AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಕಡಲೆಯಲ್ಲಿ ಕಾಯಿ ಕೊರಕದ ಜೀವನ ಚಕ್ರದ ಬಗ್ಗೆ ಮಾಹಿತಿ
ಕೀಟಗಳ ಜೀವನ ಚಕ್ರಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಕಡಲೆಯಲ್ಲಿ ಕಾಯಿ ಕೊರಕದ ಜೀವನ ಚಕ್ರದ ಬಗ್ಗೆ ಮಾಹಿತಿ
ಸಾಮಾನ್ಯವಾಗಿ ಕಡಲೆಯು ಭಾರತದ ಪ್ರಮುಖ ಬೆಳೆಯಾಗಿದೆ. ಇದನ್ನು ದೈನಂದಿನ ಬಳಕೆಗಾಗಿ ಮತ್ತು ಪಶು ಆಹಾರಕ್ಕಾಗಿ ಬಳಸಲಾಗುತ್ತದೆ, ಬೀಜಗಳು, ಕಡಲೆ ಎಲೆಗಳನ್ನು ತರಕಾರಿಯಾಗಿ ಬಳಸಲಾಗುತ್ತದೆ, ಆದರೆ ಕಡಲೆ ಒಣಕಡ್ಡಿಯನ್ನು ದನಕರುಗಳಿಗೆ ಉತ್ತಮ ಮೇವಾಗಿದೆ. ಕಡಲೆಯ ಕಾಯಿ ಕೊರಕವು ವಿವಿಧ ಬೆಳೆಗಳನ್ನು ಬಾಧಿಸುತ್ತದೆ ತೊಗರಿ,ಅವರೆ, ಸೂರ್ಯಕಾಂತಿ,ಕುಸುಬಿ,ಮೆಣಸಿನಕಾಯಿ,ನೆಲಗಡಲೆ,ತಂಬಾಕು,ಹತ್ತಿ ಇತ್ಯಾದಿ. ಹಾನಿಯ ಲಕ್ಷಣಗಳು : - ಈ ಕೀಟವು ವರ್ಷದುದ್ದಕ್ಕೂ ಸಕ್ರಿಯವಾಗಿರುತ್ತದೆ. ಇದು ನವೆಂಬರ್‌ನಿಂದ ಮಾರ್ಚಿನ ವರೆಗೆ ಕಡಲೆಯ ಬೆಳೆಗೆ ಹಾನಿ ಮಾಡುತ್ತದೆ. ಈ ಕೀಟದ ಮರಿಹುಳು ಮಾತ್ರ ಹಾನಿಯನ್ನುಂಟು ಮಾಡುತ್ತದೆ. ಆರಂಭದಲ್ಲಿ, ಅದು ಎಲೆಗಳನ್ನು ತಿನ್ನುತ್ತದೆ, ನಂತರ,ಹೂ,ಕಾಯಿ ಬಂದಾಗ, ಅದು ಅರ್ಧದಷ್ಟು ಕಾಯಿ ಒಳಗೆ ಮತ್ತು ಅರ್ಧದಷ್ಟು ಕಾಯಿ ಹೊರಗೆ ಕಾಣಿಸಿಕೊಳ್ಳುತ್ತದೆ. ಇದು ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡುತ್ತದೆ. ಕಾಯಿ ಕೊರಕದಿಂದ ಉಂಟಾಗುವ ಇಳುವರಿಯ ನಷ್ಟವು ಸುಮಾರು 50 ರಿಂದ 60% ನಷ್ಟವಾಗಿರುತ್ತದೆ. ಕಡಲೆ ಮಾತ್ರವಲ್ಲದೆ, ಬಟಾಣಿ, ಇತರ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮೇಲೂ ಈ ಕೀಟ ಬಾಧೆಯನ್ನುಂಟು ಮಾಡುತ್ತದೆ. ಮೊಟ್ಟೆ: - ಕಾಯಿ ಕೊರಕದ ಹೆಣ್ಣು ಪತಂಗವು 2 ರಿಂದ 4 ದಿನಗಳ ಸಂಭೋಗದ ನಂತರ, ಸಸ್ಯದ ಕೋಮಲ ಭಾಗಗಳು ಎಲೆಗಳು ಮತ್ತು ಹೂವುಗಳ ಮೇಲೆ ಒಂದೊಂದಾಗಿ ಪ್ರಕಾಶಮಾನವಾದ, ಬಿಳಿ ಬಣ್ಣದ 500 ರಿಂದ 1000 ಮೊಟ್ಟೆಗಳನ್ನಿ ಡುತ್ತವೆ. ಈ ಮೊಟ್ಟೆಗಳಿಂದ ಮರಿಹುಳುಗಳು ೨ ರಿಂದ ೩ ದಿನಗಳಲ್ಲಿ ಹೊರಬರುತ್ತವೆ. ಮರಿಹುಳು : - ಮೊಟ್ಟೆಯಿಂದ ಹೊರಬಂದ ನಂತರ, ಮರಿಹುಳುವು ತಿಳಿ ಹಸಿರು ಬಣ್ಣದಲ್ಲಿ 2-2.5 ಮಿ.