AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಈ ರೀತಿಯಾಗಿ ಬೆಳೆಗಳ ಉತ್ತಮ-ಗುಣಮಟ್ಟದ ಉತ್ಪಾದನೆಯನ್ನು ಪಡೆಯಿರಿ!
ಸಾವಯವ ಕೃಷಿಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಈ ರೀತಿಯಾಗಿ ಬೆಳೆಗಳ ಉತ್ತಮ-ಗುಣಮಟ್ಟದ ಉತ್ಪಾದನೆಯನ್ನು ಪಡೆಯಿರಿ!
o ಕೀಟ ಮತ್ತು ರೋಗ ನಿಯಂತ್ರಣಕ್ಕಾಗಿ ರಾಸಾಯನಿಕ ಕೀಟನಾಶಕಗಳು ಮತ್ತು ಶಿಲೀಂಧ್ರನಾಶಕಗಳನ್ನು ಪ್ರಸ್ತುತ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಕೆಳಗಿನ ಪರಿಣಾಮಗಳಿಗೆ ಕಾರಣವಾಗುತ್ತದೆ. o ರಾಸಾಯನಿಕ ಘಟಕಗಳ ಅಂಶಗಳು ಆ ಉತ್ಪನ್ನಗಳಲ್ಲಿ ಕಂಡುಬರುತ್ತವೆ, ಇದು ಮಾನವರಲ್ಲಿ ಮತ್ತು ಪ್ರಾಣಿಗಳಲ್ಲಿ ವಿವಿಧ ರೋಗಗಳ ಹರಡುವಿಕೆಯನ್ನು ಹೆಚ್ಚಿಸುತ್ತದೆ. o ಕೀಟಗಳು ಮತ್ತು ರೋಗಗಳಿಗೆ ಬಳಸುವ ರಾಸಾಯನಿಕಗಳ ವಿರುದ್ಧ ಪ್ರತಿರೋಧಕಶಕ್ತಿಯನ್ನು ಹೊಂದಿದ ಬಳಿಕ ನಿಯಂತ್ರಿಸಲಾಗುವುದಿಲ್ಲ. o ರಾಸಾಯನಿಕಗಳ ಮೇಲೆ ಹೆಚ್ಚಿನ ಖರ್ಚು ವೆಚ್ಚಗಳ ಹೆಚ್ಚಳವು ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ರೈತರು ಇದರಿಂದಾಗಿ ಎಚ್ಚರಿಕೆಯಿಂದಿರಬೇಕು.
o ನೀರು, ಹವಾಮಾನ ಮತ್ತು ಮಣ್ಣಿನ ಗುಣಮಟ್ಟ ಇದರಿಂದಾಗಿ ಜೀವವೈವಿಧ್ಯತೆಯು ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ವರದಿಯಾಗಿದೆ._x000D_ _x000D_ o ಕೀಟ ನಿರ್ವಹಣೆ ಮತ್ತು ರೋಗ ನಿರ್ವಹಣೆ ಅತ್ಯಗತ್ಯ._x000D_ _x000D_ ಕೀಟ ಮತ್ತು ರೋಗ ನಿರ್ವಹಣೆ:_x000D_ _x000D_ ಬಿತ್ತನೆ ಮಾಡಿದ ನಂತರ ಅಥವಾ ಬೀಜಗಳು ಮೊಳಕೆಯೊಡೆದ ನಂತರ ಜಿಗುಟಾದ ಹಳದಿ ಮತ್ತು ನೀಲಿ ಬಲೆಗಳನ್ನು ಬಳಸಿ. ಬೆಳೆಗಳಲ್ಲಿ, ಹೂಬಿಡುವ ಹಂತದಲ್ಲಿ ಮೋಹಕ ಬಲೆಗಳನ್ನು ಅಳವಡಿಸಬೇಕು. ಇದು ಹಣ್ಣಿನ ರಸ ಹೀರುವ ಪತಂಗ ಮತ್ತು ಹಣ್ಣ ಕೊರೆಕದ ಕೀಟಗಳ ಬಾಧೆಯ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ. ಬೆಳೆಯ ಬೆಳವಣಿಗೆಯ ಹಂತ ಕೀಟ ಮತ್ತು ರೋಗವನ್ನು ಅವಲಂಬಿಸಿ, ಸರಿಯಾದ ರಾಸಾಯನಿಕಗಳ ಆಯ್ಕೆಯು ಸಿಂಪಡಣೆಯನ್ನು ಸುಲಭಗೊಳಿಸುತ್ತದೆ. ಸಾವಯವ ಕೀಟನಾಶಕಗಳನ್ನು