AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಈರುಳ್ಳಿ ಉತ್ಪಾದನಾ ಅಂದಾಜು ಕಡಿಮೆಯಾದ ಕಾರಣ ಬೆಲೆಗಳು ಏರಿಕೆಯಾಗುತ್ತವೆ: ಕೃಷಿ ಸಚಿವರು
ಕೃಷಿ ವಾರ್ತಾಔಟ್ ಲುಕ್ ಕೃಷಿ
ಈರುಳ್ಳಿ ಉತ್ಪಾದನಾ ಅಂದಾಜು ಕಡಿಮೆಯಾದ ಕಾರಣ ಬೆಲೆಗಳು ಏರಿಕೆಯಾಗುತ್ತವೆ: ಕೃಷಿ ಸಚಿವರು
ನವದೆಹಲಿ: ಈ ವರ್ಷ ಈರುಳ್ಳಿಯ ಇಳುವರಿ 69.9 ಲಕ್ಷ ಟನ್ ಎಂದು ಅಂದಾಜಿಸಲಾಗಿದೆ ಎಂದು ಸರ್ಕಾರ ಸಂಸತ್ತಿನಲ್ಲಿ ತಿಳಿಸಿದೆ, ಆದರೆ ಬದಲಾದ ಸಂದರ್ಭಗಳಲ್ಲಿ 53.73 ಲಕ್ಷ ಟನ್ ಉತ್ಪಾದಿಸುವ ನಿರೀಕ್ಷೆಯಿದೆ. ಇದರಿಂದಾಗಿ ಬೆಲೆಗಳು ಹೆಚ್ಚಾಗಿದೆ. 15.88 ಲಕ್ಷ ಟನ್ ಈರುಳ್ಳಿಯ ಕೊರತೆಯನ್ನು ನೀಗಿಸಲು ಸರ್ಕಾರ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರರವರು ಲೋಕಸಭೆಯಲ್ಲಿ ನಡೆದ ಚರ್ಚೆಗೆ ವಿವಿಧ ಕಾರಣಗಳಿಂದಾಗಿ ಬೆಳೆಗಳಿಗೆ ಆಗಿರುವ ಹಾನಿ ಮತ್ತು ರೈತರ ಮೇಲೆ ಅದರ ಪರಿಣಾಮದ ಬಗ್ಗೆ ಉತ್ತರಿಸುತ್ತಾ ಈ ವಿಷಯ ತಿಳಿಸಿದರು. ದೇಶದಲ್ಲಿ ಈರುಳ್ಳಿ ಉತ್ಪಾದನೆಯ ಮೂರು ಹಂಗಾಮುಗಳಲ್ಲಿ ನಡೆಯುತ್ತದೆ ಎಂದು ತೋಮರ್ ಹೇಳಿದರು. ಗರಿಷ್ಠ 70 ಪ್ರತಿಶತ ರಬಿಯಲ್ಲಿ, 20 ಪ್ರತಿಶತ ಮುಂಗಾರಿನಲ್ಲಿ ಮತ್ತು 10 ಪ್ರತಿಶತ ತಡ ಮುಂಗಾರಿನಲ್ಲಿ ಉತ್ಪಾದನೆಯಾಗುತ್ತದೆ. ಮಳೆಗಾಲದ ಕೊನೆಯ ದಿನಗಳಲ್ಲಿ ಅತಿಯಾದ ಮಳೆಯಿಂದಾಗಿ ಬೆಳೆಗಳಿಗೆ ಹಾನಿಯಾಗಿದೆ ಎಂದು ಹೇಳಿದರು. ಕಿಸಾನ್ ಬೆಳೆ ವಿಮಾ ಯೋಜನೆಯಡಿ ಪಾವತಿ ಮತ್ತು ನಷ್ಟವನ್ನು ಸರಿದೂಗಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ ಮತ್ತು ರಾಜ್ಯ ವಿಪತ್ತು ಪರಿಹಾರ ಪಡೆ ಪಾವತಿಸಿದ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಮೂಲ - ಔಟ್‌ಲುಕ್ ಅಗ್ರಿಕಲ್ಚರ್, 12 ಡಿಸೆಂಬರ್ 2019 ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ,ಈ ಫೋಟೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
142
0