AgroStar
ಒಣ ಅಂಜೂರ ಹಣ್ಣಿನ ಪ್ರಕ್ರಿಯೆ
ಹಣ್ಣು ಸಂಸ್ಕರಣೆಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಒಣ ಅಂಜೂರ ಹಣ್ಣಿನ ಪ್ರಕ್ರಿಯೆ
ಪೌಷ್ಠಿಕಾಂಶದ ಮೌಲ್ಯಕ್ಕೆ ಅನುಗುಣವಾಗಿ ಅಂಜೂರದ ಹಣ್ಣುಗಳು ಬಹಳ ಉಪಯುಕ್ತವಾದ ಹಣ್ಣುಗಳಾಗಿವೆ. ಫೆಬ್ರವರಿ-ಮಾರ್ಚ್ ತಿಂಗಳುಗಳಲ್ಲಿ, ಅಂಜೂರದ ಹಣ್ಣಿನ ಲಾಭಾಯತೆಯು ತುಂಬಾ ಹೆಚ್ಚಾಗಿರುತ್ತದೆ. ಆದ್ದರಿಂದ ಕಡಿಮೆ ಬೆಲೆ ಇರುವುದರಿಂದ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಆ ವೇಳೆಯಲ್ಲಿ , ಒಣಗಿದ ಅಂಜೂರದ ಹಣ್ಣುಗಳನ್ನು ತಯಾರಿಸುವುದರಿಂದ ರೈತರಿಗೆ ಲಾಭವಾಗುತ್ತದೆ. ಅಂಜೂರ ಹಣ್ಣುಗಳನ್ನು ಒಣಗಿಸುವ ಪ್ರಕ್ರಿಯೆಯು ಬಹಳ ಸುಲಭ ಮತ್ತು ಕಡಿಮೆ ವೆಚ್ಚವಾಗಿದೆ. ಒಣ ಅಂಜೂರದ ಹಣ್ಣುಗಳನ್ನು ತಯಾರಿಸುವ ವಿಧಾನ ಈ ಕೆಳಗಿನಂತಿದೆ.
. ಒಣಗಿದ ಅಂಜೂರ ಹಣ್ಣುಗಳನ್ನು ತಯಾರಿಸಲು ಮೊದಲು ಉತ್ತಮ ಮಾಗಿದ ಅಂಜೂರದ ಹಣ್ಣುಗಳನ್ನು ಆರಿಸಿ. . ಒಣಗಿದ ಅಂಜೂರ ಹಣ್ಣಿಗಳನ್ನು ತಯಾರಿಸಲು ಹಣ್ಣಿನ ಟಿ.ಎಸ್.ಎಸ್. ಶೇಕಡಾ 2 ಕ್ಕಿಂತ ಹೆಚ್ಚು ಇರಬೇಕು. . ಹಣ್ಣಿನ್ನು ತಯಾರಿಸಲು, ಮರದ ಪೆಟ್ಟಿಗೆಯನ್ನು ರಚಿಸಿ ಮತ್ತು ಹಣ್ಣುಗಳನ್ನು ತೆಗೆಯಲು ಮತ್ತು ಇಡಲು ಬರುವ ಹಾಗೆ ಡಬ್ಬಗಳನ್ನು ತಯಾರಿಸಿ ಕೊಂಡು ಧೂಪಿಕರಣ ಮಾಡಲು ಬರುವ ಹಾಗೆ ಹರಡಿ. . ಕೆಳಗೆ ಒಲೆಯನ್ನು ಇಡಲು ಬರುವ ಹಾಗೆ ಹೊಂದಿಸಬೇಕು. ಬೆಂಕಿಯ ಕೆಂಡಗಳನ್ನು ಇರಿಸಿ ಮತ್ತು ಅದರ ಮೇಲೆ ಸಲ್ಫರ್ ಪುಡಿಯನ್ನು ಹಾಕಿ (೧ ಕೆಜಿ ಹಣ್ಣಿಗೆ ೪ ಗ್ರಾಂ ) ಮತ್ತು ಪೆಟ್ಟಿಗೆಯನ್ನು ಮುಚ್ಚಿ. ಹಣ್ಣಿನ ಬಣ್ಣವು ಗಂಧಕದ ವಾಸನೆಯಿಂದ ಬಿಳಿಯಾಗಲು ಪ್ರಾರಂಭಿಸುತ್ತದೆ. ಹೆಚ್ಚು ಹೊಗೆ ನೀಡಿದರೆ ಹಣ್ಣನ್ನು ಒಣಗಿಸಬಹುದು, ಮತ್ತು ಹೊಗೆಯನ್ನು ನೀಡದಿದ್ದರೆ ಹಣ್ಣುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಗಂಧಕದ ವಾಸನೆಯು ಹಣ್ಣಿನಲ್ಲಿರುವ ಶಿಲೀಂಧ್ರದ ಬೆಳವಣಿಗೆಯನ್ನು ತಡೆಯುತ್ತದೆ. . ಹಣ್ಣುಗಳನ್ನು ಒಣಗಿಸಿದ ನಂತರ, ಸ್ವಚ್ಛವಾದ ಸ್ಥಳದಲ್ಲಿ ಒಣಗಲು ಬಿಡಿ. . ಅಂಜೂರ ಹಣ್ಣುಗಳನ್ನು ಸಾಮಾನ್ಯವಾಗಿ ಸುಮಾರು ೪-೫ ದಿನಗಳಲ್ಲಿ ಒಣಗುತ್ತವೆ. . ಒಣಗಿದ ಅಂಜೂರ ಹಣ್ಣುಗಳನ್ನು ಗಾಳಿಯಾಡದ ಚೀಲದಲ್ಲಿ ಮುಚ್ಚಿ ತಂಪಾದ ಸ್ಥಳದಲ್ಲಿ ಇರಿಸಿ. ಮೂಲ- ಅಗೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸಲೆನ್ಸ್ ಈ ಮಾಹಿತಿಯು ನಿಮಗೆ ಸಹಾಯಕವಾಗಿದ್ದರೆ, ಫೋಟೋ ಕೆಳಗಿನ ಹಳದಿ ಹೆಬ್ಬರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಕೆಳಗಿನ ಆಯ್ಕೆಯ ಮೂಲಕ ಹಂಚಿಕೊಳ್ಳಿ.
122
1
ಇತರ ಲೇಖನಗಳು