AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕಡಲೆಯಲ್ಲಿ ಕಾಯಿ ಕೊರಕದ ನಿರ್ವಹಣೆ
ಸಾವಯವ ಕೃಷಿಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಕಡಲೆಯಲ್ಲಿ ಕಾಯಿ ಕೊರಕದ ನಿರ್ವಹಣೆ
ಸಾಮಾನ್ಯವಾಗಿ, ಕಡಲೆಯಲ್ಲಿ ಹೂ ಬರುವ ಹಂತದಲ್ಲಿ ಕೋಮಲವಾಗಿರುವ ಎಲೆಗಳ ಮೇಲೆ ಕಾಯಿ ಕೊರಕದ ಮರಿಹುಳುಗಳು ಕಂಡುಬರುತ್ತದೆ. ರೆಂಬೆಗಳ ಬೆಳವಣಿಗೆ, ಮೊಗ್ಗುಗಳ ತ್ವರಿತ ಬೆಳವಣಿಗೆ ಮತ್ತು ಹೆಚ್ಚಿನ ಸಂಖ್ಯೆಯ ಹಸಿರು ಎಲೆಗಳು ಕಾಯಿ ಕೊರಕದ ಅನುಕೂಲಕರ ಬಾಧೆಯ ಕೆಲವು ಲಕ್ಷಣಗಳಾಗಿವೆ. ಕಾಯಿ ಕೊರಕದ ಬಾಧೆಯ ನಿಯಂತ್ರಣಕ್ಕೆ ಸಾವಯವ ಪರಿಹಾರಗಳು ಈ ಕೆಳಗಿನಂತಿವೆ: ಹತೋಟಿಯ ಕ್ರಮಗಳು: - ಈ ಕೀಟವನ್ನು ನಿಯಂತ್ರಿಸಲು ಬೆಳೆಯನ್ನು ಬದಲಾಯಿಸಬೇಕಾಗಿದೆ. ಹೊಲದಲ್ಲಿ, ಪ್ರತಿ ಎಕರೆಗೆ ೫ ಮೋಹಕ ಬಲೆಗಳನ್ನು ಹೆಲಿಲ್ಯೂರನ್ನು ಅದಕ್ಕೆ ಅಂಟಿಸಿ ಬಳಸಬೇಕು, ಲ್ಯೂರ ಬಳಸ ಬೇಕಾದರೆ ಕೈಗಳಿಗೆ ಬೆಳ್ಳುಳ್ಳಿ,ಈರುಳ್ಳಿ ಮತ್ತು ಯಾವುದೇ ಅತಿಯಾದ ಉಗ್ರ ವಾಸನೆ ಇರಬಾರದು. ಪ್ರೌಢ ಚಿಟ್ಟೆ ಬಲೆಗೆ ಸಿಕ್ಕಿ ಬಿದ್ದ ತಕ್ಷಣ, ಬೇವಿನ ಕಷಾಯ @ 5%ನ್ನು ಸಿಂಪಡಿಸಿ. ಬೇವಿನ ಕಷಾಯದಲ್ಲಿ ಸ್ಟಿಕ್ಕರ್ ಬಳಸಿ ಇದರಿಂದ ಕಷಾಯವು ಎಲ್ಲಾ ಎಲೆಗಳ ಮೇಲೆ ಹರಡಲು ಸಹಾಯಕವಾಗುತ್ತದೆ. ಒಂದು ಎಕರೆಗೆ ಹೊಲದಲ್ಲಿ ಬೆಳಕಿನ ಬಲೆಗಳನ್ನು ಅನ್ವಯಿಸುವ ಮೂಲಕ, ಪ್ರೌಢ ಪತಂಗಗಳನ್ನು ಆಕರ್ಷಿಸುವ ಮೂಲಕ ಉತ್ತಮವಾಗಿ ಹತೋಟಿಯನ್ನು ಮಾಡಬಹುದು. ಕಡಲೆ ಬೆಳೆಯಲ್ಲಿ, "ಟಿ" ಆಕಾರದ ಕೋಲಿನಿಂದ ಮಾಡಿದ ಕೃತಕ ಪಕ್ಷಿತಾಣಗಳನ್ನು ೨೫-೫೦ ಪ್ರತಿ ಎಕರೆ ದರದಲ್ಲಿ ಸ್ಥಾಪಿಸಬೇಕು. ಇದು ಪಕ್ಷಿಗಳ ಹೊಲದಲ್ಲಿ ಕುಳಿತು ಕೀಟಗಳ ನೈಸರ್ಗಿಕ ಮಾರ್ಗವನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಕಾಯಿ ಕೊರಕದ ನಿಯಂತ್ರಣಕ್ಕಾಗಿ, ಹೆಲಿಕೋವರ್ಪಾ ನಂಜಾಣುವಿನಿಂದ ತಯಾರಿಸಿದ ಹೆಚಎಲ್ಎನ್ ಪಿವಿ@೨೫೦ ಮಿಲೀ ಕೀಟನಾಶಕವನ್ನು ೧೦೦ ಮಿಲೀಯನ್ನು ೨೦೦ ಮಿಲಿ ನೀರಿಗೆ ಬೇರೆಸಿ ಸಿಂಪಡಿಸಬೇಕು. ಮೂಲ- ಅಗೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ ಈ ಮಾಹಿತಿಯು ನಿಮಗೆ ಸಹಾಯಕವಾಗಿದ್ದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಯ ಮೂಲಕ ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
145
0