ಕೃಷಿ ವಾರ್ತಾಕೃಷಿ ಜಾಗರಣ್
ಈಗ ಸರ್ಕಾರವು ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯನ್ನು ಮಾಡಲಿದೆ
ನವದೆಹಲಿ: ಕೇಂದ್ರ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಸಚಿವಾಲಯವು ಮಹಾಲನೋಬಿಸ್ ರಾಷ್ಟ್ರೀಯ ಬೆಳೆ ತನಿಖಾ ಕೇಂದ್ರದ ಸಹಯೋಗದೊಂದಿಗೆ ವಿವಿಧ ರಾಜ್ಯಗಳಲ್ಲಿ ಕೃಷಿ ಬೆಳೆಗಳ ಕುರಿತು ಪ್ರಾಯೋಗಿಕ ಪ್ರಯೋಗಗಳನ್ನು ನಡೆಸಿತು. ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯಡಿ ನಡೆಸಿದ ಈ ಪ್ರಯೋಗದಲ್ಲಿ ಮುಂಗಾರು ಹಂಗಾಮಿನಲ್ಲಿ ೨೦೧೮ ಮತ್ತು ರಬ್ಬಿ ೨೦೧೯ ಹಂಗಾಮಿನಲ್ಲಿ ೮ ಸಂಸ್ಥೆಗಳು ಭಾಗವಹಿಸಿದ್ದವು.
ಈ ಪ್ರಾಯೋಗಿಕ ಅಧ್ಯಯನದ ನಂತರ, ಬೆಳೆ ಕೊಯ್ಲು ಪ್ರಯೋಗದಲ್ಲಿ, ಆಯಾ ಪ್ರದೇಶದ ಮತ್ತು ಬೆಳೆಗೆ ಅನುಗುಣವಾಗಿ ಬೆಳೆ ಕೊಯ್ಲು ಅಂದಾಜಿನ ಅಂಕಿ ಅಂಶಗಳಲ್ಲಿ ಶೇಕಡಾ ೩೦ ರಿಂದ ೭೦ ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕಂಡುಬಂದಿದೆ. ಈ ತೀರ್ಮಾನವನ್ನು ಅನುಸರಿಸಿ, ಬೆಳೆ ಕೊಯ್ಯ್ಲಿನ ಪ್ರಯೋಗಗಳಿಗಾಗಿ ದೇಶದ ೯ ರಾಜ್ಯದ ೯೩ ಜಿಲ್ಲೆಗಳಲ್ಲಿ ಸ್ಮಾರ್ಟ್ ಮಾದರಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ೨೦೧೯ ರ ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆಗೆ ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ ಉಪಗ್ರಹ ಮಾಹಿತಿಯ ಆಧಾರದ ಮೇಲೆ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ. ಒಟ್ಟು ಬೆಳೆ ಇಳುವರಿಯನ್ನು ಅಳೆಯಲು ಉಪಗ್ರಹ ಮತ್ತು ಯಂತ್ರದ ಕಲಿಕೆಯ ಸಹಾಯದಿಂದ ಸಂಖ್ಯಾಶಾಸ್ತ್ರೀಯ ವಿಧಾನಗಳನ್ನು ಬಳಸುವ ಪ್ರಯೋಗ ಯಶಸ್ವಿಯಾಗಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇಂದು ರಾಜ್ಯಸಭೆಗೆ ಮಾಹಿತಿ ನೀಡಿದರು. ಮೂಲ - ಕೃಷಿ ಜಾಗರಣ, ೨೫ ನವೆಂಬರ್ ೨೦೧೯ ಈ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ, ಈ ಫೋಟೋ ಕೆಳಗಿನ ಹಳದಿ ಹೆಬ್ಬೆರಳಿನ ಗುರುತನ್ನು ಕ್ಲಿಕ್ ಮಾಡಿ ಮತ್ತು ಕೆಳಗಿನ ಆಯ್ಕೆಗಳ ಮೂಲಕ ಅದನ್ನು ನಿಮ್ಮ ಎಲ್ಲಾ ರೈತ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
79
0
ಇತರ ಲೇಖನಗಳು