AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಉತ್ತಮ ಇಳುವರಿಯನ್ನು ಪಡೆಯಲು ಜೀವಾಮೃತ ತಯಾರಿಕೆ
ಸಾವಯವ ಕೃಷಿಅಗ್ರೋವನ್
ಉತ್ತಮ ಇಳುವರಿಯನ್ನು ಪಡೆಯಲು ಜೀವಾಮೃತ ತಯಾರಿಕೆ
ಜೀವಾಮೃತ ಒಂದು ಸೂಕ್ಷ್ಮಜೀವಿಯ ಸಂಸ್ಕರಣೆಯಾಗಿದೆ. ಇದು ಪೋಷಕಾಂಶಗಳನ್ನು ಒದಗಿಸುತ್ತದೆ, ಮುಖ್ಯವಾಗಿ ಜೀವಾಮೃತವು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಸಸ್ಯ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಜೀವಾಮೃತವನ್ನು ಹೇಗೆ ತಯಾರಿಸುವುದು: 1. ಒಂದು ಬ್ಯಾರೆಲನಲ್ಲಿ 200 ಲೀಟರ್ ನೀರು ಹಾಕಿ; 10 ಕೆಜಿ ತಾಜಾ ಸ್ಥಳೀಯ ಹಸುವಿನ ಸಗಣಿ ಬೇರೆಸಿ ಮತ್ತು 5 ರಿಂದ 10 ಲೀಟರಗಳಷ್ಟು ಹಸುವಿನ ಮೂತ್ರವನ್ನು ಬೇರೆಸಿ; 2 ಕೆ.ಜಿ ಬೆಲ್ಲವನ್ನು (ಒಂದು ಸ್ಥಳೀಯ ವಿಧದ ಕಂದು ಸಕ್ಕರೆ), 2 ಕೆ.ಜಿ ನಷ್ಟು ಧಾನ್ಯ ಹಿಟ್ಟು ಮತ್ತು ಜಮೀನಿನ ಬದುಗಳಿಂದ ಒಂದು ಬೊಗಸೆ ಮಣ್ಣನ್ನು ಬೇರೆಸಿ. 2. ದ್ರಾವಣವನ್ನು ಚೆನ್ನಾಗಿ ಬೇರೆಸಿ ಮತ್ತು ನೆರಳಿನಲ್ಲಿ 48 ಗಂಟೆಗಳ ಕಾಲ ಕೊಳೆಯಲು ಬಿಡಿ. ಈಗ ಜೀವಾಮೃತ ಉಪಯೋಗಿಸಲು ಸಿದ್ಧವಾಗಿದೆ. ಒಂದು ಎಕರೆ ಭೂಮಿಗೆ 200 ಲೀಟರಗಳಷ್ಟು ಜೀವಾಮೃತ ಬೇಕಾಗುತ್ತದೆ.
ಪ್ರಯೋಜನಗಳು:_x000D_ 1. ಇದು ಸಸ್ಯ ಬೆಳವಣಿಗೆ ಮತ್ತು ಸಸ್ಯವನ್ನು ಉತ್ತೇಜಿಸುತ್ತದೆ, ಉತ್ತಮ ಉತ್ತಮ ಇಳುವರಿ ನೀಡುತ್ತದೆ._x000D_ _x000D_ 2. ಇದು ಕೀಟ ಮತ್ತು ರೋಗಗಳ ವಿರುದ್ಧ ಪ್ರತಿರೋಧವನ್ನು ನೀಡುತ್ತದೆ._x000D_ 3. ಇದು ಪ್ರಯೋಜನಕಾರಿ ಜೀವಿ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಮತ್ತು ಮಣ್ಣಿನಲ್ಲಿ ಸಾವಯವ ಕಾರ್ಬನ್ ಹೆಚ್ಚಿಸುತ್ತದೆ._x000D_ 4. ಜೀವಾಮೃತ ಬಳಕೆ: ಜೀವಾಮೃತವನ್ನು ನೀರು ಹಾಯಿಸುವಾಗ ತಿಂಗಳಿಗೆ ಎರಡು ಬಾರಿ ಅಥವಾ 10% ಎಲೆಗಳ ಸಿಂಪಡನೆಯಂತೆ ಬೆಳೆಗಳಿಗೆ ನೀಡಿ._x000D_ _x000D_ _x000D_ ಮೂಲ: http://www.fao.org _x000D_ ಈ ಮಾಹಿತಿಯನ್ನು ಉಪಯುಕ್ತವೆಂದು ನೀವು ತಿಳಿದುಕೊಂಡರೆ, ಈ ಚಿತ್ರದ ಅಡಿಯಲ್ಲಿ ಹಳದಿ ಹೆಬ್ಬೆರಳಿನ ಚಿನ್ಹೆ ಮೇಲೆ ಒತ್ತಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳನ್ನು ಬಳಸಿಕೊಂಡು ನಿಮ್ಮ ರೈತ ಸ್ನೇಹಿತರೊಂದಿಗೆ ಈ ಮಾಹಿತಿ ಯನ್ನು ಹಂಚಿಕೊಳ್ಳಿ.
707
2