ಮೀ. ಆರಂಭದಲ್ಲಿ, ಇದು ತನ್ನ ಜೀವನಚಕ್ರವನ್ನು ಕೋಮಲ ಗಿಡದ ಭಾಗದ ಮೇಲೆ ಕಳೆಯುತ್ತದೆ ಮತ್ತು ಮರಿಹುಳು ಕಾಯಿಯನ್ನು ಪ್ರವೇಶಿಸಿ ಬೀಜಗಳನ್ನು ಬಾಧಿಸುತ್ತವೆ ನಂತರ, ತನ್ನ ಜೀವಿತಾವಧಿಯಲ್ಲಿ 4 ಬಾರಿ ಪೊರೆಯನ್ನು ಬಿಡುಗಡೆ ಮಾಡುತ್ತದೆ. ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು 20 ರಿಂದ 25 ದಿನಗಳು ಬೇಕಾಗುತ್ತದೆ. ಪೂರ್ಣವಾಗಿ ಬೆಳೆದ ಮರಿಹುಳುವಿನ ಉದ್ದವು 35 ಮಿ.ಮೀ. ಇದರ ಬಣ್ಣ ತಿಳಿ ಹಸಿರು, ಪ್ರಕಾಶಮಾನವಾದ ಮತ್ತು ಬಿಳಿ ಬಣ್ಣದ ಪಟ್ಟೆಗಳು ಕಾಣಿಸಿಕೊಳ್ಳುತ್ತವೆ. ಕೋಶಾವಸ್ಥೆ: - ಮರಿಹುಳುವು ಕಾಯಿಗಳಿಂದ ಮಣ್ಣಿಗೆ ಹೋದ ಮೇಲೆ ಭೂಮಿಯಲ್ಲಿ 8 ರಿಂದ 12 ಸೆಂ.ಮೀ ತಗ್ಗನ್ನು ಮಾಡಿ ಅದರಲ್ಲಿ ಕೋಶಾವಸ್ಥೆಗೆ ಹೋಗುತ್ತದೆ ಮತ್ತು ಅದನ್ನು ಕೋಶವಾಗಿ ಬದಲಾಯಿಸಿಕೊಳ್ಳುತ್ತದೆ. ಇದು 16 ಮಿಮೀ ಬಣ್ಣದಲ್ಲಿದೆ, ಅದರ ಬಣ್ಣ ಕೆಂಪು ಕಂದು ಬಣ್ಣದಾಗಿರುತ್ತದೆ ಮತ್ತು ಹಿಂಭಾಗದಲ್ಲಿ ಚೂಪಾಗಿರುತ್ತದೆ. ಪ್ರೌಢ:- ಪತಂಗಗಳ ಬಣ್ಣ ತಿಳಿ ಕಂದು, ಬೂದು ಕಂದು ಬಣ್ಣದ ಕೂದಲು ದೇಹದ ಮೇಲೆ ಕಾಣಿಸಿಕೊಳ್ಳುತ್ತವೆ. ಇದರ ಉದ್ದ 20 ರಿಂದ 25 ಮಿ.ಮೀ ಆಗಿರುತ್ತದೆ.
ನಿರ್ವಹಣೆ: - • ಕಾಯಿ ಕೊರಕವನ್ನು ನಿಯಂತ್ರಿಸಲು, ವಿವಿಧ ರೀತಿಯ ಮಿತ್ರ ಕೀಟಗಳು ಮತ್ತು ಪರಾವಲಂಬಿಗಳನ್ನು ಬಿಡುಗಡೆ ಮಾಡಿ- ಚೆಲೋನಸ್ ಬ್ಲ್ಯಾಕ್ಬುರ್ನಿ ಇತ್ಯಾದಿ. • ಪ್ರೊಫೆನೊಫೋಸ್ 50 ಇಸಿ @ 2 ಮಿಲಿ, ಇಂಡೊಕ್ಸಾಕಾರ್ಬ್ 14.5% ಎಸ್‌ಸಿ @ 0.5 ಮಿಲಿ ಅಥವಾ ಸ್ಪಿನೋಸಾಡ್ 45% ಎಸ್‌ಸಿ @ 0.1 ಮಿಲಿ ಅಥವಾ 2.5 ಮಿಲಿ, ಕ್ಲೋರೊಕ್ಲೋರಿಫೈಫಾಸ್ 20 ಇಸಿ ಯನ್ನು ಪ್ರತಿ ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಬೇಕು. ಮೂಲ: ಆಗ್ರೊಸ್ಟಾರ್ ಆಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
123
0