ಸಿಂಪಡಣೆಯನ್ನು ಮೊದಲು ಮತ್ತು ರಾಸಾಯನಿಕ ಕೀಟನಾಶಕಗಳನ್ನು ನಂತರ ಬಳಸಬೇಕು. ಇದಲ್ಲದೆ, ಅದೇ ರಾಸಾಯನಿಕ ಕೀಟನಾಶಕಗಳನ್ನು ಬೆಳೆಯಲ್ಲಿ ಸಿಂಪಡಣೆ ಆಗಾಗ್ಗೆ ತಪ್ಪಿಸಬೇಕು. ಸರಿಯಾದ ಪ್ರಮಾಣ, ಸಿಂಪಡಿಸಲು ಸೂಕ್ತ ಸಮಯ ಮತ್ತು ಸರಿಯಾದ ವಿಧಾನವನ್ನು ನಿರ್ವಹಿಸುವುದು ಅವಶ್ಯಕ. ಯಾವುದೇ ಕೀಟ, ರೋಗಕ್ಕಾಗಿ ಮತ್ತು ಬೆಳೆ ಪ್ರಕಾರಕ್ಕೆ ಯಂತ್ರಕ್ಕೆ ಸರಿಯಾದ ಸಿಂಪಡಣೆಯ ಯಂತ್ರವನ್ನು ಆಯ್ಕೆಮಾಡುವುದು ಸಹ ಅಗತ್ಯವಾಗಿರುತ್ತದೆ. ಇದಲ್ಲದೆ, ರಾಸಾಯನಿಕ ಕೀಟನಾಶಕಗಳು / ಶಿಲಿಂದ್ರ ನಾಶಕಗಳನ್ನು ಬೇರೆಸುವ ಮೊದಲು, ಅದು ಸೂಕ್ತವಾಗಿದೆಯೇ ಎಂದು ಪರಿಶೀಲಿಸುವುದು ಮುಖ್ಯ; ತಯಾರಾದ ರಾಸಾಯನಿಕವು ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಹಾಗೆ ಬಿಡಬಾರದು ಎಂಬುದನ್ನು ಸಹ ಗಮನಿಸಬೇಕು._x000D_ _x000D_ ರಾಸಾಯನಿಕಗಳ ಸರಿಯಾದ ನಿರ್ವಹಣೆ:_x000D_ ಸಿಂಪಡಿಸುವ ರಾಸಾಯನಿಕ ಕೀಟನಾಶಕಗಳು ಪರಿಸರ ಸ್ನೇಹಿ ಕೀಟಗಳಾಗಿರಬೇಕು. ಸಿಂಪಡಿಸಿದ ನಂತರ ಖಾಲಿಯಾದ ರಾಸಾಯನಿಕ ಬಾಟಲಿಗಳು ಮತ್ತು ಖಾಲಿ ಪ್ಯಾಕೆಟ್‌ಗಳನ್ನು ಹಾಗೆ ಬಿಸಾಕ ಬಾರದು ಮತ್ತು ಮಕ್ಕಳು, ಜಾನುವಾರು, ಪಕ್ಷಿಗಳು, ನೀರು, ಮಣ್ಣು ಮತ್ತು ಗಾಳಿಯ ಸಂಪರ್ಕದಿಂದ ದೂರವಿರಬೇಕು. ಸಿಂಪಡಿಸುವ ಯಂತ್ರಗಳನ್ನು ಬಳಕೆಗೆ ಮೊದಲು ಮತ್ತು ನಂತರ ಸ್ವಚ್ಛಗೊಳಿಸಬೇಕು._x000D_ ಈ ಮೇಲಿನ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ಬೆಳೆ ನಿರ್ವಹಣೆಯನ್ನು ಮಾಡಿದರೆ ಖಚಿತವಾಗಿ ಹೆಚ್ಚುವರಿ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೀಟಗಳು ಮತ್ತು ರೋಗಗಳನ್ನು ನಿಯಂತ್ರಿಸುವ ಮೂಲಕ ಉತ್ಪಾದನೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ._x000D_ _x000D_ ಮೂಲ: ಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್ _x000D_ _x000D_ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ,ಈ ಫೋಟೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ._x000D_
128
0