೆಕಾಯಿ ಸಲಾಡ್, ವಿದೇಶಿ ಹಸಿರೆಲೆ ತರಕಾರಿಗಳ ಸಲಾಡ್, ಹಾಲಿನ ವಿವಿಧ ಪದಾರ್ಥಗಳು (ಬೆಣ್ಣೆ, ಮೊಸರು) ಅನೇಕ ಹಣ್ಣಿನ ರಸಗಳೊಂದಿಗೆ, ಜೇನುತುಪ್ಪ ಇತ್ಯಾದಿಗಳನ್ನು ಇರಿಸಲಾಗಿತ್ತು. ಈ ತಟ್ಟೆಯಲ್ಲಿ ಇನ್ನೂ ಕೆಲವು ವಿಷಯಗಳನ್ನು ನಮೂದಿಸಲಾಗಿತ್ತು. "ಇಲ್ಲಿಯ ಎಲ್ಲಾ ಬೆಳೆಗಳು ಸ್ಥಳೀಯವಾಗಿದ್ದವು, ಈ ಪದಾರ್ಥ್ಗಳಲ್ಲಿ ಯಾವುದೇ ಕೃತಕ ಸಕ್ಕರೆಯನ್ನು ಬಳಸಲಾಗಿಲ್ಲ, ಮತ್ತು ಎಲ್ಲಾ ಪ್ಯಾಕೇಜಿಂಗ್ಗಳು ಸರಳ ರೀತಿಯಲ್ಲಿ ಮರುಬಳಕೆಗೆ ಬರುವ ಹಾಗೆ ಪರಿಸರ ಸಮರ್ಥನೀಯವಾಗಿತ್ತು" ಎಂಬಂತಹ ಸಂದೇಶಗಳಿವೆ. ಅವರು ತಂದಿರುವ ಹೊಲದ ಮತ್ತು ಹೋಟೆಲ್ನಿಂದ ತಂದ ವತಿಯಿಂದಲೂ ಒಂದು ವಾಕ್ಯ ಬರೆದಿದ್ದರು. ಸಮಾಜದಲ್ಲಿ ಕೆಲವು ಕಾರ್ಮಿಕರು ಕೆಲಸದ ನಿಮಿತ್ಯ ಮತ್ತು ಮನೆಯಿಂದ ದೂರ ವಾಸಿಸುವವರಿಗೆ ಸೂಕ್ತವಾದ ಸ್ಥಳವನ್ನು ಸೃಷ್ಟಿಸಿವೆ. ಅಸಾಧಾರಣ ಉತ್ಸಾಹ ಹೊಂದಿರುವ ಜನರು ಅತ್ಯಂತ ರುಚಿಕರವಾದ ಮತ್ತು ಗುಣಮಟ್ಟದ ಆಹಾರವನ್ನು ತಯಾರಿಸುತ್ತಾರೆ. ಹಲಗೆಯ ಕೊನೆಯಲ್ಲಿ ಹೀಗೆ ಬರೆಯಲಾಗಿತ್ತು, ಯುವಜನರು ನಿರೋಗಿಯಾಗಿರಲು, ಆರೋಗ್ಯಕರ ಆಹಾರ ಮತ್ತು ರೈತ ಮತ್ತು ಕೃಷಿಗೆ ಇರುವ ಸಂಬಂಧವು ಮುರಿಯಲಾರದಂತಹದು ಎಂಬ ಸದ್ಭಾನೆ ಇರಬೇಕು ಎಂದು ಅದೇ ಕಂಬದ ಮೇಲೆ ಬರೆಯಲಾಗಿದೆ.” ಸ್ನೇಹಿತರೇ, ಇದು ಬಹಳ ಸಣ್ಣ ನುಡಿಗಟ್ಟು, ಆದರೆ ಇದು ಸಮಾಜದಲ್ಲಿ ಜಾಗೃತಿ ಮೂಡಿಸುವಂತಹದಾದಿಗೆ ಮತ್ತು ಜಾಗೃತಿ ಮೂಡಿಸುತ್ತದೆ.