AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಎಲೆಕೋಸು ಮತ್ತು ಹೂಕೋಸುಗಳಲ್ಲಿ ಸಸ್ಯ ಹೇನಿನ ಹತೋಟಿ
ಗುರು ಜ್ಞಾನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಎಲೆಕೋಸು ಮತ್ತು ಹೂಕೋಸುಗಳಲ್ಲಿ ಸಸ್ಯ ಹೇನಿನ ಹತೋಟಿ
ಸಾಮಾನ್ಯವಾಗಿ, ರೈತರು ವರ್ಷಪೂರ್ತಿ ಎಲೆಕೋಸು ಮತ್ತು ಹೂಕೋಸು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸಸ್ಯ ಹೇನು ಮತ್ತು ವಜ್ರ ಬೆನ್ನಿನ ಪತಂಗ ಈ ಬೆಳೆಗಳಿಗೆ ಹಾನಿಯನ್ನುಂಟು ಮಾಡುವ ಕೀಟಪೀಡೆಗಳಾಗಿವೆ. ಸ್ಥಳಾಂತರ ನಾಟಿ ಮಾಡುವ ಅವಧಿಯಲ್ಲಿಯೇ ಸರಿಯಾದ ಹತೋಟಿ ಕ್ರಮಗಳನ್ನು ಅನುಸರಿಸುವ ಮೂಲಕ ಕೀಟಪೀಡೆಗಳನ್ನು ನಿರ್ವಹಣೆ ಮಾಡಬಹುದು. • ಸಸ್ಯ ಹೇನುಗಳು ಎಲೆಗಳು ಮತ್ತು ಹೂವಿನಿಂದ ರಸವನ್ನು ಹೀರುತ್ತವೆ. ಹೆಚ್ಚಿನ ಬಾಧೆಯಿಂದಾಗಿ, ಕಪ್ಪಾದ ಶಿಲಿಂದ್ರಗಳ ಬೆಳವಣಿಗೆಯಿಂದಾಗಿ ಸಸ್ಯಗಳ ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ಅಡ್ಡಿಪಡಿಸುತ್ತದೆ. ಎಲೆಗಳು ಸುಕ್ಕುಗಟ್ಟುತ್ತವೆ ಮತ್ತು ವಿರೂಪಗೊಳ್ಳುತ್ತವೆ. ಅಂತಿಮವಾಗಿ, ಗುಣಮಟ್ಟ, ಉತ್ಪಾದನೆ ಮತ್ತು ಮಾರುಕಟ್ಟೆ ಬೆಲೆಗಳ ಪರಿಣಾಮ ಬೀರುತ್ತದೆ. • ಅಕ್ಟೋಬರ ಮೊದಲ ವಾರದಿಂದ ಅಕ್ಟೋಬರ್ ಕೊನೆಯ ವರೆಗೆ ಬಿತ್ತನೆ ಮಾಡಿದ ಬೆಳೆಯಲ್ಲಿ ಸಸ್ಯ ಹೇನಿನ ಸಂಖ್ಯೆ ಕಡಿಮೆಯಾಗುತ್ತದೆ.
• ಕೊನೆಯಲ್ಲಿ ಬಿತ್ತನೆ ಮಾಡಿದ ಬೆಳೆಯಲ್ಲಿ ಹೆಚ್ಚಿನ ಸಂಖ್ಯೆಯ ಬಾಧೆ ಕಂಡುಬರುತ್ತದೆ. • ತಾಪಮಾನ ಮತ್ತು ತೇವಾಂಶ ಹೆಚ್ಚಾದಂತೆ ಸಸ್ಯ ಹೇನಿನ ಸಂಖ್ಯೆಯು ಹೆಚ್ಚಾಗುತ್ತದೆ, • ಸಸ್ಯ ಹೇನಿನ ಸಮೀಕ್ಷೆ ಮತ್ತು ನಿರ್ವಹಣೆಗಾಗಿ ಪ್ರತಿ ಎಕರೆಗೆ 10 ಹಳದಿ ಜಿಗುಟಾದ ಬಲೆಗಳನ್ನು ಸ್ಥಾಪಿಸಿ. • ಸಸ್ಯ ಹೇನನ್ನು ತಿನ್ನುವ ಗುಲಗಂಜಿ ದುಂಬಿಗಳ ಸಂಖ್ಯೆಯು ಹೆಚ್ಚಿದಾಗ ಕೀಟಗಳ ಮೇಲೆ ಕೀಟನಾಶಕಗಳ ಬಳಕೆಯನ್ನು ತಪ್ಪಿಸಿ. • ರಾಸಾಯನಿಕ ಕೀಟನಾಶಕಗಳ ಬದಲಿಗೆ, ಬೇವಿನ ಬೀಜದ ಪುಡಿ @ 500 ಗ್ರಾಂ (5% ) ಅಥವಾ ಬೇವಿನ ಆಧಾರಿತ ಸೂತ್ರೀಕರಣವನ್ನು 10 ಲೀಟರ್ ನೀರಿಗೆ 20 ಮಿಲಿ ಸಿಂಪಡಿಸಿ. • ಸಸ್ಯ ಹೇನಿನ ನಿರ್ವಹಣೆಗೆ ಜೈವಿಕ ಕೀಟನಾಶಕಗಳ ಪ್ರಯೋಜನಗಳನ್ನು ತೆಗೆದುಕೊಳ್ಳಲು, ಶಿಲೀಂಧ್ರ ಆಧಾರಿತ ಕೀಟನಾಶಕ , ವರ್ಟಿಸಿಲಿಯಮ್ ಲೆಕಾನಿ ಅಥವಾ ಬೌವೇರಿಯಾ ಬಸಿಯಾನಾ 10 ಲೀಟರ್ ನೀರಿಗೆ 40 ಗ್ರಾಂ ಬೇರೆಸಿ ಸಿಂಪಡಿಸಿ. • ಸಸ್ಯ ಹೇನಿನ ಬಾಧೆ ಉಂಟಾದರೆ, ಅಸೆಟಾಮಿಪ್ರಿಡ್ 20 ಎಸ್‌ಪಿ @ 3 ಗ್ರಾಂ ಅಥವಾ ಸಿಂಟ್ರಾನಿಲಿಪ್ರೊಲ್ 10 ಒಡಿ @ 3 ಎಂಎಲ್ ಅಥವಾ ಡಿಫೆನಾಂಥುರಾನ್ 50 ಡಬ್ಲ್ಯೂಪಿ @ 10 ಗ್ರಾಂ 10 ಲೀಟರ್ ನೀರಿಗೆ ಬೇರೆಸಿ ಸಿಂಪಡಿಸಿ. ಮೂಲ- ಅಗೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸಲೆನ್ಸ್ ಈ ಮಾಹಿತಿಯು ನಿಮಗೆ ಸಹಾಯಕವಾಗಿದ್ದರೆ, ಫೋಟೋ ಕೆಳಗಿನ ಹಳದಿ ಹೆಬ್ಬರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಕೆಳಗಿನ ಆಯ್ಕೆಯ ಮೂಲಕ ಹಂಚಿಕೊಳ್ಳಿ.
102
0