AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕುಳೆ ಕಬ್ಬಿನಲ್ಲಿ  ರವದಿಯ ನಿರ್ವಹಣೆ ಮತ್ತು ಸಾವಯವ ಗೊಬ್ಬರ ತಯಾರಿಕೆ
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಕುಳೆ ಕಬ್ಬಿನಲ್ಲಿ ರವದಿಯ ನಿರ್ವಹಣೆ ಮತ್ತು ಸಾವಯವ ಗೊಬ್ಬರ ತಯಾರಿಕೆ
ಒಂದು ಹೆಕ್ಟಾರಗೆ ೮-೧೦ ಟನ್ ಒಣ ರವಾದಿಯು ದೊರೆಯುವುದು,ಇದನ್ನು ಸುಡದೆ ಕುಳೆ ಬೆಳೆಯಲ್ಲಿ ವ್ಯವಸ್ಥಿತವಾಗಿ ಹಾಕಿದಲ್ಲಿ ಮಣ್ಣಿನ ಸಾವಯವ ಪದಾರ್ಥ ಹಾಗು ಪೋಷಕನಾಶಗಳ ಮಟ್ಟ ಹೆಚ್ಚುತ್ತದೆ. ಕಬ್ಬಿನ ರವದಿಯಲ್ಲಿ ೨೮ ರಿಂದ ೩೦%-ಸಾವಯವ ಇಂಗಾಲ ಮತ್ತು ಸಾರಜನಕ- ೦.೩೫%, ರಂಜಕ ೦.೧೩% ಮತ್ತು ಪೊಟಾಷ್ ೦.೬೫% ಇರುವುದು.
ಆದ್ದರಿಂದ, ಕುಳೆ ಕಬ್ಬಿನಲ್ಲಿ ರವಾದಿಯನ್ನು ೨ ಸಾಲುಗಳ ಮಧ್ಯದಲ್ಲಿ ಹಾಕಬೇಕು. ಎಡಕ್ಕೆ ೫೦ ಕೆಜಿ ಯೂರಿಯಾ ಮತ್ತು ೫೦ಕೆಜಿ ಸೂಪರ್ ಫಾಸ್ಫೇಟ ಗೊಬ್ಬರವನ್ನು ಮೇಲೆ ಹಾಕಬೇಕು ನಂತರ ೫-೬ ಕೆಜಿ ರವದಿ ಕಲಿಸುವ ಸೂಕ್ಶ್ಮಣುಜೀವಿ ಟ್ರೈಕೋಡರ್ಮಾ ವಿರಿಡೆ ಸಗಣಿ ಕಲಿಸಿದ ನೀರಿನಲ್ಲಿ ಮಿಶ್ರಣ ಮಾಡಿ ರವಾದಿಯ ಮೇಲೆ ಸಿಂಪಡಿಸಬೇಕು ಮತ್ತು ಇದರಿಂದ ರವದಿ ಬೇಗನೆ ಕಳಿಯುವುದು. ಉಳಿದಿರುವ ಕಬ್ಬಿನ ಕುಳೆಗಳನ್ನು ಕತ್ತರಿಸಿಕೊಂಡು ಅದರ ಮೇಲೆ ಕಾರ್ಬೆಂಡಾಂಜಿಮ್ ೧೨% + ಮ್ಯಾಂಕೋಜೆಬ್ ೬೩% ಡಬ್ಲ್ಯೂ ಪಿ @ 1.5 ಗ್ರಾಂ ಪದಾರ್ಥಗಳೊಂದಿಗೆ ಶಿಲೀಂಧ್ರನಾಶಕ ಮತ್ತು ಕ್ಲೋರ್ಪಿರಿಫೊಸ್ ೫೦% + ಸೈಪರ್‌ಮೆಥ್ರಿನ್ ೫ % ಇಸಿ @೨ ಮಿಲಿ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ. ಇದು ಮಣ್ಣಿನಿಂದ ಶಿಲೀಂಧ್ರ ರೋಗಗಳು ಮತ್ತು ಕೀಟಗಳನ್ನು ತಡೆಯಲು ಸಹಾಯ ಮಾಡುತ್ತದೆ. ನಂತರ ಜೈವಿಕ ಸಿಮೆಂಟು ಸೇರಿಸಿ (ಸ್ಲರಿ ತಯಾರಿಸಲು, ಹಸುವಿನ ಮೂತ್ರ, ಸಗಣಿ, ಬೆಲ್ಲ, ಕಡಲೆ ಹಿಟ್ಟು ಮತ್ತು ಮಜ್ಜಿಗೆಯನ್ನು ೨೦೦ ಲೀಟರ್ ನೀರಿನಲ್ಲಿ ಬೆರೆಸಿ ೨ ರಿಂದ ೩ ದಿನಗಳವರೆಗೆ ನೆನೆ ಇಡಬೇಕು ). ಅದರಲ್ಲಿ ೧ ಕೆಜಿ ಕುಳೆಯನ್ನು ಕಳಿಸುವ ಸೂಕ್ಷ್ಮಾಣುಜೀವಿಗಳನ್ನು ಬೆರೆಸಿ ಮಣ್ಣಿನ ಮೂಲಕ ಕೊಡಿ. ತಯಾರಿಸಿದ ಗೊಬ್ಬರವನ್ನು ಸಾಧ್ಯವಾದಷ್ಟು ಸಂಜೆಯ ವೇಳೆಗೆ ಸಿಂಪಡಿಸಬೇಕು. ಅದರ ನಂತರ, ಕಬ್ಬಿಗೆ ನೀರು ನೀಡಿ ಮತ್ತು ಮುಂದಿನ ೧ ತಿಂಗಳುಗಳವರೆಗೆ ನಿಯಮಿತವಾಗಿ ತೇವಾಂಶವನ್ನು ಹಿಡಿಟ್ಟು ಕೊಳ್ಳುವ ಸಾಮರ್ಥ್ಯವು ಮಣ್ಣಿನಲ್ಲಿ ಕಾಣಬಹುದು. ಮಣ್ಣು ಒದ್ದೆಯಾದಾಗ, ಗೊಬ್ಬರದ ಮೇಲ್ಭಾಗವನ್ನು ಸ್ವಲ್ಪ ಕಾಲಿನಿಂದ ಒತ್ತಬೇಕು, ಇದರಿಂದ ಕುಳೆಯ ಪದರವು ಮಣ್ಣಿನ ಸಂಪರ್ಕಕ್ಕೆ ಬರುತ್ತದೆ. ಮೂಲ-ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ ಈ ಮಾಹಿತಿಯು ನಿಮಗೆ ಉಪಯುಕತ್ತವಾಗಿದ್ದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳು ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಯ ಮೂಲಕ ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
432
3