AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಕಲ್ಲಂಗಡಿ ಮತ್ತು ಖರಬೂಜಾ ಹಣ್ಣಿನಲ್ಲಿ ಹಣ್ಣಿನ ನೊಣದ ಹಾನಿ ಮತ್ತು ನಿರ್ವಹಣೆ
ಹೆಣ್ಣು ನೊಣವು ಬೆಳೆಯುತ್ತಿರುವ ಹಣ್ಣುಗಳನ್ನು ಸೀಳಿ ಮೊಟ್ಟೆಗಳನ್ನು ಹಣ್ಣುಗಳ ಒಳಗೆ ಇಡುತ್ತದೆ. ಮೊಟ್ಟೆಯಿಂದ ಹೊರ ಬಂದ ಹಳದಿ ಮಿಶ್ರಿತ ಬಿಳಿ ಮರಿಹುಳು ಅದರ ತಿರುಳನ್ನು ತಿನ್ನುತ್ತದೆ. ಸಣ್ಣ ಹಾನಿಗೊಳಗಾದ ಹಣ್ಣುಗಳು ನೆಲಕ್ಕೆ ಬೀಳುತ್ತವೆ. ಅಭಿವೃದ್ಧಿ ಹೊಂದಿದ ಹಣ್ಣುಗಳು ಹಣ್ಣುಗಳಲ್ಲಿ ಕೊಳೆಯುತ್ತವೆ ಮತ್ತು ಕೆಳಗೆ ಬೀಳುತ್ತವೆ. ಹಣ್ಣುಗಳು ದೋಣಿಯಾಕಾರವಾಗಿ ಕಾಣುತ್ತವೆ. ನೊಣವು ಮೊಟ್ಟೆ ಇಡುವಾಗ ಹಣ್ಣು ಸೀಳಿ ಇಡುವುದರಿಂದ ಹೊರ ಬಂದ ನೀರಿನಂತಹ ಪದಾರ್ಥವು ನಂತರ ಗಟ್ಟಿಯಾಗುತ್ತದೆ ಮತ್ತು ಕಂದು ಬಣ್ಣದ ಅಂಟಿನಂತೆ ಕಾಣುತ್ತದೆ.
ಹಣ್ಣಿನ ಗುಣಮಟ್ಟವನ್ನು ಹದಗೆಡಿಸುತ್ತದೆ ಮತ್ತು ಮಾರುಕಟ್ಟೆಯ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ._x000D_ _x000D_ ಕಾಳಜಿ ವಹಿಸದಿದ್ದರೆ, ಶೇಕಡಾ 100 ರಷ್ಟು ಹಾನಿಯನ್ನು ಸಹ ಉಂಟು ಮಾಡಬಹುದು._x000D_ ಹಣ್ಣಿನ ನೊಣಗಳು ಉಷ್ಣ ವಾತಾವರಣದಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ._x000D_ _x000D_ ಹಾನಿಗೊಳಗಾದ ಹಣ್ಣುಗಳನ್ನು ಪ್ರತಿದಿನ ಸಂಗ್ರಹಿಸಿ ಮಣ್ಣಿನಲ್ಲಿ ಹೂತುಹಾಕಿ ನಾಶ ಪಡಿಸಬೇಕು._x000D_ ಹೊಲವನ್ನು ಸ್ವಚ್ಛಗೊಳಿಸಬೇಕು._x000D_ ಹೊಲದ ಸುತ್ತಲೂ ಒಂದು ಅಥವಾ ಎರಡು ಸಾಲು ಗೋವಿನ ಜೋಳವನ್ನು ಬೆಳೆಸಿಕೊಳ್ಳಿ ಮತ್ತು ಅವುಗಳ ಮೇಲೆ ಕೀಟನಾಶಕಗಳನ್ನು ನಿಯತಕಾಲಿಕವಾಗಿ ಸಿಂಪಡಿಸಿ._x000D_ _x000D_ ಪ್ರೌಢ ಹಣ್ಣಿನ ನೊಣ ನಿಯಂತ್ರಣಕ್ಕಾಗಿ, ಬೆಲ್ಲ@450 