ಕೀಟಗಳ ಜೀವನ ಚಕ್ರಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಎಲೆ ಸುರಂಗ ಕೀಟದ ಜೀವನ ಚಕ್ರ
ಆರ್ಥಿಕ ಪ್ರಾಮುಖ್ಯತೆ: - ಎಲೆ ಸುರಂಗ ಕೀಟವು ಎಲೆಗಳ ಮೇಲೆ ಸುರಂಗವನ್ನು ಮಾಡುವ ಮೂಲಕ, ಹಸಿರು ಪತ್ರ ಹರಿತ್ತನ್ನು ತಿನ್ನುವ ಮೂಲಕ ಹಾನಿಗೊಳಿಸುತ್ತದೆ ಮತ್ತು ಅದರ ಬಾಧೆಯು ಎಲೆಗಳನ್ನು ಒಣಗಿಸಲು ಕಾರಣವಾಗುತ್ತದೆ. ಇದು ಎಲೆಗಳ ಮೇಲೆ ಬಿಳಿ ಗೆರೆಗಳಂತೆ ಕಾಣುತ್ತದೆ. ಇದು ಮುಖ್ಯವಾಗಿ ಟೊಮೆಟೊ, ಮೆಣಸಿನಕಾಯಿ, ಸೋಯಾಬೀನ್, ಸೌತೆಕಾಯಿ ಮುಂತಾದ ಬೆಳೆಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಜೀವನ ಚಕ್ರ ಮೊಟ್ಟೆ: - ಹೆಣ್ಣು ನೊಣ 13 ದಿನಗಳಲ್ಲಿ ಎಲೆ ಕೋಶದೊಳಗೆ ೧೬೦ ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಈ ಕೀಟದ ಮರಿಹುಳುಗಳು ಮೊಟ್ಟೆಗಳು 2 ರಿಂದ 3 ದಿನಗಳಲ್ಲಿ ಹೊರಬರುತ್ತವೆ. ಮರಿಹುಳು: - ಎಲೆ ಸುರಂಗ ಕೀಟದ ಹುಳು ಎಲೆಗಳ ಮೇಲೆ ಸುರಂಗವನ್ನು ಮಾಡುತ್ತದೆ ಮತ್ತು ಹಸಿರು ಪತ್ರ ಹರಿತ್ತನ್ನು ತಿನ್ನುತ್ತದೆ. ಇದು ಎಲೆಗಳ ಮೇಲೆ ಅಂಕುಡೊಂಕಾದ ರಚನೆಗಳನ್ನು ಮಾಡುತ್ತದೆ. ಕೋಶಾವಸ್ಥೆ : - ಎಲೆ ಸುರಂಗ ಕೀಟದ ಕೋಶಾವಸ್ಥೆ 2 ರಿಂದ 20 ದಿನಗಳಲ್ಲಿ ಮಣ್ಣಿಗೆ ಸೇರುತ್ತದೆ. ಪ್ರೌಢ : - ಪತಂಗವು 6 ರಿಂದ 22 ದಿನಗಳ ನಂತರ ಎಲೆಗಳ ಸುರಂಗಗಳಿಂದ ಕೀಟದ ಹೊರಬರುತ್ತದೆ, ಮತ್ತು ಅದರ ವರ್ಷದುದ್ದಕ್ಕೂ ಅನೇಕ ತಲೆಮಾರುಗಳು ಕಂಡುಬರುತ್ತವೆ. ಮತ್ತು ಅದರ ಉದರದ ಹಿಂಭಾಗದಲ್ಲಿ ಕಪ್ಪು ಪಟ್ಟೆಗಳೊಂದಿಗೆ ಇದು ಹಳದಿ ಬಣ್ಣದ್ದಾಗಿರುತ್ತದೆ. ಹತೋಟಿ: - ಡೈಮೆಥೊಯೇಟ್ 30 ಇಸಿ @ ೨೬೪ ಮಿಲಿಯನ್ನು ೩೦೦ ಲೀಟರ್ ನೀರಿನಲ್ಲಿ ಅಥವಾ ಆಕ್ಸಿಡಮೆಟನ್‌ಮೀಥೈಲ್ 25% ಇಸಿ @ ೧೨೦೦ ಮಿಲಿ ೩೦೦ ಲೀಟರ್ ನೀರಿನಲ್ಲಿ ಅಥವಾ ಬೇವಿನ ಆಧಾರಿತ ಕೀಟನಾಶಕ 1 ಇಸಿ @ ೨ ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಬೇರೆಸಿ ಸಿಂಪಡಿಸಿ. ಗಮನಿಸಿ: - ವಿವಿಧ ಬೆಳೆಗಳಿಗೆ ಅನುಗುಣವಾಗಿ ಕೀಟನಾಶಕಗಳ ಪ್ರಮಾಣವು ಬದಲಾಗುತ್ತದೆ. ಮೂಲ: ಆಗ್ರೊಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ವಿಡಿಯೋವನ್ನು ಕೆಳಗಿನ ಹಳದಿ ಹೆಬ್ಬೆರಳಿನ ಗುರುತು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
62
0
ಕುರಿತು ಪೋಸ್ಟ್