AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕಬ್ಬಿನಲ್ಲಿ ಏರೋಪ್ಲೇನ್ ಕೀಟದ ಹತೋಟಿ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಕಬ್ಬಿನಲ್ಲಿ ಏರೋಪ್ಲೇನ್ ಕೀಟದ ಹತೋಟಿ
ಈ ಕೀಟಗಳು ತುಂಬಾ ಚಟುವಟಿಕೆಯಿಂದ ಕೂಡಿರುತ್ತವೆ, ಒಂದು ಎಲೆಯಿಂದ ಇನ್ನೊಂದಕ್ಕೆ ಹಾರಿಹೋಗುತ್ತವೆ. ಬಾಧೆ ಹೆಚ್ಚಿರುವ ಪ್ರದೇಶದಲ್ಲಿ,ಅಪ್ಸರೆ ಕೀಟಗಳು ಮತ್ತು ಪ್ರೌಢ ಕೀಟವು ಎರಡು ಎಲೆಗಳಿಂದ ರಸವನ್ನು ಹೀರುವ ಮೂಲಕ ಬಾಧೆಯನ್ನುಂಟು ಮಾಡುತ್ತವೆ. ಜಿಗುಟಾದ ಜೇನುತುಪ್ಪದಂತಹ ಸ್ರವಿಕೆಯು ಅದರ ದೇಹದಿಂದ ಸ್ರವಿಸುತ್ತಿರುತ್ತದೆ ಮತ್ತು ಎಲೆಗಳ ಮೇಲೆ ಬೀಳುತ್ತದೆ. ಇದರ ಪರಿಣಾಮವಾಗಿ, ಕಬ್ಬಿನ ಎಲೆಗಳ ಮೇಲೆ ಕಪ್ಪು ಶಿಲಿಂದ್ರಗಳ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ,ಇದು ಕಬ್ಬಿನಸಂಶ್ಲೇಷಣೆ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದರಿಂದಾಗಿ ತೀವ್ರವಾಗಿ ಇಳುವರಿಯ ನಷ್ಟವನ್ನು ಗಮನಿಸಬಹುದು. ಕಬ್ಬಿನ ಏರೋಪ್ಲೇನ್ ಕೀಟದವನ್ನು ನಿಯಂತ್ರಿಸುವ ಪ್ರಮುಖ ನಿರ್ವಹಣಾ ಪದ್ಧತಿಗಳನ್ನು ಕೆಳಗಿನಂತಿವೆ : ನಿರ್ವಹಣೆ: ಪ್ರೌಢ ಕೀಟ ಹಾಕಿದ ಮೊಟ್ಟೆಗಳ ಗುಂಪನ್ನು ಸಂಗ್ರಹಿಸಿ ನಾಶಮಾಡಿ ಶಿಲೀಂಧ್ರ ಆಧಾರಿತ ಪುಡಿ ಮೆಟಾರ್ಜಿಜಿಯಂ ಅನಿಸೊಪ್ಲಿಯಾವನ್ನು @ 40 ಗ್ರಾಂ ನ್ನು 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ ಎಪಿರಿಕೇನಿಯಾ ಮೆಲನೊಲ್ಯುಕಾ, ಪರಾವಲಂಬಿಗಳನ್ನು@ 1 ಲಕ್ಷ ಪರಾವಲಂಬಿಗಳು (250 ಮೊಟ್ಟೆಯ ಗುಂಪು ) ಅಥವಾ ಹೆಕ್ಟೇರಿಗೆ 2000 ಕೋಶಗಳನ್ನು ಬಿಡುಗಡೆ ಮಾಡಬೇಕು. ಪರಾವಲಂಬಿಗಳನ್ನು ಬಿಡುಗಡೆ ಮಾಡಿದ ಪ್ರದೇಶಗಳಲ್ಲಿ / ಹೊಲಗಳಲ್ಲಿ ಯಾವುದೇ ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸ ಬಾರದು. ಪರಾವಲಂಬಿ ಚಟುವಟಿಕೆಯನ್ನು ಗಮನಿಸದಿದ್ದರೆ, ಕ್ಷೇತ್ರದಲ್ಲಿ ಏರೋಪ್ಲೇನ್ ಕೀಟದ ಬಾಧೆ ಹೆಚ್ಚುತ್ತಿದೆ ಎಂದು ತಿಳಿಯಬೇಕು ನಂತರ ಕ್ಲೋರೋಪೈರಿಫೋಸ್ 20 ಇಸಿ @ 20 ಮಿಲಿ ಅಥವಾ ಮೊನೊಕ್ರೊಟೊಫಾಸ್ 36 ಇಸಿ @ 10 ಮಿಲಿ 10 ಲೀಟರ್ ನೀರಿಗೆ ಸಿಂಪಡನೆ ಮಾಡಿ ಹತೋಟಿಯನ್ನು ಮಾಡಬೇಕು.
ಮೂಲ: ಡಾ. ಟಿ. ಎಂ. ಭೋರ್ಪೋಡಾ, ಎಕ್ಸ್. ಕೀಟಶಾಸ್ತ್ರದ ಪ್ರೊಫೆಸರ್, ಬಿ. ಎ. ಕೃಷಿ ಕಾಲೇಜು, ಆನಂದ್ ಕೃಷಿ ವಿಶ್ವವಿದ್ಯಾಲಯ, ಆನಂದ್- 388 110 (ಗುಜರಾತ, ಭಾರತ) ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
135
1