AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಈರುಳ್ಳಿ ಮತ್ತು ಆಲೂಗಡ್ಡೆಯೊಂದಿಗೆ ಟೊಮೆಟೊ ಉತ್ಪಾದನೆಯಲ್ಲಿ ಹೆಚ್ಚಳ
ಕೃಷಿ ವಾರ್ತಾಔಟ್ ಲುಕ್ ಕೃಷಿ
ಈರುಳ್ಳಿ ಮತ್ತು ಆಲೂಗಡ್ಡೆಯೊಂದಿಗೆ ಟೊಮೆಟೊ ಉತ್ಪಾದನೆಯಲ್ಲಿ ಹೆಚ್ಚಳ
2019-20ರ ಕೊಯ್ಯಲಿನ ಕಾಲದಲ್ಲಿ ಈರುಳ್ಳಿ, ಆಲೂಗಡ್ಡೆ ಮತ್ತು ಟೊಮೆಟೊ ಉತ್ಪಾದನೆಯ ಅಂದಾಜು ಹೆಚ್ಚಾಗಿದೆ. ಕೃಷಿ ಸಚಿವಾಲಯದ ಮೊದಲ ಪ್ರಾಥಮಿಕ ಅಂದಾಜಿನ ಪ್ರಕಾರ, ತೋಟಗಾರಿಕಾ ಬೆಳೆಗಳ ಉತ್ಪಾದನೆಯು ಶೇಕಡಾ 0.84 ರಷ್ಟು ಏರಿಕೆಯಾಗಿ 31.33 ದಶಲಕ್ಷ ಟನ್‌ಗಳಷ್ಟು ದಾಖಲೆಯಾಗಿದೆ ಎಂದು ಅಂದಾಜಿಸಲಾಗಿದೆ. ಸಾಂಪ್ರದಾಯಿಕ ಬೆಳೆಗಳಿಗಿಂತ ತೋಟಗಾರಿಕೆ ಬೆಳೆಗಳನ್ನು ಬಿತ್ತನೆ ಮಾಡಲು ರೈತರು ಆದ್ಯತೆ ನೀಡುತ್ತಿದ್ದಾರೆ, ಅದಕ್ಕಾಗಿಯೇ ತೋಟಗಾರಿಕಾ ಬೆಳೆಗಳನ್ನು ಬಿತ್ತನೆ ಮಾಡುವುದು ಪ್ರತಿ ವರ್ಷ ಹೆಚ್ಚುತ್ತಿದೆ. ಸಚಿವಾಲಯದ ಪ್ರಕಾರ, 2019-20ರ ಕೊಯ್ಯಲಿನ ಅವಧಿಯಲ್ಲಿ ತೋಟಗಾರಿಕಾ ಬೆಳೆಗಳನ್ನು 256.1 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದ್ದು, ಇದು ಹಿಂದಿನ ವರ್ಷದ 254.3 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚಾಗಿದೆ. ತೋಟಗಾರಿಕಾ ಬೆಳೆಗಳ ಉತ್ಪಾದನೆಯು ಆಹಾರ ಧಾನ್ಯಗಳ ಉತ್ಪಾದನೆಗಿಂತ ಹೆಚ್ಚಾಗಿದೆ.
ಹಿಂದಿನ ಪ್ರಾಥಮಿಕ ಅಂದಾಜಿನ ಪ್ರಕಾರ, ಕಳೆದ ವರ್ಷ ಉತ್ಪಾದಿಸಿದ 228.2 ಲಕ್ಷ ಟನ್‌ಗಳಿಗೆ ಹೋಲಿಸಿದರೆ, 2019-20ರ ಬೆಳೆ ಹಂಗಾಮಿನಲ್ಲಿ ಈರುಳ್ಳಿ ಉತ್ಪಾದನೆಯು ಶೇಕಡಾ 7.17 ರಷ್ಟು ಹೆಚ್ಚಳಗೊಂಡು 244.5 ಲಕ್ಷ ಟನ್‌ಗಳಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆಲೂಗಡ್ಡೆ ಉತ್ಪಾದನೆಯು ಶೇಕಡಾ 3.49 ರಷ್ಟು ಹೆಚ್ಚಳವಾಗಿ 519.4 ಲಕ್ಷ ಟನ್‌ಗಳಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಅವಧಿಯಲ್ಲಿ ಟೊಮೆಟೊ ಉತ್ಪಾದನೆಯು 1.68 ರಷ್ಟು ಹೆಚ್ಚಳಗೊಂಡು 193.3 ಲಕ್ಷ ಟನ್‌ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಉತ್ಪಾದಿಸಿದ 190.1 ಲಕ್ಷ ಟನ್‌ಗಳಿಗೆ ಹೋಲಿಸಿದರೆ. ಮೂಲ - ಔಟ್‌ಲುಕ್ ಅಗ್ರಿಕಲ್ಚರ್ , 27 ಜನವರಿ 2020 ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಫೋಟೋದ ಕೆಳಗಿನ ಹಳದಿ ಹೆಬ್ಬೆರಳಿನ ಗುರುತಿನ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
64
0