ಇದನ್ನು ಓದುವುದರಿಂದ ನಮ್ಮ ರಾಷ್ಟ್ರದಲ್ಲಿ ಗ್ರಾಹಕರು ಮತ್ತು ರೈತರಿಗೆ ಬಹಳ ಕಡಿಮೆ ಹಕ್ಕುಗಳು ಅಥವಾ ನ್ಯಾಯವಿದೆ ಎಂದು ನನಗೆ ತಿಳಿದು ಬಂದಿತು. ಹಾಗಾದರೆ, ನಾವು ನಿಜವಾಗಿಯೂ ಕೃಷಿ ದೇಶವೇ? ದೇಶವಾಗಿ ನಾವು ಅಂತ್ಯವಿಲ್ಲದ ಆಲೋಚನೆಗಳಿಂದ ನಡೆಸಲ್ಪಡುತ್ತೇವೆ, ಆದರೆ ಅಂತಹ ಆಲೋಚನೆಗಳನ್ನು ಕಾರ್ಯಗತಗೊಳಿಸಲು ನಾವು ಒಳ್ಳೆಯವರೇ? ಕೃಷಿ ಇಳುವರಿ ನಿಜವಾಗಿಯೂ ಗುಣಮಟ್ಟದ ಮತ್ತು ಸುರಕ್ಷಿತವೇ? ನಾವು ವಿಷಕಾರಿ ಆಹಾರವನ್ನು ಉತ್ಪಾದಿಸುತ್ತಿದ್ದೇವೆಯೇ? ರೈತರ ಉತ್ಪನ್ನಗಳನ್ನು ಗ್ರಾಹಕರು ಗೌರವಿಸುತ್ತಾರೆಯೇ? ಎತ್ತಿನ ಗಾಡಿ ಮತ್ತು ಫುಟ್‌ಪಾತ್‌ನಿಂದ ಹೆಚ್ಚು ಕಡಿಮೆ ಬೆಲೆಯ ತರಕಾರಿಗಳನ್ನು ಖರೀದಿಸುವವರು,ಹವಾನಿಯಂತ್ರಿತ ಮಾಲ್‌ಗಳಿಂದ ಬಟ್ಟೆ, ಬೂಟುಗಳು ಮತ್ತು ಸೌಂದರ್ಯವರ್ಧಕಗಳಂತಹ ದುಬಾರಿ ಉತ್ಪನ್ನಗಳನ್ನು ಖರೀದಿಸುವ ಬಗ್ಗೆ ಸಾಮಾಜಿಕವಾಗಿ ತಿಳಿದಿರುವಿರಾ? ಈ ಸನ್ನಿವೇಶವನ್ನು ಗಮನಿಸಿ, ನಾವು ಅದಕ್ಕೆ ತಕ್ಕಂತೆ ರೂಪಾಂತರಗೊಳ್ಳಬೇಕು ಅಥವಾ ನಾವು ಕೃಷಿ ಪ್ರಧಾನ ದೇಶವೆ? ಎಂದು ಮನವರಿಕೆ ಮಾಡಿಕೊಳ್ಳಬೇಕು. ಈ ಲೇಖನವು ಕೃಷಿ ಆರ್ಥಿಕತೆಯ ಅರಿವಿರುವ ನಾಗರಿಕರಿಗಾಗಿ ಪರಿಣಾಮಕಾರಿಯಾಗಲಿದೆ ಮತ್ತು ಕೃಷಿಯೇ ಮೂಲ ಎಂದು ಗುರುತಿಸಲು ನಿರೀಕ್ಷಿಸಲಾಗಿದೆ. ಇದು ಎರಡು ವರ್ಗದ ಜನರಿಗೆ ಅನ್ವಯಿಸುತ್ತದೆ; ಮೊದಲನೆಯದಾಗಿ, ಭಾರತವು ಕೃಷಿ ಪ್ರಧಾನ ದೇಶವೆಂಬ ವಾಸ್ತವವನ್ನು ಒಪ್ಪಿಕೊಳ್ಳುವ ಜನರು, ಕೃಷಿ ಪ್ರಧಾನ ದೇಶ ಹೇಗಿರಬೇಕು ಎಂಬುದನ್ನು ಅವರು ನಿಖರವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಎರಡನೆಯದು, ಇದನ್ನು ಕೃಷಿ ರಾಷ್ಟ್ರವೆಂದು ಒಪ್ಪದ ಜನರಿಗೆ, ಈ ಲೇಖನವು ಸಹಾಯಕವಾಗಬಹುದು. ಮೂಲ: ತೇಜಸ್ ಕೋಲ್ಹೆ, ಹಿರಿಯ ಕೃಷಿ ವಿಜ್ಞಾನಿ ಆಗ್ರೋಸ್ಟಾರ್ ಸೆಂಟರ್ ಆಫ್ ಎಕ್ಸಲೆನ್ಸ್
ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
397
0