AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಈಜಿಪ್ಟ್‌ನಿಂದ 6,090 ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವ ಬಗ್ಗೆ ಎಂಎಂಟಿಸಿನಿಂದ ವ್ಯವಹಾರ
ಕೃಷಿ ವಾರ್ತಾಔಟ್ ಲುಕ್ ಕೃಷಿ
ಈಜಿಪ್ಟ್‌ನಿಂದ 6,090 ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳುವ ಬಗ್ಗೆ ಎಂಎಂಟಿಸಿನಿಂದ ವ್ಯವಹಾರ
ಈರುಳ್ಳಿ ಬೆಲೆಯನ್ನು ಕಡಿಮೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಟ್ವೀಟ್ ಮಾಡಿ ತಿಳಿಸಿದ್ದಾರೆ. 6,090 ಟನ್ ಈರುಳ್ಳಿ ಆಮದು ಒಪ್ಪಂದಕ್ಕೆ ಎಂಎಂಟಿಸಿ ಪ್ರವೇಶಿಸಿದೆ ಎಂದು ಅವರು ಮಾಹಿತಿ ನೀಡಿದರು. ಗ್ರಾಹಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರಾಜ್ಯ ಸರ್ಕಾರಗಳಿಂದ ಈರುಳ್ಳಿಯ ಬೇಡಿಕೆಯ ಬಗ್ಗೆ ವಿಚಾರಿಸಿದರು. ಇತ್ತೀಚೆಗೆ, 1.2 ಲಕ್ಷ ಟನ್ ಈರುಳ್ಳಿ ಆಮದು ಮಾಡಲು ಕ್ಯಾಬಿನೆಟ್ ಅನುಮತಿ ನೀಡಿದೆ. ಈಜಿಪ್ಟಿನಿಂದ 6,090 ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಎಂಎಂಟಿಸಿ ಒಪ್ಪಂದ ಮಾಡಿಕೊಂಡಿದ್ದು, ಶೀಘ್ರದಲ್ಲೇ ಮುಂಬೈ ಬಂದರಿಗೆ ತಲುಪಲಿದೆ. ಕೃಷಿ ಸಚಿವಾಲಯದ ಪ್ರಕಾರ, ಈರುಳ್ಳಿ ಬೆಳೆಗಳು ಅಕಾಲಿಕವಾದ ಮಳೆ ಮತ್ತು ಉತ್ಪಾದಿಸುವ ರಾಜ್ಯಗಳಲ್ಲಿ ಮಳೆಯ ಪ್ರವಾಹದಿಂದಾಗಿ ಭಾರಿ ನಷ್ಟವನ್ನು ಅನುಭವಿಸಿವೆ. ಈರುಳ್ಳಿ ಬೆಲೆಯನ್ನು ನಿಗ್ರಹಿಸಲು ಕೇಂದ್ರವು ಸೆಪ್ಟೆಂಬರ್ 29 ರಂದು ಆಮದು ಮಾಡಿಕೊಳ್ಳಲು ಮಿತಿಯನ್ನು ನಿಗದಿಪಡಿಸಿತ್ತು.
ರಾಷ್ಟ್ರೀಯ ತೋಟಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪ್ರಕಾರ, ಮಾರುಕಟ್ಟೆಗಳಲ್ಲಿ ಈರುಳ್ಳಿಯ ದೈನಂದಿನ ಆಗಮನ ಹೆಚ್ಚಾಗುತ್ತಿಲ್ಲ. ಮಹಾರಾಷ್ಟ್ರದ ಲಸಲ್ಗಾಂವ್ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ ರೂ.60.26 - ರೂ.75.99 ಏರಿಕೆಯಾಗಿದ್ದು, ನವೆಂಬರ್ 1 ರಂದು ಕೆ.ಜಿ.ಗೆ 47 ರೂ ಬೆಲೆಯಾಗಿತ್ತು ಮೂಲ - ಔಟ್‌ಲುಕ್ ಅಗ್ರಿಕಲ್ಚರ್, ೨೫ ನವೆಂಬರ್ ೨೦೧೯ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಈ ಫೋಟೋ ಕೆಳಗೆ ಹಳದಿ ಹೆಬ್ಬೆರಳು ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗೆ ನೀಡಿರುವ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
157
0