ಗ್ರಾಂನ್ನು 10 ಲೀಟರ್ ನೀರಿನಲ್ಲಿ ಕರಗಿಸಿ 24 ಗಂಟೆಗಳ ಕಾಲ ಬಿಡಬೇಕು. ಡಿಡಿವಿಪಿ @ 10 ಮಿಲಿ ಬೇರೆಸಿ ಮತ್ತು ಹೂಬಿಡುವ ಆರಂಭದಿಂದ ವಾರಕ್ಕೊಮ್ಮೆ ಬೆಳೆಗೆ ಸಿಂಪಡಣೆ ಮಾಡಿ._x000D_ _x000D_ ಗಂಡು ಹಣ್ಣಿನ ನೊಣವನ್ನು ಆಕರ್ಷಿಸಲು ಮತ್ತು ಕೊಲ್ಲಲು ಸೆರೆ ಹಿಡಿಯಲು ಬಳ್ಳಿಗಳ ಮೇಲಾವರಣಕ್ಕಿಂತ ಒಂದು ಮೀಟರ್ ಎತ್ತರದಲ್ಲಿ ಎಕರೆಗೆ 8-10 ಕ್ಯೂ ಲೂರ್ ಮೋಹಕ ಬಲೆಯನ್ನು ಸ್ಥಾಪಿಸಿ._x000D_ _x000D_ ಬಲೆಗಳಲ್ಲಿ ಸಂಗ್ರಹಗೊಂಡ ನೊಣಗಳನ್ನು ವಾರದಲ್ಲಿ ಎರಡು ಬಾರಿ ಬಲೆಗಳಿಂದ ಹೊರ ತೆಗೆದು ನಾಶಪಡಿಸಿ._x000D_ _x000D_ ಇಂತಹ ಬಲೆಗಳು ಬೆಳೆ ಅವಧಿಯಾದ್ಯಂತ ಪರಿಣಾಮಕಾರಿಯಾಗಿರುತ್ತವೆ, ಮತ್ತ ಮತ್ತೆ ಬದಲಾಯಿಸಬೇಡಿ._x000D_ _x000D_ ಹೊಲದಲ್ಲಿ ಪರಸ್ಪರ ಸಮಾನ ದೂರದಲ್ಲಿ ಬಲೆಗಳನ್ನು ಸ್ಥಾಪಿಸಿ._x000D_ _x000D_ ಬಳ್ಳಿಗಳಿಗೆ ಕಟ್ಟಿಗೆಯ ಸಹಾಯದಿಂದ ಬಲೆಗಳನ್ನು ಅಳವಡಿಸಿದ್ದರೆ, ಗೆದ್ದಲುಗಳ ಬಗ್ಗೆ ಕಾಳಜಿಯನ್ನು ವಹಿಸಿ._x000D_ _x000D_ ಗಾಳಿ ಅಥವಾ ಬಿರುಗಾಳಿಯಿಂದಾಗಿ ಬಲೆಗಳು ಉರುಳಿ ಬೀಳಬಹುದು ಅದಕ್ಕಾಗಿ ತೆಳ್ಳನೆಯ ಕಟ್ಟಿಗೆಯನ್ನು ಜೋಡಿಸಬಹುದು._x000D_ _x000D_ ನಾಯಿಗಳು ಅಥವಾ ಇತರ ಪ್ರಾಣಿಗಳಿಗೆ ಬಲೆಗಳಿಗೆ ಹಾನಿಯಾಗಬಹುದು ಅದರ ಬಗ್ಗೆ ಎಚ್ಚರಿಕೆ / ಜಾಗರೂಕರಾಗಿರಿ._x000D_ _x000D_ ಮೂಲ: ಆಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ _x000D_ _x000D_ ಈ ಮಾಹಿತಿಯು ನಿಮಗೆ ಉಪಯುಕ್ತವೆಂದು ನೀವು ಕಂಡುಕೊಂಡರೆ, ಅದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಶೇರ್ ಮಾಡಲು ಮತ್ತು ಲೈಕ್ ಮಾಡಲು ಮರೆಯಬೇಡಿ._x000D_
378
2