AgroStar
ಎಲ್ಲಾ ಬೆಳೆಗಳು
ಕೃಷಿ ಜ್ಞಾನ
ಕೃಷಿ ಚರ್ಚೆಗಳು
ಅಗ್ರಿ ಶಾಪ್
ಆಲೂಗೆಡ್ಡೆ ಬೆಳೆಯಲ್ಲಿ ನೀರಿನ ನಿರ್ವಹಣೆ
ಸಲಹಾ ಲೇಖನಅಗ್ರೋಸ್ಟಾರ್ ಅಗ್ರೋನೊಮಿ ಸೆಂಟರ್ ಆಫ್ ಎಕ್ಸೆಲೆನ್ಸ್
ಆಲೂಗೆಡ್ಡೆ ಬೆಳೆಯಲ್ಲಿ ನೀರಿನ ನಿರ್ವಹಣೆ
• ಮಣ್ಣಿನ ಗುಣಮಟ್ಟವನ್ನು ಅನುಗುಣವಾಗಿ ಈ ಬೆಳೆಯ ಒಟ್ಟು ನೀರಿನ ಅಗತ್ಯವು 50 ರಿಂದ 60 ಸೆಂ.ಮೀ ಆಗಿದೆ. • ಅಲ್ಪಾವಧಿಯ ಪ್ರಭೇದಗಳಿಗೆ ಕಡಿಮೆ ನೀರಿನ ಅಗತ್ಯವಿರುತ್ತದೆ ಮತ್ತು ದೀರ್ಘಾವಧಿಯ ಪ್ರಭೇದಗಳಿಗೆ ಹೆಚ್ಚು ನೀರಿನ ಅಗತ್ಯವಿರುತ್ತದೆ. ಮಣ್ಣಿನಲ್ಲಿ ಬೆಳೆಗೆ ಅವಶ್ಯಕವಾದ 60% ತೇವಾಂಶವಿದ್ದಾಗ , ಬೆಳೆಗೆ ನೀರು ಹಾಯಿಸಿ. • ಬೆಳೆಗಳ ಸೂಕ್ಷ್ಮ/ಪ್ರತಿಕ್ರಿಯಾತ್ಮಕ ಹಂತಗಳಲ್ಲಿ ನೀರು ಸರಬರಾಜು ಮಾಡಬೇಕು, ಅವುಗಳೆಂದರೆ ಸಸಿ ಆಗುವ ಹಂತ, ತೆಳುವಾದ ಕಾಂಡಗಳು ಬೆಳೆಯುವ ಹಂತ, ಅಧಿಕ ಸಂಖ್ಯೆಯಲ್ಲಿ ಗದ್ದೆಗಳು ಬೆಳೆಯುವ ಹಂತದಲ್ಲಿ. • ಮೊದಲ ನೀರನ್ನು ಲಘುವಾಗಿ ಮತ್ತು ನಾಟಿ ಮಾಡಿದ ನಂತರ 4 ರಿಂದ 7 ದಿನಗಳ ನಂತರ ನೀಡಬೇಕು. • ಆಲೂಗಡ್ಡೆ ಬೆಳೆಯುವ ಹಂತದಲ್ಲಿ ಸಾಕಷ್ಟು ನೀರನ್ನು ಹಾಯಿಸಬೇಕು. ಮಧ್ಯಮ ಮಣ್ಣಿನಲ್ಲಿ, 7 ದಿನಗಳ ಮಧ್ಯಂತರದಲ್ಲಿ 12 ಪಾಳಿ ನೀರನ್ನು ಹಾಯಿಸಬೇಕು.
• ಮಡಿ ಕಟ್ಟುವ ವಿಧಾನ ಅಥವಾ ಸ್ಪ್ರಿಂಕ್ಲರ್ ನೀರಾವರಿ ವಿಧಾನವನ್ನು ನೀರಾವರಿಗಾಗಿ ಬಳಸಬೇಕು. ಆಲೂಗಡ್ಡೆಯ ಬೇರುಗಳು ಗರಿಷ್ಟ 60 ಸೆಂ.ಮೀ ವರೆಗೆ ಮಣ್ಣಿನಲ್ಲಿ ಆಳವಾಗಿ ಹೋಗುತ್ತವೆ. ಅವುಗಳು 30 ಸೆಂ.ಮೀ. ಮೇಲಿನ ಪದರದಿಂದ ಅಂದಾಜು 70% ನಷ್ಟು ನೀರು ಹೀರಿಕೊಳ್ಳುತ್ತಾರೆ. ಉಳಿದಿರುವ 30% ನೀರು ಕೆಳ ಪದರಗಳಿಂದ ಹೀರಲ್ಪಡುತ್ತದೆ._x000D_ _x000D_ ಸಂದರ್ಭ- ಅಗ್ರೊಸ್ಟಾರ್ ಅಗ್ರೋನೋಮಿ ಸೆಂಟರ್ ಎಕ್ಸಲೆನ್ಸ್, 12 ಡಿಸೆಂಬರ್ 18.
355
5